JCI Shivamogga ಪರಿಸರ ಸಂರಕ್ಷಣೆ ಹಾಗೂ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಜೆಸಿಐ ಸಮೃದ್ಧಿ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು.
ಜೆಸಿಐ ಸಮೃದ್ಧಿ ಘಟಕದಿಂದ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿ, ಜೆಸಿಐ ಸಂಸ್ಥೆ ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಆರೋಗ್ಯ, ಶಿಕ್ಷಣ, ಪರಿಸರ ಕುರಿತ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಸ್ವಚ್ಚ ಪರಿಸರ ನಿರ್ಮಾಣ ಮಾಡುವಲ್ಲಿ ಎಲ್ಲರ ಸಹಕಾರ ಮುಖ್ಯ ಎಂದು ತಿಳಿಸಿದರು.
ಜೆಸಿಐ ಸಮೃದ್ಧಿ ಘಟಕದ ಎಲ್ಲ ಪದಾಧಿಕಾರಿಗಳು ತುಂಗಾ ನದಿ ದಡದ ಭೀಮೇಶ್ವರ ದೇವಸ್ಥಾನದ ಬಳಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಪ್ರದೇಶದಲ್ಲಿ ಪ್ರತಿನಿತ್ಯ ನೂರಾರು ಜನರು ಬಂದು ಹೋಗುವುದರಿಂದ ಜತೆಗೆ ಮಳೆ ಜಾಸ್ತಿ ಆಗಿರುವುದರಿಂದ ನದಿಯ ದಡದ ಸುತ್ತಮುತ್ತ ಗಿಡಗಳು, ಹುಲ್ಲುಗಳು ಬೆಳೆದಿರುವುದು ಮತ್ತು ಪೇಪರ್ ಪ್ಲಾಸ್ಟಿಕ್, ಕಸ, ಕೆಸರು ತುಂಬಿಕೊಂಡಿತ್ತು. ಇದನ್ನು ಸಮೃದ್ಧಿ ಘಟಕದ ಪದಾಧಿಕಾರಿಗಳು ಸ್ವಚ್ಛಗೊಳಿಸಿದರು.
JCI Shivamogga ಜೆಸಿಐ ಸಮೃದ್ಧಿ ಘಟಕದ ಕಾರ್ಯದರ್ಶಿ ಗಾಯತ್ರಿ ಯಲ್ಲಪ್ಪಗೌಡ, ಅಶ್ವಿನಿ, ಕವಿತಾ, ನರಸಮ್ಮ, ಶಶಿಕಲಾ, ಸರಳಾ ವಾಸನ್, ಅನಿತಾ ಸಿರಿಲ್, ಮೀನಾ, ಮಾಲಾ, ಮಂಜುಳಾ, ಅನ್ನಪೂರ್ಣ, ಪುಷ್ಪ, ಶಾಂತಮ್ಮ, ದೀಕ್ಷಿತ್, ಕಿಶನ್, ಮತ್ತು ಬಿ.ಎಂ ಯಲ್ಲಪ್ಪಗೌಡ ಮುಂತಾದವರು ಹಾಜರಿದ್ದರು.
