Ramakrishna College ಶಿವಮೊಗ್ಗ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ, ಪ್ರಾಥಮಿಕ ಬಾಲಕ ಬಾಲಕಿಯರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದ ಕಬ್ಬಡಿ ಆಟದಲ್ಲಿ ಮಕ್ಕಳು ಪ್ರಥಮ ಸ್ಥಾನ ಪಡೆದಿರುತ್ತಾರೆ.
ಇನ್ಪಾಂಟ್ ಜೀಸಸ್ ಶಾಲೆಯ ಮುಖ್ಯ ಶಿಕ್ಷಕರು ಮೆಡಲ್ ಹಾಗೂ ಟ್ರೋಫಿ ವಿತರಿಸಿದರು.
ರಾಮಕೃಷ್ಣ ವಿದ್ಯಾಸಂಸ್ಥೆ ಯ ಕಾರ್ಯದರ್ಶಿ ಶೋಭಾ ವೆಂಕಟರಮಣ ಸಾಧಕ ಮಕ್ಕಳನ್ನು, ಶಿಕ್ಷಕರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ರಾಮಕೃಷ್ಣ ಶಾಲೆಯ ಮುಖ್ಯ ಶಿಕ್ಷಕ ರಮೇಶ್, ಮುಖ್ಯ ಶಿಕ್ಷಕಿ ಅಶ್ವಿನಿ, ದೈಹಿಕ ಶಿಕ್ಷಕ ರಾಘವೇಂದ್ರ ಹಾಗೂ ಇತರರಿದ್ದರು.
