Kote Sri Marikamba Temple ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದ ಸಮೀಪ ಶ್ರೀ ವಿದ್ಯಾಗಣಪತಿ ಸಂಗೀತ ಸಭಾದಲ್ಲಿ ಸೆ.3ರಂದು ಸಂಜೆ 5.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಯುವ ಗಾಯಕಿ ನಿವೇದಿತಾ ವಿಕಾಸ್ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು.
ಉಸ್ತಾದ್ ಹುಮಾಯೂನ್ ಹರ್ಲಾಪುರ, ವಿದ್ವಾನ್ ವಿನಾಯಕ್ ಭಟ್ ಸಹಕಾರ ನೀಡುವರು. ನಿವೇದಿತಾ ವಿಕಾಸ್ ಅವರು ಹುಮಾಯೂನ್ ಹರ್ಲಾಪುರ ಅವರ ಶಿಷ್ಯೆ. ರಾಜ್ಯದ ವಿವಿಧೆಡೆಗಳಲ್ಲಿ ನಡೆದಿರುವ ಕಾರ್ಯಕ್ರಮಗಳಲ್ಲಿ ಸಂಗೀತ ಸೇವೆ ಸಲ್ಲಿಸಿದ್ದಾರೆ.
Kote Sri Marikamba Temple ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. ಶಿವಮೊಗ್ಗದ ರಾಜಶೇಖರ್ ಮತ್ತು ವಿಶಾಲಾಕ್ಷಿ ದಂಪತಿ ಪುತ್ರಿ. ನಿವೇದಿತಾ ಅವರು ಪತಿ ವಿಕಾಸ್ ಅವರೊಂದಿಗೆ ಮಂತ್ರ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ನಡೆಸುತ್ತಿದ್ದಾರೆ.
