Shivamogga Police ಶಿಕಾರಿಪುರ ಡಿ.17, 2024 ರಂದು ಶಿಕಾರಿಪುರ-ಹೊನ್ನಾಳಿ ರಸ್ತೆಯಲ್ಲಿ ಶಿಕಾರಿಪುರದ ಕಡೆಯಿಂದ ಅತಿವೇಗವಾಗಿ ಬಂದ ವಾಹನವು ನಡೆದುಕೊಂಡು ಹೋಗುತ್ತಿದ ಮಹಿಳೆಗೆ ಡಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸದೇ ಹೋಗಿದ್ದು, ಮಹಿಳೆಗೆ ತೀವ್ರತರವಾದ ಗಾಯಗಳಾಗಿದ್ದನ್ನು ಗಮನಿಸಿದ ಸಾರ್ವಜನಿಕರು 108 ಆಂಬುಲೆನ್ಸ್ ಮೂಲಕ ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಅಲ್ಲಿನ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಫೆ. 16 ರಂದು ಮೃತಪಟ್ಟಿರುತ್ತಾರೆ.
ಈ ಮಹಿಳೆಯ ಹೆಸರು, ವಿಳಾಸ, ವಾರಸುದಾರರ ಬಗ್ಗೆ ಯಾವುದೇ ಸುಳಿವು ದೊರೆತಿರುವುದಿಲ್ಲ.
ಆದ್ದರಿಂದ ಶಿವಮೊಗ್ಗ ಮಹಾನಗರ ಪಾಲಿಕೆ ಶರಾವತಿ ಕಾಲೋನಿಯ ಹಿಂದು ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಲಾಗಿರುತ್ತದೆ.
ಈ ಮೃತ ಮಹಿಳೆಯ ಚಹರೆ 45-50 ವರ್ಷ ವಯಸ್ಸು, ಕೋಲುಮುಖ, ತೆಳುವಾದ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿರುತ್ತಾರೆ. ಈಕೆ ಮೈಮೇಲೆ ಹಳದಿ ಹೂಗಳಿರುವ ನೀಲಿಬಣ್ಣದ ನೈಟಿ ಧರಿಸಿರುತ್ತಾರೆ.
Shivamogga Police ಕುತ್ತಿಗೆಯ ಬಲಭಾಗದಲ್ಲಿ ಕಪ್ಪು ಮಚ್ಚೆ ಇರುತ್ತದೆ.
ಈಕೆಯ ವಾರಸ್ಸುದಾರರಿದ್ದಲ್ಲಿ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ:08187-223430, 9480803366 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.
