Rotary Shimoga ಪ್ರತಿಯೊಂದು ಸಂಘ ಸಂಸ್ಥೆಗಳು ಸದೃಢವಾಗಿರಲು ಸದಸ್ಯರ ಪಾತ್ರ ಬಹಳ ಪ್ರಮುಖ. ಸಂಘ ಸಂಸ್ಥೆ ಮುನ್ನಡೆಸುವವರಿಗೆ ನಾಯಕತ್ವದ ಗುಣ, ಸನ್ನಡತೆ, ಸಂಸ್ಕೃತಿ ಮತ್ತು ಸಹನೆ ಅವಶ್ಯಕ ಎಂದು ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಗಿರೀಶ್ ಪಟೇಲ್ ಹೇಳಿದರು.
ರಾಜೇಂದ್ರ ನಗರದ ರೋಟರಿ ಶಿವಮೊಗ್ಗ ಪೂರ್ವದ ಸಭಾಂಗಣದಲ್ಲಿ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘ ಸಂಸ್ಥೆಗಳಲ್ಲಿ ಸದಸ್ಯರ ಸಕ್ರಿಯ ಪಾತ್ರ, ಕ್ರಿಯಾಶೀಲತೆ ಮತ್ತು ಪ್ರಾಮಾಣಿಕತೆ ಸಂಘ ಸಂಸ್ಥೆಗಳ ಸಂಘಟನೆಯಲ್ಲಿ ತುಂಬಾ ಮುಖ್ಯ ಎಂದು ತಿಳಿಸಿದರು.
ರೋಟರಿ ಸಂಸ್ಥೆಯು ಸೇವಾ ಉದ್ದೇಶಕ್ಕಾಗಿ ಆರಂಭಗೊಂಡಿದ್ದು, 220 ದೇಶಗಳಲ್ಲಿ ಸೇವೆ ಮಾಡುವ ಮೂಲಕ ರೋಟರಿ ಸಂಸ್ಥೆ ಸಕ್ರಿಯವಾಗಿದೆ. ರೋಟರಿ ಸಂಸ್ಥೆಗಳಿಂದ ಸಂಪರ್ಕ ಕೌಶಲ್ಯ ಹೊಂದಲು ತುಂಬ ಸಹಾಯವಾಗುತ್ತದೆ. ಇದರಿಂದ ದೀರ್ಘಕಾಲದವರೆಗೆ ಸಂಘ ಸಂಸ್ಥೆಗಳು ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್ ಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯು ಜೀವನ ಕೌಶಲ್ಯ, ಓಡನಾಟ ಹಾಗೂ ಸೇವೆಯ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಜನ ರೋಟರಿ ಸಂಸ್ಥೆಗೆ ಸೇರಬೇಕು. ಸಮಾಜಮುಖಿ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದರು.
Rotary Shimoga ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ.ಬಿ.ಆರ್., ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್, ಚಂದ್ರಹಾಸ ರಾಯ್ಕರ್, ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಮಾಜಿ ಅಧ್ಯಕ್ಷ ಅರುಣ್ ದೀಕ್ಷಿತ್, ಡಾ. ಗುಡದಪ್ಪ ಕಸಬಿ, ಶ್ರೀಕಾಂತ್, ಗಣೇಶ್, ಮಹೇಶ್, ಪ್ರತಾಪ್ ಮೋರೆ, ವೀಣಾ ಕಿಶೋರ್, ಮನೋಹರ, ಮಹಾದೇವ ಸ್ವಾಮಿ ಹಾಗೂ ಹೊಸ ಸದಸ್ಯರು ಉಪಸ್ಥಿತರಿದ್ದರು.
