Dr. Mallikarjuna Murugarajendrasri ಶ್ರೀ ಶಿವಗಂಗಾ ಯೋಗ ಕೇಂದ್ರದ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಶ್ರೀ ಸಿ.ವಿ. ರುದ್ರಾರಾಧ್ಯರ ಜನುಮದಿನದ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿ ಶುಭ ಕೋರಿ ಆಶೀರ್ವದಿಸಿದ ಯೋಗ ಕೇಂದ್ರದ ಮಹಾ ಪೋಷಕರಾದ ಪೂಜ್ಯ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡುತ್ತಾ ಭಗವಂತ ನಮಗಾಗಿ ಪ್ರಕೃತಿ ಪ್ರಪಂಚ ಜೀವಿಗಳನ್ನು ಸೃಷ್ಟಿ ಮಾಡಿದ್ದಾನೆ. ಮನುಷ್ಯ ಜನುಮದ ಹುಟ್ಟಿಗೆ ಕಾರಣನೂ ಭಗವಂತನೇ. ದೇವರು ನೀಡಿದ ಈ ಜೀವನದಲ್ಲಿ ಹುಟ್ಟು ಸಾವಿನ ಬಗ್ಗೆ ಚಿಂತನೆ ಮಾಡಬಾರದು. ಎರಡರ ಮಧ್ಯೆ ಇರುವ ಜೀವನವನ್ನು ವ್ಯರ್ಥವಾಗಿ ಕಳೆದುಕೊಳ್ಳುತ್ತಿದ್ದೇವೆ. ಬದಲಾಗಿ ಶಾಶ್ವತವಾದ ಸತ್ಯದ ಬದುಕಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಇಹಲೋಕದ ಬದುಕಿಗೆ ಮರ್ತ್ಯ ಲೋಕವೆಂಬದು ಕರ್ತಾರನ ಕಮ್ಮಟವಯ್ಯ. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು. ಇಲ್ಲಿ ಸಲ್ಲದವರು ಎಲ್ಲಿಯೂ ಸಲ್ಲರು. ಕರ್ತಾರನ ಕಮ್ಮಟವೆಂದರೆ ಭಗವಂತನ ಸೃಷ್ಟಿ. ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದವರೊಂದಿಗೆ ಜೀವನವನ್ನು ಸಾರ್ಥಕ್ಯ ಗೊಳಿಸಿಕೊಳ್ಳಬೇಕು ಎಂದರು.
ಆ ದೃಷ್ಟಿಯಲ್ಲಿ ಶ್ರೀ ರುದ್ರಾರಾಧ್ಯರಿಗೆ ಅವರ ತಂದೆ ತಾಯಿಯವರು ನೀಡಿದ ಸಂಸ್ಕಾರ ಅವರೊಂದಿಗೆ ಸಮ್ಮೇಳಿತಗೊಂಡಿದೆ. ಜೊತೆಯಾಗಿ ಬೆಂಬಲವಾಗಿ ನಿಂತವರು ಅವರ ಸಂಗಾತಿ ಶ್ರೀಮತಿ ಅನ್ನಪೂರ್ಣ ರವರ ತ್ಯಾಗ ಬಹಳ ದೊಡ್ಡದು. ಮತ್ತು ಸದಾ ಬೆಂಬಲವಾಗಿರುವ ಯೋಗ ಶಿಕ್ಷಕರು ವಿಶ್ವಸ್ಥ ಮಂಡಳಿ ಸದಸ್ಯರು ಮತ್ತು ಆರಂಭದಿಂದಲೂ ಯೋಗ ಸಂಸ್ಥೆಯ ಬೆಳವಣಿಗೆಯಲ್ಲಿ ಶ್ರೀ ಕೆ. ಎಸ್.ಈಶ್ವರಪ್ಪನವರ ಕೊಡುಗೆಯನ್ನು ನೆನಪು ಮಾಡಿಕೊಂಡರು.
ಸಮಾಜವನ್ನು ಬೆಳೆಸಿ ಆರೋಗ್ಯ ಸೇವೆಯಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರವು ಇನ್ನೂ ಬೆಳೆದು ಸಾರ್ವಜನಿಕರ ಜೀವನ ಮತ್ತು ಆರೋಗ್ಯವನ್ನು ವೃದ್ಧಿಸು ವಂತವರಾಗಲಿ. ಆರೋಗ್ಯ ಭಾಗ್ಯವನ್ನು ದಯಪಾಲಿಸುವಂತ ಶಕ್ತಿಯನ್ನು ಭಗವಂತೆ ನೀಡಲಿ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಎಸ್. ರುದ್ರೇಗೌಡರು ಯೋಗ ಕೇಂದ್ರದ ಒಳ್ಳೆಯ ಕೆಲಸ ಕಾರ್ಯಗಳಿಗೆ ಆಡಳಿತ ಮಂಡಳಿ ಸದಾ ಬೆಂಬಲವನ್ನು ನೀಡುತ್ತದೆ ಎಂದು ತಿಳಿಸಿದರು.
ಇದೀಗ ತಾನೇ 75ರ ವಸಂತ ಪೂರೈಸಿದ ಸ್ವಾಮೀಜಿಯವರಿಗೆ ಅಭಿನಂದಿಸಿ ಗೌರವ ಸಲ್ಲಿಸಲಾಯಿತು.
Dr. Mallikarjuna Murugarajendrasri ವೇದಿಕೆಯಲ್ಲಿ ಯೋಗಾಚಾರ್ಯ ಶ್ರೀ ಸಿ. ವಿ.ರುದ್ರಾರಾಧ್ಯ,ಮಾಜಿ ಉಪ ಮುಖ್ಯಮಂತ್ರಿ ಶ್ರೀ ಕೆ.ಎಸ್. ಈಶ್ವರಪ್ಪ. ಖಜಾಂಚಿ ಹೊಸತೋಟ ಸೂರ್ಯನಾರಾಯಣ, ಎಸ್ ಎಸ್ ಜ್ಯೋತಿ ಪ್ರಕಾಶ್. ಪೋಷಕ ಸದಸ್ಯರಾದರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಎಸ್ ಷಡಾಕ್ಷರಿ, ವಿಶ್ವಸ್ಥ ಮಂಡಳಿ ಸದಸ್ಯರಾದ ಕೆ.ಇ. ಕಾಂತೇಶ್ , ಹಾಲಪ್ಪನವರು , ಉಪಸ್ಥಿತರಿದ್ದರು. ಪೋಷಕ ಸದಸ್ಯರಾದ ಶ್ರೀ ಎಸ್ ಡಿ ದೇವೇಂದ್ರ, ಪರಮೇಶ್, ಮನು ಕುಮಾರ್, ಸುರೇಶ್ ಉಪಸ್ಥಿತರಿದ್ದರು. ಡಾ. ಗಾಯಿತ್ರಿ ದೇವಿ ಸಜ್ಜನ್ರವರು ಶ್ರೀ ರುದ್ರಾರಾಧ್ಯರರ ಸೇವೆಯನ್ನು ಕುರಿತು ಮಾತನಾಡಿದರು. ಶ್ರೀ ತೀರ್ಥಪ್ರಸಾದ್ ಸ್ವರಚಿತ ಗೀತೆಯನ್ನು ಹಾಡಿದರು. ಶ್ರೀ ಸಂತೋಷ್ ಬಿದರಗದ್ದೆ ಕವನ ವಾಚಿಸಿದರು. ಜಿಎಸ್ ಓಂಕಾರ್ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ವಿಜಯ ಬಾಯರವರಿಂದ ನಿರೂಪಣೆ. ಶ್ರೀ ಜಗದೀಶ್ ರವರು ವಂದಿಸಿದರು.
