Keladi Shivappa Nayaka University of Agricultural and Horticultural Sciences ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ವಿಸ್ತರಣಾ ನಿರ್ದೇಶನಾಲಯ, ರೈತರ ತರಬೇತಿ ಸಂಸ್ಥೆಯು “ಸಾಂಬಾರು ಬೆಳೆಗಳಾದ ಏಲಕ್ಕಿ ಮತ್ತು ಜಾಯಿಕಾಯಿ ಕೃಷಿ”
ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ.
ಈ ಕಾರ್ಯಕ್ರಮವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ರೈತರ ತರಬೇತಿ ಸಂಸ್ಥೆ, ವರದಾ ಬ್ಲಾಕ್ ನ ಎರಡನೇ ಮಹಡಿ, ಇರುವಕ್ಕಿ ಯಲ್ಲಿ ದಿನಾಂಕ:02.09.2025 ರ ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಗುತ್ತದೆ.
ಆದುದರಿಂದ ಆಸಕ್ತ ರೈತರು ಮತ್ತು ರೈತ ಮಹಿಳೆಯರು, ರೈತರ ತರಬೇತಿ ಸಂಸ್ಥೆಯ ಸಿಬ್ಬಂದಿಯವರಿಗೆ ಫೋನ್ ಮುಖಾಂತರ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈ ತರಬೇತಿ ಕಾರ್ಯಕ್ರಮವು ಉಚಿತವಾಗಿರುತ್ತದೆ.
ನೋಂದಣಿ ಮಾಡಿಕೊಳ್ಳಲು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು 9958324261/ 6363725298 / 9448312978
