Rotary Club Shimoga ಜೀವ ಉಳಿಸುವ ರಕ್ತದಾನವು ಅತ್ಯಂತ ಶ್ರೇಷ್ಠ ಕಾರ್ಯವಾಗಿದ್ದು, ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್, ಸುಬ್ಬಯ್ಯ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸಹಯೋಗದಲ್ಲಿ ಕೃಷಿ ನಗರದ ರಿವರ್ ಸೈಡ್ ಭವನದಲ್ಲಿ ಆಯೋಜಿಸಿದ್ದ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದ್ದು, ರಕ್ತದಾನದ ಮಹತ್ವಗಳನ್ನು ಅರಿತುಕೊಳ್ಳಬೇಕು. ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.
150ಕ್ಕೂ ಹೆಚ್ಚು ಜನರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ತರಂಗ ಶಾಲೆಯ ಮಕ್ಕಳು, ಶಿಕ್ಷಕರು ಆರೋಗ್ಯ ತಪಾಸಣೆ ಮಾಡಿಸಿದ್ದು, ಅವರಿಗೆ ಬ್ಲಡ್ ಗ್ರೂಪ್ ಐಡಿ ಕಾರ್ಡ್ ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ರೋಗಿಗಳಿಗೆ ವೈದ್ಯರ ಸಲಹೆ ಮೇರೆಗೆ ಇಸಿಜಿ, ಬಿಪಿ, ಶುಗರ್ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಯಿತು.
ಮಧುಮೇಹ, ಹೃದಯ ಕಾಯಿಲೆ, ಕಾಲು ಮೂಳೆ, ಕೀಲು ನೋವು, ಕಿವಿ, ಮೂಗು, ಗಂಟಲು, ಕಣ್ಣು, ದಂತ, ಪ್ರಸೂತಿ, ಸ್ತ್ರೀರೋಗ, ಮಕ್ಕಳ ತಜ್ಞರು ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದ್ದರು.
Rotary Club Shimoga ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮುಖ್ಯ ಡೀನ್ ಡಾ. ವಿನಾಯಕ. ಈ, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಕಾಂತರಾಜ್, ರೋಟರಿ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಜೋನಲ್ ಲೆಫ್ಟಿನೆಂಟ್ ಎಸ್.ಪಿ.ಶಂಕರ್, ಎಂ.ಪಿ.ಆನಂದ್ ಮೂರ್ತಿ, ನವಲೆ ಈಶ್ವರಪ್ಪ, ನಟರಾಜ್, ದ್ವಾರಕನಾಥ್, ಎಂ.ಆರ್.ಬಸವರಾಜ್, ನಿತಿನ್ ಯಾದವ್, ಎಂ.ನಾಗರಾಜ್, ಎಚ್.ಸಿ.ಯೋಗೇಶ್, ಪ್ರತಾಪ್, ರಾಕೇಶ್, ಎಂ.ಎಂ.ರವಿ, ರಾಜೇಂದ್ರ ಕುಮಾರ್, ನಿರಂಜನ್ ಮೂರ್ತಿ ಹಾಗೂ ಇನ್ನರ್ ವೀಲ್ ಪದಾಧಿಕಾರಿಗಳು ಹಾಜರಿದ್ದರು.
