Linganamakki Dam ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಲಿಂಗನಮಕ್ಕಿ ಡ್ಯಾಮ್ ಎಲ್ಲ ಗೇಟ್ ಓಪನ್ ಮಾಡಲಾಗಿದ್ದು , ಜೋಗದ ಲುಕ್ ಬದಲಾಗಿದೆ.
ಶರಾವತಿ ನದಿಯಲ್ಲಿ ಪುನಃ ನೀರಿನ ಹರಿವು ಹೆಚ್ಚಾಗಿದ್ದು,
ಲಿಂಗನಮಕ್ಕಿ ಜಲಾಶಯಕ್ಕೆ 47,232 ಕ್ಯೂಸೆಕ್ ಒಳ ಹರಿವು ಬಂದಿದೆ.
ಈಗಾಗಲೆ ಜಲಾಶಯ ಭರ್ತಿ ಆಗಿರುವುದರಿಂದ ಎಲ್ಲ ರೇಡಿಯಲ್ ಗೇಟುಗಳನ್ನು ಓಪನ್ ಮಾಡಲಾಗಿದೆ.
ಜೋಗದ ಎಲ್ಲ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಿವೆ.
ಇದರಿಂದ ಜೋಗ ಜಲಪಾತದ ಚಹರೆ ಬದಲಾಗಿದೆ.
Linganamakki Dam ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ
