Mr. K.C. Veerendra ಚಿತ್ರದುರ್ಗದ ಶಾಸಕ ಶ್ರೀಕೆ.ಸಿ.ವೀರೆಂದ್ರ ಪಪ್ಪಿ ಈಗ ಸುದ್ದಿಯಲ್ಲಿದ್ದಾರೆ.
ಅದೂ ಭರ್ಜರಿ “ಇಡಿ ” ದಾಳಿಗೆ ಸಿಲುಕಿದ ಭಾರಿ ಮಿಕ ಆಗಿದ್ದಾರೆ. ಶಾಸಕರ ಮೇಲಿನ ದಾಳಿ ಇಂದು ಹೊಸದಲ್ಲ.
ನಮ್ಮಿಂದ ಆರಿಸಿ ಬಂದ ಜನಪ್ರತಿನಿಧಿಗಳು , ಚುನಾವಣೆಗೆ ಮುಂಚೆಯೇ ಕೆಲವರು ಹಣದ ಥೈಲಿ ಹಿಡಿದೇ ರಾಜಕೀಯ ಪಕ್ಷಗಳ ಬಾಗಿಲು ತಟ್ಟುತ್ತಾರೆ.
ಅನಿವಾರ್ಯ ಪಕ್ಷಗಳು ಇಡುಗಂಟು ಸ್ವೀಕರಿಸಿ ಸ್ಪರ್ಧೆಗೆ ಟಿಕೆಟ್ ನೀಡುತ್ತವೆ. ಇದು ಎಲ್ಲ ರಾಜಕೀಯ ಪಕ್ಷಗಳ ಸಾಮಾನ್ಯ ನಡವಳಿಕೆ.
ಜೂಜು ಅಡ್ಡೆ ( ಕ್ಯಾಸಿನೊ) ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವ್ಯವಹಾರದ ₹12 ಕೋಟಿ ನಗದು ಪತ್ತೆಯಾಗಿದೆ. ಗ್ಯಾರಂಟಿಗಾಗಿ ಅವರದೇ ಪಕ್ಷ ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ. ಈ ಶಾಸಕರ ಬಳಿಯ ಹಣದಿಂದ ಇಡೀ ಚಿತ್ರದುರ್ಗ ತಾಲ್ಲೂಕನ್ನೇ ಉದ್ಧಾರ ಮಾಡಬಹುದು. ಇನ್ನು ಆಭರಣಗಳಂತೂ ಆರು ಕೋಟಿ ರೂ ಮೌಲ್ಯ.
Mr. K.C. Veerendra ಸಂಪಾದನೆ ಅವರವರ ಸಾಮರ್ಥ್ಯಕ್ಕೆ ಸೇರಿದೆ. ಆದರೆ ಜನಪ್ರತಿನಿಧಿಗಳಾಗಿ ಐಷಾರಾಮಿಗಳಾಗಿದ್ದರೆ
ಜನಮನದಲ್ಲಿ ನಿಲ್ಲುತ್ತಾರೆಯೆ? . ಸರಳತೆ, ಪ್ರಾಮಾಣಿಕತೆ, ಮತ್ತು ಉಪಕಾರಿ ಮನೋಭಾವಕ್ಕೆ ಅವರಲ್ಲಿ ಆದ್ಯತೆ ಸಿಗುತ್ತದೆ ಎಂಬುದು ಅನುಮಾನಾಸ್ಪದ ವಿಚಾರ.
Mr. K.C. Veerendra ಜನಪ್ರತಿಧಿಗಳೋ? ಧನ ಪ್ರತಿನಿಧಿಗಳೋ?
Date:
