Sharavathi Pumped Storage Project ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನ ಹೇಮಾಪುರ ಮಹಾ ಪೀಠ ಶ್ರೀ ಕ್ಷೇತ್ರ ಬಂಗಾರ ಮಕ್ಕಿ ಇದರ ಆಶ್ರಯದಲ್ಲಿ ಶ್ರೀ ಶ್ರೀ ಮಾರುತಿ ಗುರೂಜಿಯವರ ಅಧ್ಯಕ್ಷತೆಯಲ್ಲಿ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕುರಿತು ಸಾರ್ವಜನಿಕ ಸಭೆಯನ್ನು ದಿನಾಂಕ 24 ಆಗಸ್ಟ್ 2025ರಂದು ಆಯೋಜಿಸಲಾಗಿತ್ತು. ನಾಡಿನ ಹೆಸರಾಂತ ಪರಿಸರವಾದಿಗಳು ವಿಜ್ಞಾನಿಗಳು ಸಂಶೋಧಕರು ಮುಂತಾದವರು ಆಗಮಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಅವರುಗಳಲ್ಲಿ ಪ್ರಮುಖರೆಂದರೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಡಾಕ್ಟರ್ ಟಿವಿ ರಾಮಚಂದ್ರ ಡಾಕ್ಟರ್ ಎಲ್ ಕೆ ಶ್ರೀಪತಿ ಗಿರೀಶ್ ಜನ್ನೇ ಶಿವಾನಂದ ಕಳವೆ ಅಖಿಲೇಶ್ ಚೀಪ್ಳಿ ಗುರು ಪ್ರಸಾದ್ ರವಿ ಹೆಗಡೆ ಡಾಕ್ಟರ್ ಎಸ್ ಜಿ ಸಾಮಕ್ ಹರತಾಳು ಹಾಲಪ್ಪ ಮುಂತಾದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. Sharavathi Pumped Storage Project ಈ ಯೋಜನೆ ಅನುಷ್ಠಾನಗೊಂಡಲ್ಲಿ ಪರಿಸರ ಜೀವ ವೈವಿಧ್ಯತೆ ಹಾಗೂ ಕಾಡು ನಾಶವಾಗುವುದು ಖಚಿತವಾದ ಕಾರಣ ಯಾವುದೇ ಕಾರಣಕ್ಕೂ ಈ ಯೋಜನೆ ಅನುಷ್ಠಾನಕ್ಕೆ ಬರಲು ಬಿಡಬಾರದೆಂ ಬುದು ಎಂಬುದು ಎಲ್ಲರ ಒಕ್ಕೊರಳಿನ ಅಭಿಪ್ರಾಯವಾಗಿತ್ತು. ಡಾಕ್ಟರ್ ಎಸ್ ಜಿ ಸಾಮತ್ ಅವರು ಪರಿಸರದ ಜೊತೆಗೆ ಇತಿಹಾಸವು ಕೂಡ ನಾಶವಾಗುವ ಸಾಧ್ಯತೆಯನ್ನು ವಿವರಿಸಿದರು.
Sharavathi Pumped Storage Project ಪರಿಸರ ನಾಶವಾದರೆ ಇತಿಹಾಸವೂ ನಾಶ – ಡಾ.ಎಸ್.ಜಿ.ಸಾಮಕ್
Date:
