B.Y.Raghavendra ದೇಶದ ಅಗ್ರಮಾನ್ಯ ಪವಿತ್ರ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೆಲೆಸಿ ಕೋಟ್ಯಾಂತರ ಭಕ್ತರ ಕಷ್ಟಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸುತ್ತಿರುವ ಶ್ರೀ ಮಂಜುನಾಥ ಸ್ವಾಮಿಯ ಧರ್ಮದ ನೆಲೆಬೀಡಿನ ಮೇಲೆ ಕಳಂಕ ತರಲು ಪಟ್ಟಬದ್ಧ ಹಿತಾಸಕ್ತಿಗಳು ಮತ್ತು ಹಿಂದೂ ವಿರೋಧಿ ಶಕ್ತಿಗಳು ವ್ಯವಸ್ಥಿತವಾಗಿ ರೂಪಿಸಿರುವ ಷಡ್ಯಂತ್ರದ ವಿರುದ್ಧ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಅಪಪ್ರಚಾರಕ್ಕೆ ಯಾವುದೇ ರೀತಿಯ ಕಠಿಣ ಕ್ರಮಕೈಗೊಳ್ಳದೆ ಕುಮ್ಮಕ್ಕು ನೀಡುತ್ತಿರುವುದರ ವಿರುದ್ಧ ರಾಜ್ಯ ಬಿಜೆಪಿ ಕರೆಯ ಮೇರೆಗೆ ಬಿಜೆಪಿ ಶಿವಮೊಗ್ಗ ವತಿಯಿಂದ ಇಂದು ಹಮ್ಮಿಕೊಂಡಿದ್ದ ಆಕ್ರೋಶ ಭರಿತ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಿದ್ದರು.
ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಗಾಂಧಿ ಬಜಾರ್ ಮಾರ್ಗವಾಗಿ ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ಗೋಪಿ ವೃತ್ತ ತಲುಪಿ ಆಯೋಜಿಸಲಾಗಿದ್ದ ಬಹಿರಂಗ
ಸಭೆಯಲ್ಲಿ ಶ್ರೀಕ್ಷೇತ್ರಕ್ಕೆ ಹಾಗೂ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಉಂಟು ಮಾಡುವ ವ್ಯವಸ್ಥಿತ ಸಂಚಿನ ವಿರುದ್ಧ ತಕ್ಷಣವೇ ಇದರ ಹಿಂದೆ ಇರುವ ಎಲ್ಲಾ ಕೆಟ್ಟ ಶಕ್ತಿಗಳನ್ನು ರಾಜ್ಯ ಸರ್ಕಾರ ಎಡೆಮುರಿ ಕಟ್ಟಿ ಅತ್ಯಂತ ಕಠಿಣ ಕಾನೂನು ಕ್ರಮಕ್ಕೆ ಗುರಿಪಡಿಸಿ ಎಂದು ಸಂಸದ ರಾಘವೇಂದ್ರ ಆಗ್ರಹ ಪಡಿಸಿದರು.
B.Y.Raghavendra ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಚನ್ನಬಸಪ್ಪ ಅವರು, ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರು, ನಗರಾಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ ಅವರು, ಮಾಜಿ ಶಾಸಕರಾದ ಶ್ರೀ ಸಿದ್ದರಾಮಣ್ಣ ಅವರು, ಮುಖಂಡರಾದ ಶ್ರೀ ಜ್ಯೋತಿ ಪ್ರಕಾಶ್ ಅವರು, ಶ್ರೀ ಜ್ಞಾನೇಶ್ವರ ಅವರು ಸೇರಿದಂತೆ ಅನೇಕ ಹಿರಿಯರು, ಗಣ್ಯರು ಉಪಸ್ಥಿತರಿದ್ದರು.
