Friday, December 5, 2025
Friday, December 5, 2025

Karnataka Sanga Shivamogga ಯುವಜನರಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ. ಕಾರ್ಯಾಗಾರಗಳ ಮೂಲಕ ಆಸಕ್ತಿ ಹೆಚ್ಚಿಸಬೇಕು- ಪ್ರೊ.ಶಂಕರನಾರಾಯಣ ಶಾಸ್ತ್ರಿ

Date:

Karnataka Sanga Shivamogga ಯುವಕರಲ್ಲಿ ಸಾಹಿತ್ಯದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎನ್ನುತ್ತಾರೆ. ಆದ್ದರಿಂದ ಈ ದಿನ ಕರ್ನಾಟಕ ಸಂಘ ‘ಕಥೆ/ಕವನ ಸೃಜಿಸುವ ಬಗೆ…ಹೇಗೆ?!’ ಕಾರ್ಯಾಗಾರ ಉದ್ಘಾಟಿಸಿದ ಪ್ರೋ.ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಮಾತನಾಡುತ್ತಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವ ವಸುಧೇಂದ್ರ, ಡಾ.ತಾರಿಣಿ ಶುಭದಾಯಿನಿ ಇವರು ಅತ್ಯಂತ ಹೆಸರು ಗಳಿಸಿರುವವರು. ಈಗಾಗಲೇ ಹಲವಾರು ಕಾರ್ಯಕ್ರಮ ಆಯೋಜಿಸಿ ಯಶಸ್ವಿ ಯಾದವರು, ಅಂತವರಿಂದ ತಮಗೆ ಸಲಹೆ ಸೂಚನೆ ಸಿಗುತ್ತಿರುವುದು ತಮ್ಮೆಲ್ಲರ ಅದೃಷ್ಟ ಅದರ ಉಪಯೋಗವನ್ನು ಪಡೆದು ಕೊಂಡು ತಾವೆಲ್ಲರೂ ಯಶಸ್ವಿಯಾಗಿ ಸಂತೋಷದಿಂದ ಈ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿರುವುದಾಗಿ ತಿಳಿಸಿದರು.

ಇಂದು ಐವತ್ತು ವರ್ಷದವರಿಗಿಂತ ಮೇಲ್ಪಟ್ಟವರಿಗೆ ಮಾತ್ರ ಸಾಹಿತ್ಯ ಎನ್ನುವಂತಾಗಿದೆ. ಆದರಿ ಇಂದು ಇಷ್ಟು ವಿದ್ಯಾರ್ಥಿಗಳು ಭಾಗವಹಿಸಿರುವುದು ಬಹಳ ಸಂತೋಷ. ವಿಶೇಷವಾಗಿ ಹೇಗೆ ಬರೆಯ ಬೇಕು ಎಂದು ಹೇಳುವುದು ಕಷ್ಟ,

ನಾವು ಕೇಳಿದ ಕಥೆ, ಕವನ ನಮ್ಮ ಮನಸ್ಸಿಗೆ ಅಭಿವ್ಯಕ್ತಿ ನೀಡಿದ್ದನ್ನು ಕಾಡುತ್ತದೆ. ಅದನ್ನು ನಮಗೆ ಅನುಭವ ನೀಡಿದ್ದಕ್ಕೆ ಭಾಷಿಕ ರೂಪ ನೀಡುವುದೆ ಕಥೆ, ಮಾನವೀಯತೆಯ ವಿಕಸನ ಸಾಹಿತ್ಯ ನೀಡುತ್ತದೆ, ಇದಕ್ಕೆ ಸಂಬಂದಿಸಿದಂತೆ ಕಲವು ಪದಗಳ ಬಳಕೆ, ಸೂಕ್ಷ್ಮತೆ, ಅರ್ಥ, ಗಳನ್ನು ವಿಸ್ತರಿಸಿಕೊಳ್ಳುವ ಬಗ್ಗೆ ವಿವರ ನೀಡಬಹುದು ಎಂದು ಡಾ.ತಾರಿಣಿ ಶುಭದಾಯಿನಿ ತಿಳಿಸಿದರು.

ಕರ್ನಾಟಕ ಸಂಘದಲ್ಲಿ ಇರುವ ಪೋಟೊದಲ್ಲಿ ಸಾಹಿತ್ಯ, ಸಾಂಸ್ಜೃತಿಕ ರಾಯಭಾರಿಗಳನ್ನು ನೋಡಲು ಸಂತೋಷ ವಾಗುತ್ತದೆ. ಅದರಲ್ಲಿ ಬರೀ ಗಂಡಸರು ಪೋಟೊಇದೆ. ಇಂದಿನ ಕಮ್ಮಟಕೆ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರಿಂದ ಮುಂದೊಂದು ದಿನ ಬರೀ ಮಹಿಳ ಲೇಖಕರೆ ಬರಬಹುದು. ಭಾಷೆ ಇಲ್ಲದ ದಿನಗಳಲ್ಲಿ ಪ್ರಾಣಿಗಳಲ್ಲಿ ತಾರತಮ್ಯ ಮಾಡಿದಾಗ ಬಲಿಷ್ಟ ಪ್ರಾಣಿಗಳು ಇದ್ದವು, ಮನುಷ್ಯ ಕೆಳಭಾಗದಲ್ಲಿ ಇದ್ದ. ಕೆಲವೇ ವರ್ಷಗಳಲ್ಲಿ ಪವಾಡದಿಂದ ಮನುಷ್ಯ ಪ್ರಥಮ ಸ್ಥಾನಕ್ಕೆ ಬಂದ. ಕಾರಣ ಎಲ್ಲಾ ಪ್ರಾಣಿ, ಪಕ್ಷಿ ತಮ್ಮದೇ ಭಾಷೆ ಕಲಿತವು ಮನುಷ್ಯ ಭಾಷೆ ಸಂಭಾಷಣೆಗೆ ಸ್ಥಿಮಿತ ಗೊಳಿಸದೆ ಕಥೆ ಹೇಳುವುದು ಕೇಳುವುದು ಪ್ರಾರಂಬಿಸಿ ಇತಿಹಾಸ ಸೃಷ್ಟಿಸಿ, ಅನುಸರಿಸಿ ವ್ಯವಹಾರ ವೃದ್ದಿಯಾಗಿ ಪ್ರಪಂಚದಲ್ಲಿ ಸುಲಭವಾಗಿ ಬದುಕು ಕಲಿತ. ಕಥೆ ಕಟ್ಟಿ ಉದ್ದಾರವಾಗಿದೆ. ಈ ರೀತಿ ಕಥೆ, ಕಾವ್ಯ ಹಾಗೂ ಕಾದಂಬರಿ ಬರೆಯುವ ಬಗ್ಗೆ ವಸುಧೇಂದ್ರ ತಿಳಿಸಿದರು.

Karnataka Sanga Shivamogga ಪ್ರಣತಿ ಪ್ರಾರ್ಥನೆ ಮಾಡಿದರು.
ಕಾರ್ಯದರ್ಶಿ ವಿನಯ್ ಶಿವಮೊಗ್ಗ ಸ್ವಾಗತಿಸಿದರು, ಮೋಹನ್ ಶಾಸ್ತ್ರಿ ಪ್ರಸ್ತಾವಿಕ ನುಡಿ ನುಡಿದರು, ಡಾ.ನಾಗಮಣಿ ನಿರೂಪಿಸಿ ಚೇತನ್ ವಂದಿಸಿದರು. ಶೇಷಾದ್ರಿಕಿನಾರ, ಚಂದ್ರುಶೇಖರ್, ವಾಗೇಶ, ಆ್ರೀನಿವಾಸ, ರಮಾಶಾಸ್ತ್ರಿ, ಮಾಜಿ ಅಧ್ಯಕ್ಷರಾದ ಮಂಜುನಾಥ್, ದಿನೇಶ್, ಭುವನ್, ಪ್ರಶಾಂತ್ ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...