Friday, December 5, 2025
Friday, December 5, 2025

Lakshminarayan Kashi ತಾಳಮದ್ದಳೆ ಕಲೆಯ ಉಳಿವಿಗೆ ಅನೇಕ ಹಿರಿಕಿರಿಯ ಕಲಾವಿದರು ಶ್ರಮಿಸಿದ್ದಾರೆ- ಲಕ್ಷ್ಮೀನಾರಾಯಣ ಕಾಶಿ

Date:

Lakshminarayan Kashi ಶಿವಮೊಗ್ಗದ ಶ್ರೀರಾಮ ತಾಳಮದ್ದಳೆ ಸಂಘವು
ಆಗಸ್ಟ್ ತಿಂಗಳ 17 ರಿಂದ 23 ರವರೆಗೆ
” ಭೋ ರಾಮ ಮಾಮುದ್ಧರ” ಎಂಬ ಶೀರ್ಷಿಕೆಯಲ್ಲಿ
ತಾಳಮದ್ದಳೆ ಸಪ್ತಾಹ ಕಾರ್ಯಕ್ರಮ ನಡೆಸಿತು.

ಸ್ಥಳೀಯ ರವೀಂದ್ರ ನಗರದ ಶ್ರೀಪ್ರಸನ್ನ ಗಣಪತಿ ದೇಗುಲದಲ್ಲಿ
ಈ ಶ್ರಾವಣ ತಾಳಮದ್ದಳೆ ಸಪ್ತಾಹ ನಡೆಯಿತು.
ಕೀರ್ತಿಶೇಷ ವೇದಮೂರ್ತಿ ಅ.ಪ.ರಾಮಭಟ್ಟರ ಸ್ಮರಣಾರ್ಥವಾಗಿ ಅರ್ಚಕವೃಂದದ ಸಹಕಾರದೊಂದಿಗೆ
ಸಪ್ತಾಹ ಪರಿಪೂರ್ಣ ನಡೆಯಿತು.

ಶ್ರೀರಾಮ ಪಟ್ಟಾಭಿಷೇಕ.
ಪಾದುಕಾ ಪ್ರದಾನ.
ಪಂಚವಟಿ.
ವಾಲಿ ಮೋಕ್ಷ.
ಅತಿಕಾಯ ಕಾಳಗ.
ಕುಂಭಕರ್ಣ- ಇಂದ್ರಜಿತು ವಧೆ.
ರಾವಣ ವಧೆ
ಪ್ರಸಂಗಗಳ ತಾಳಮದ್ದಳೆ , ರಸಿಕರ ಮನರಂಜಿಸಿತು.
ಯಕ್ಷಗಾನ ಭಾಗವತಿಕೆಯನ್ನ
ಹಿರಿಯ ಕಲಾವಿದ ಪರಮೇಶ್ವರ ಹೆಗಡೆ ನಡೆಸಿಕೊಟ್ಟರು.
ಸಮಾರೋಪದಲ್ಲಿ ಯಕ್ಷಗಾನ ಕಲೆಯ ಪೋಷಕ ,ಹಿರಿಯ ಸಿ,ಎಸ್.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
” ತಮಗೆ ನೀಡಿದ ಸನ್ಮಾನವು ಶಿವಮೊಗ್ಗದ. ಎಲ್ಲ ಹಿರಿ ಕಿರಿಯ ಯಕ್ಷಗಾನ ಕಲಾಭಿಮಾನಿಗಳಿಗೆ ಸಂದ ಗೌರವ ಎಂದು ಸನ್ಮಾನಿತ ಚಂದ್ರಶೇಖರ್ ನುಡಿದರು.

Lakshminarayan Kashi ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗ ಅಭ್ಯುದಯ ಸಂಸ್ಥೆಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ವಹಿಸಿದ್ದರು.
ತಾಳಮದ್ದಳೆ ಕಲಾವಂತಿಕೆಯು‌ ಸುಮಾರು ಮೂರೂವರೆ ಶತಮಾನದಿಂದ ಬೆಳೆದು ಬಂದ ಸಾಂಪ್ರದಾಯಿಕ ಕಲೆ. ಇದರ ಉಳಿವಿಗೆ ಅನೇಕ ಯಕ್ಷಗಾನ ಕಲಾವಿದರು ಶ್ರಮಿಸಿದ್ದಾರೆ. ಅವರೆಲ್ಲರ ಪ್ರಯತ್ನದ ಫಲವಾಗಿ ಇಂದು ತಾಳಮದ್ದಳೆ ಉಸಿರಾಡುತ್ತಿದೆ. ಸಾಕಷ್ಟು ಸೃಜನಶೀಲತೆಯನ್ನ, ಕಲ್ಪನಾಶಕ್ತಿ , ಮಾತುಗಾರಿಕೆ, ಭಾಷಾ ಪ್ರೌಢಿಮೆಯನ್ನ ಬೆಳೆಸುವ ಈ ಕಲೆಗೆ ಬೆಲೆ ಕಟ್ಟಲಾಗದು ” ಎಂದು ಲಕ್ಷೀನಾರಾಯಣ ಕಾಶಿ ಹೇಳಿದರು.

ಅಚ್ಯುತ ಹೆಬ್ಬಾರ್ ಮರವಂತೆ ಸ್ವಾಗತ ಬಯಸಿದರು.
ಪ್ರಶಾಂತ್ ಬೆಂಗ್ಡವಳ್ಳಿ
ಅವರಿಂದ
ಆಭಾರಮನ್ನಣೆ ನಡೆಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...