Life Insurance Corporation of India ರಾವ್ಸ ಸ್ಪೋರ್ಟ್ಸ್ ಅರೆನಾದಲ್ಲಿ ನಡೆದ ಭಾರತೀಯ ಜೀವ ವಿಮಾ ನಿಗಮ, ದಕ್ಷಿಣ ಮಧ್ಯ ವಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಬಂದಿದ್ದ ಎಪ್ಪತ್ತು ಕ್ರೀಡಾಪಟುಗಳ ನಡುವೆ ನಡೆದ ತೀವ್ರ ಗತಿಯ ಹಣಾಹಣಿ ನೋಡುಗರ ಮನಸೂರೆಗೊಂಡಿತು.
ಮಹಿಳೆಯರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚೈತ್ರ ರವರು ಪ್ರಥಮ ಸ್ಥಾನವನ್ನು ಜೋತಿರ್ಮಯಿರವರು ದ್ವಿತೀಯ ಸ್ಥಾನವನ್ನು ಪಡೆದರು. ಹಾಗೆಯೇ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಜ್ಯೋತ್ಸ್ನಾರವರು ಪ್ರಥಮ ಸ್ಥಾನವನ್ನು ಸ್ಪೂರ್ತಿ ಕೊಟ್ಯಾನ್ ರವರು ದ್ವಿತೀಯ ಸ್ಥಾನವನ್ನು ಪಡೆದರು.
ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕೆ. ಕಿಶೋರ್ ಕುಮಾರ್ ರವರು ಪ್ರಥಮ ಸ್ಥಾನವನ್ನು ನಾಗವಿನಾಯಕ್ ರವರು ದ್ವಿತೀಯ ಸ್ಥಾನವನ್ನು ಪಡೆದರು. ಅಂತೆಯೇ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಕಾರ್ತಿಕ್ ರವರು ಪ್ರಥಮ ಸ್ಥಾನವನ್ನು ಸಿಂಗರಾಜುರವರು ದ್ವಿತೀಯ ಸ್ಥಾನವನ್ನು ಪಡೆದು ರಾಷ್ಟ್ರಮಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಶ್ರೀಮತಿ ಸತ್ಯವಾಣಿ ಪ್ರಾಂತೀಯ ವ್ಯವಸ್ಥಾಪಕಿ (ಮಾನವ ಸಂಪನ್ಮೂಲ)ರವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿ ಯಾವುದೇ ಲೋಪದೋಷಗಳು ಇಲ್ಲದಂತೆ ನಡೆಸಿಕೊಟ್ಟ ಶಿವಮೊಗ್ಗ ವಿಭಾಗದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿ ಮುಂದಿನ ಹಂತಕ್ಕೆ ಅರ್ಹರಾದ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ವಿಭಾಗದ ಹಿರಿಯ ವಿಭಾಗಾಧಿಕಾರಿ ಶ್ರೀ ಪಿ. ಶ್ರೀನಿವಾಸರವರು ತುಂಗಾ ಭದ್ರೆಯರ ಸಂಗಮದ ತವರು ಜಿಲ್ಲೆ ಶಿವಮೊಗ್ಗದಲ್ಲಿ ನಿಗಮಕ್ಕೆ ಸಂಬಂಧಪಟ್ಟ ಕ್ರೀಡಾಕೂಟವನ್ನು ಆಯೋಜಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿ, ಇಲ್ಲಿ ಭಾಗವಹಿಸಿದ ಸ್ಪರ್ಧಿಗಳು ರಾಷ್ಟ್ರ ಮಟ್ಟದಲ್ಲಿ ನಂಬರ್ ಒನ್ ಆಗಲು ಕಠಿಣ ಪರಿಶ್ರಮ ಬೇಕಾಗಿರುತ್ತದೆ ಹಾಗೆಯೇ ನಾವು ಹೊಸ ವ್ಯವಹಾರದಲ್ಲಿ ಭಾರತದ ನಂಬರ್ ಒನ್ ಆಗಲು ನಿಮ್ಮಷ್ಟೇ ಶ್ರಮ ಪಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
Life Insurance Corporation of India ಕ್ರೀಡಾಕೂಟವು ಕಾರ್ಮಿಕ ಹಾಗೂ ಔದ್ಯೋಗಿಕ ಸಂಬಂಧ ವ್ಯವಸ್ಥಾಪಕಿ ಶ್ರೀಮತಿ ಕರುಣಾ, ಸಂಯೋಜಕ ಶ್ರೀ ವೆಂಕಟೇಶ್, ಕಾರ್ಯದರ್ಶಿ ಎಸ್ ಎ ರವಿ, ಮಾಲತೇಶ ಕುಲಕರ್ಣಿ, ಆನಂದ್ ಹಾಗೂ ಇತರರ ಮುಂದಾಳತ್ವದಲ್ಲಿ ವಿಭಾಗೀಯ ಕಚೇರಿಯ ಎಲ್ಲಾ ಸಿಬ್ಬಂದಿವರ್ಗದವರು ಜವಾಬ್ದಾರಿಯನ್ನು ಹೊತ್ತು ದೂರದೂರದ ಊರುಗಳಿಂದ ಬಂದ ಪ್ರತಿಯೊಬ್ಬರ ಮನಸೂರೆಗೊಂಡಿದ್ದು ಹೆಮ್ಮೆಯ ವಿಚಾರ ಎಂದು ಮಾರುಕಟ್ಟೆ ವ್ಯವಸ್ಥಾಪಕ ಶ್ರೀ ಸುಜಿತ್ ಕುಮಾರ್, ಜೆ. ಸುರೇಶ್, ಹಾಗೂ ಶರ್ಮಾ ರವರು ತಿಳಿಸಿದರು.
