Kateel Ashok Pai Memorial College ಶಿವಮೊಗ್ಗ ನಗರದ ಪ್ರತಿಷ್ಠಿತ ಕಟೀಲು ಅಶೋಕ್ ಪೈ ಮೆಮೋರಿಯಲ್ ಕಾಲೇಜ್ ನಲ್ಲಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ, ಉದ್ಯೋಗಸ್ಥರಿಗೆ ಸರಳವಾಗಿ ಸಂಸ್ಕತದಲ್ಲಿ ಮಾತನಾಡುವ, ಬರೆಯುವ ಹಾಗೂ ಓದುವ ಸರ್ಟಿಫಿಕೇಟ್ ಕೋರ್ಸ ನ್ನು ಪ್ರಾರಂಭಿಸಲು ದೆಹಲಿಯ ಕೆಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಅನುಮತಿಯೊಂದಿಗೆ ಮಾನ್ಯತೆಯನ್ನು ನೀಡಲಾಗಿದೆ.
ಇದೇ ಅಕ್ಟೋಬರ್ ತಿಂಗಳಿಂದ ಸಂಸ್ಕೃತ ಕಲಿಕಾ ತರಗತಿಯನ್ನು ಆರಂಭಿಸಲಾಗುತ್ತದೆ.
ಪ್ರತೀ ಬುದವಾರ, ಗುರುವಾರ ಮತ್ತು ಶುಕ್ರವಾರ ದಂದು ಸಂಜೆ 6.30 ರಿಂದ 8 ಗಂಟೆಯವರೆಗೆ ಟಿ.ಎಸ್.ಬಿ. ವೃತ್ತ (ಗೋಪಿ ಸರ್ಕಲ್) ಹಿಂಭಾಗ ಸವಾರ್ ಲೇನ್ ರಸ್ತೆಯಲ್ಲಿರುವಿರುವ ಮಾನಸ ಟ್ರಸ್ಟ್ ನ ವತಿಯಿಂದ ನಡೆಸುತ್ತಿರುವ ಮನುಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರದಲ್ಲಿ ತರಗತಿಗಳನ್ನು ನಡೆಸಲಾಗುವುದು.
Kateel Ashok Pai Memorial College 15 ವರ್ಷ ಮೇಲ್ಪಟ್ಟ ಯಾರೇ ಆಗಲಿ ಈ ಕೋರ್ಸ್ ಗೆ ಸೇರಬಹುದು. ಸಂಸ್ಕೃತದ ಯಾವುದೇ ಪರಿಚಯವಿಲ್ಲದವರು ಕೂಡ ಈ ತರಗತಿಗೆ ಸೇರಿ ಸುಲಭವಾಗಿ ಸಂಸ್ಕೃತವನ್ನು ಕಲಿಯಬಹುದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ, 9448288483 ಅಥವಾ 9480034495 ಸಂಖ್ಯೆಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.
