Prime Minister’s Employment Generation Scheme ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(ಪಿಎಂಇಜಿಪಿ)ಯಡಿ ಬ್ಯಾಂಕುಗಳಿಂದ ಸಾಲ ಪಡೆದು ಉತ್ಪಾದನಾ / ಸೇವಾ ಘಟಕ ಪ್ರಾರಂಭಿಸಲು ಗ್ರಾಮೀಣ ಮತ್ತು ನಗರ ಪ್ರದೇಶಗಳ ಆಸಕ್ತ ಅರ್ಜಿದಾರರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಉತ್ಪಾದನಾ ಮತ್ತು ಸೇವಾ ವಲಯದ ಚಟುವಟಿಕೆ ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಶೇಕಡಾ 25 ರಿಂದ 35 ರವರೆಗೆ ಮತ್ತು ನಗರ ಪ್ರದೇಶದಲ್ಲಿ ಶೇಕಡಾ 15 ರಿಂದ 25 ರವರೆಗೆ ಸಹಾಯಧನ ಲಭ್ಯವಿರುತ್ತದೆ. ಈ ಯೋಜನೆಯಡಿ ಹೊಸದಾಗಿ ಪ್ರಾರಂಭಿಸಲಿರುವ ಉತ್ಪಾದನಾ ಘಟಕಗಳಿಗೆ 50 ಲಕ್ಷ ಮತ್ತು ಸೇವಾ ಘಟಕಗಳಿಗೆ 20 ಲಕ್ಷ ಗರಿಷ್ಠ ಯೋಜನಾ ವೆಚ್ಚದ ಘಟಕಗಳಿಗೆ ಬ್ಯಾಂಕುಗಳಿಂದ ಆರ್ಥಿಕ ನೆರವು ಪಡೆಯಲು ಅವಕಾಶವಿರುತ್ತದೆ.
Prime Minister’s Employment Generation Scheme ಈ ಯೋಜನೆಗಳಡಿಯಲ್ಲಿ ಹೊಸದಾಗಿ ಚಟುವಟಿಕೆಗಳನ್ನು ಪ್ರಾರಂಭಿಸಲು ಇಚ್ಚಿಸಿರುವ ಜಿಲ್ಲೆಯ ಆಸಕ್ತ ಯುವಕ / ಯುವತಿಯರಿಂದ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು ಖಾಸಗಿ ವ್ಯಕ್ತಿ / ಮಧ್ಯವರ್ತಿ / ಮೂರನೇ ವ್ಯಕ್ತಿಗಳನ್ನು ಅವಲಂಬಿಸದೆ ಮಾಹಿತಿಗಾಗಿ ಕಛೇರಿಗೆ ನೇರವಾಗಿ ಭೇಟಿ ನೀಡಬಹುದು. ಆಸಕ್ತರು https://www.kviconline.gov.in/pmegpeportal/ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಶ್ರೀಮತಿ ಸಿ. ಓ. ಸುಜಾತ, ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಚೇರಿ, ‘ಬಿ” ಬ್ಲಾಕ್-7, ಎರಡನೇ ಮಹಡಿ, ಉಪವಿಭಾಗಾಧಿಕಾರಿಗಳ ಕಚೇರಿ ಕಟ್ಟಡ, ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗ, ದೂರವಾಣಿ:-9480825637 ಇವರನ್ನು ಸಂಪರ್ಕಿಸಬಹುದೆಂದು ಮಂಡಳಿಯ ಜಿಲ್ಲಾ ಅಭಿವೃದ್ಧಿ ಅಧಕಾರಿ ತಿಳಿಸಿದ್ದಾರೆ.
Prime Minister’s Employment Generation Scheme ಪಿಎಂಇಜಿಪಿ ಯೋಜನೆಯಡಿ ಸಾಲ- ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
Date:
