Shivamogga District Chamber of Commerce and Industry ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಗರದ ಗೋಪಾಲದಲ್ಲಿರುವ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೃಷ್ಣ ರಾಧೆಯರ ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿದ್ದು. ಬಡಾವಣೆಯ ಮಕ್ಕಳು ರಾಧೆ ಕೃಷ್ಣನ ವಿವಿಧ ಬಗೆಯ ವೇಷ ಭೂಷಣಗಳನ್ನು ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ನಾಗ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂದೇಶ ಉಪಾಧ್ಯ ಮಾತನಾಡುತ್ತಾ ಮಕ್ಕಳಲ್ಲಿ ದೇವರನ್ನು ಕಾಣೋಣ. ಚಿಕ್ಕ ಮಕ್ಕಳ ಮುಗ್ಧ ಮನಸ್ಸಿನಲ್ಲಿ ಯಾವುದೇ ರೀತಿಯ ಭಾವನೆಗಳು ಇರುವುದಿಲ್ಲ ಅವರ ವೇಷಭೂಷಣಗಳನ್ನು ನೋಡುವುದೇ ಒಂದು ಸಂಭ್ರಮ ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ ಹಬ್ಬಗಳು ನಮಗೆ ಜೀವನೋತ್ಸಾಹವನ್ನು ಮೂಡಿಸುತ್ತದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ. ನಾಗಸುಬ್ರಹ್ಮಣ್ಯ ದೇವಸ್ಥಾನ ಕೇವಲ ಪೂಜೆ ಪುನಸ್ಕಾರಕ್ಕೆ ಸೀಮಿತವಾಗದೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ತುಂಬಾ ವಿಶೇಷವಾಗಿ ಮಾಡುವುದರ ಮುಖಾಂತರ ಶಿವಮೊಗ್ಗದಲ್ಲಿ ಒಂದು ಮಾದರಿ ದೇವಸ್ಥಾನವಾಗಿದೆ. ಪ್ರತಿಭಾ ಪುರಸ್ಕಾರ ಹಾಗೂ ಶ್ರಾವಣದ ಕಾರ್ಯಕ್ರಮಗಳು ಮತ್ತು ನಾಗನಿಗೆ ವಿಶೇಷ ಪೂಜೆ ಈ ರೀತಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ನಾಗಸಬ್ರಹ್ಮಣ್ಯ ದೇವಸ್ಥಾನ ಜನಮಾನಸದಲ್ಲಿ ಉಳಿದಿದೆ ಹಾಗೆ ಇಲ್ಲಿಯ ಸಮಿತಿಯವರು ತುಂಬಾ ಕ್ರಿಯಾಶೀಲರಾಗಿದ್ದು ಧಾರ್ಮಿಕ ಕಾರ್ಯಕ್ರಮಗಳಿಗೆ ತುಂಬಾ ಸಹಕಾರ ನೀಡುತ್ತಾರೆ ಎಂದು ಪ್ರಶಂಸಿಸಿದರು. Shivamogga District Chamber of Commerce and Industry ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ರಾಮಲಿಂಗಪ್ಪನವರು ವಹಿಸಿ ಮಾತನಾಡುತ್ತಾ ಚಿಕ್ಕ ಮಕ್ಕಳಿದ್ದಾಗ ಅವರಿಗೆ ಇಂಥ ವೇಷಭೂಷಣಗಳನ್ನು ಧರಿಸುವುದರಿಂದ ಅವರನ್ನೇ ಸಂಸ್ಕಾರ ಹಾಗೂ ದೈವತ್ವ ಭಾವನೆ ಮೂಡುತ್ತದೆ ಅದರ ಜೊತೆಗೆ ಜೀವನಪರ್ಯಂತ ನೆನಪಿನಲ್ಲಿ ಉಳಿಯುತ್ತದೆ. ಆದ್ದರಿಂದ ಇಂತಹ ಅವಕಾಶಗಳನ್ನು ಮಕ್ಕಳಿಗೆ ನೀಡಬೇಕು ಎಲ್ಲಾ ಕಾರ್ಯಕ್ರಮಗಳನ್ನು ತುಂಬಾ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಮಾಡುತ್ತಾ ಬಂದಿರುವ ಸಂದೇಶ ಉಪಾಧ್ಯಾಯ ಹಾಗೂ ತಂಡರವರಿಗೆ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಕೃಷ್ಣ ರಾಧೆಯರ ಹಾಗೂ ಸ್ಲೋಕ .ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಪ್ರಮಾಣ ಪತ್ರ ಪಾರಿತೋಷಕ ನೀಡಿ ಗೌರವಿಸಿದರು… ಏನಾದ್ರು ಕ್ಲಬ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಅವರು ಭಜನಾ ಮಂಡಳಿಯವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಸದಸ್ಯರು. ಅರ್ಚಕ ವೃಂದ ದವರು. ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು
Shivamogga District Chamber of Commerce and Industry ನಾಗ ಸುಬ್ರಹ್ಮಣ್ಯ ದೇಗುಲದಲ್ಲಿ ಕೃಷ್ಣ- ರಾಧೆಯರ ವೇಷ ಭೂಷಣದಲ್ಲಿ ಮಿಂಚಿದ ಮಕ್ಕಳ ಸಮೂಹ
Date:
