Chamber Of Commerce Shivamogga ನಮ್ಮ ಸನಾತನ ಧರ್ಮದಲ್ಲಿ ಭಗವತ್ ದ್ವಜ ಹಿಂದು ಸಮಾಜದ ಹೆಗ್ಗರುತ್ತಾಗಿ ಗುರ್ತಿಸಿ ಕೊಂಡಿದೆ ಎಂದು ಆರ್.ಎಸ್.ಎಸ್.ಮುಕಂಡರಾದ ಲೋಕೇಶ್ ಕಾಳೆಯವರು ನಾಗರಾಜ್ ರವರ ಗಾಯಿತ್ರಿ ಅಸೋಸಿಯೆಟ್ಸ್ ಹೊಸ ಮಳಿಗೆ(ಧೈವಜ್ಞ ಸೊಸೈಟಿ ಹಿಂಭಾಗ) ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಪೂರ್ವಜರು ಹಾಕಿ ಕೊಟ್ಟಿರುವ ಮಾರ್ಗದರ್ಶನದಲ್ಲಿ ನಡೆಸಿಕೊಂಡು ಬಂದಿರುವ ಪದ್ದತಿಯಲ್ಲಿ ನಾವೆಲ್ಲರೂ ಸಾಗುತ್ತಿದ್ದೇವೆ. ಅದಕ್ಕೆ ಸಹಕಾರಿಯಾಗಿ ನಾಗರಾಜ್ ರವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಈ ಉದ್ದಿಮೆ ಹೆಚ್ಚಿನ ಯಶಸ್ಸು ಗಳಿಸಲಿ ಎಂದರು.
ಧ್ವಜ ನಾಗರಾಜ್ ಎಂದೇ ಗುರ್ತಿಸಿ ಕೊಂಡಿರುವ ಇವರು, ಯಾವುದೇ ಕಾರ್ಯ ಕ್ರಮ ಇರಲಿ ಅದಕ್ಕೆ ತಕ್ಕ ವ್ಯವಸ್ಥೆ ಮಾಡುತ್ತಾರೆ. ಇವರ ಕಾರ್ಯಕ್ಷಮತೆ ಎಲ್ಲರಿಗೂ ಸಹಕಾರಿಯಾಗಿದೆ. ಯಾವುದೆ ಸಭೆ, ಸಮಾರಂಭ, ಜಾತ್ರೆ, ಉತ್ಸವಗಳಲ್ಲಿ ಇವರ ದ್ವಜದ ಅಲಂಕಾರ, ಬ್ಯಾನರ್, ಟೀ ಶರ್ಟ್, ಕ್ಯಾಪ್ ಎಲ್ಲರ ಗಮನ ಸೆಳೆಯುತ್ತದೆ. ಇವರ ನಿಸ್ವರ್ಥಸೇವೆಯಿಂದ ನಗರವಲ್ಲದೆ, ಇತರ ಜಿಲ್ಲೆಗಳಲ್ಲೂ ಇವರ ಸೇವೆ ಗಮನಸೆಳೆದಿದೆ ಎಂದು ವೈ.ಹೆಚ್.ಐ.ಎ ತರುಣೋದಯ ಘಟಕದ ಛೇರ್ಮನ್ ವಾಗೇಶ್ ನುಡಿದರು.
ಸನಾತನ ಧರ್ಮ ವಿಶ್ವಕ್ಕೆ ಮಾದರಿಯಾಗಿದೆ ಅದರ ಉನ್ನತಿಗಾಗಿ ಶ್ರಮಿಸಿ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಸಲುವಾಗಿ ಎಲ್ಲಾ ರಾಜಕೀಯ ಪಕ್ಷ, ಕ್ರೀಡೆ, ಧರ್ಮದ ಪರವಾಗಿ ಪ್ರಚಾರ ಸಾಮಗ್ರಿಗಳನ್ನು ಶ್ರಮವಹಿಸಿ ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ಮಾಲಿಕರಾದ ನಾಗರಾಜ್ ನುಡಿದರು.
Chamber Of Commerce Shivamogga ಇವರಿಗೆ ಶುಭವನ್ನು ಕೋರಿ ನನ್ನ ಕನಸಿನ ಶಿವಮೊಗ್ಗ ಅಧ್ಯಕ್ಷರಾದ ಗೋಪಿನಾಥ್, ಸಂಸ್ಕೃತ ಭಾರತಿಯ ಅ.ನ.ವಿಜಯೇಂದ್ರ, ಜಿಲ್ಲಾ ಕೈಗಾರಿಕ ಮತ್ತು ವಾಣಿಜ್ಯ ಸಂಘದ ಉಪಾಧ್ಯಕ್ಷ ವಿಜಯಕುಮಾರ್, ವಿಶ್ವಕರ್ಮ ಸಮಾಜದ ಮುಖಂಡರಾದ ಮಂಜುನಾಥಚಾರ್, ವಿನೋದ್, ತನುಜಾ ನಾಗರಾಜ್, ಭಾರತಿಮಲ್ಲಿಕಾರ್ಜುನ ಚಾರ್ ರವೀಂದ್ರ, ದಿಲೀಪ್ ನಾಡಿಗ್, ಸಂಘ ಪರಿವಾರದ ಎಲ್ಲರೂ ಶುಭಕೋರಿದರು.
Chamber Of Commerce Shivamogga ನಮ್ಮ ಪೂರ್ವಜರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಾವು ಸಾಗುತ್ತಿದ್ದೇವೆ – ಲೋಕೇಶ್ ಕಾಳೆ
Date:
