Sahyadri College ಆರ್ಥಿಕ ಸಬಲೀಕರಣಕ್ಕೆ ಪ್ರವಾಸೋದ್ಯಮ ಅಗತ್ಯ ಎಂದು ನನ್ನ ಕನಸಿನ ಶಿವಮೊಗ್ಗ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ಇತಿಹಾಸ ಅಭಿವೃದ್ಧಿ ವೇದಿಕೆ ಏರ್ಪಡಿಸಿದ್ದ ಪ್ರವಾಸ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪ್ರವಾಸಿಗರು ಬರುವುದರಿಂದ ಸ್ಥಳಿಯರಿಗೆ ಉದ್ಯೋಗ ದೊರಕುತ್ತದೆ. ಆರ್ಥಿಕ ಬೆಳವಣಿಗೆ ಹೆಚ್ಚುವ ಜತೆಯಲ್ಲಿ ಸಮೃದ್ಧಿ ಜೀವನ ಸಾಗಿಸಲು ಸಾಧ್ಯ ಎಂದು ತಿಳಿಸಿದರು.
ಶಿವಮೊಗ್ಗ ಸುತ್ತಮುತ್ತಲ ಇತಿಹಾಸ ಪ್ರಸಿದ್ಧ ಪ್ರದೇಶಗಳನ್ನು ಜನಸಾಮಾನ್ಯರಿಗೂ ತಿಳುವಳಿಕೆ ಮೂಡಿಸುವ ಕಾರ್ಯವನ್ನು ಇತಿಹಾಸ ವೇದಿಕೆ ಏರ್ಪಡಿಸುತ್ತಿದೆ. ನಗರದ ಸಹ್ಯಾದ್ರಿ ಕಾಲೇಜಿನ ಇತಿಹಾಸ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದರು.
ವೇದಿಕೆ ಕಾರ್ಯದರ್ಶಿ ದಿಲೀಪ್ ನಾಡಿಗ್ ಮಾತನಾಡಿ, ಶತಮಾನಗಳ ಹಿಂದೆ ನಮ್ಮ ರಾಜ್ಯ ಸಮೃದ್ಧಿಯಿಂದ ಕೂಡಿತ್ತು. ರಾಜರ ಆಡಳಿತದಲ್ಲಿ ಆದ ಜಯ, ವಿಶೇಷ ಕಾರ್ಯಗಳನ್ನು ಕಲ್ಲಿನ ಮೇಲೆ ಕೆತ್ತಿಸಿ ಇಟ್ಟಿದ್ದು, ಅವುಗಳನ್ನು ಇತಿಹಾಸ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಯೂತ್ ಹಾಸ್ಟೆಲ್ ಚೇರ್ಮನ್ ವಾಗೇಶ್ ಮಾತನಾಡಿ, ಹಲವಾರು ಸ್ಥಳಿಯ ಚಾರಣಗಳನ್ನು ಹಾಗೂ ಹಿಮಾಲಯ ಚಾರಣಗಳನ್ನು ಏರ್ಪಡಿಸಿ ಯುವಜನರಲ್ಲಿ ಸಾಹಸ ಪ್ರವೃತ್ತಿಗೆ ಸಹರಿಸುತ್ತಿದ್ದೇವೆ. ಜೊತೆಗೆ ಇತಿಹಾಸದ ಬಗ್ಗೆ ಮುಂದಿನ ಪೀಳಿಗೆಗೆ ಕೊಡುಗೆ ನೀಡುವ ಸಲುವಾಗಿ ಇಂತಹ ಪ್ರವಾಸ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
Sahyadri College ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಯೂತ್ ಹಾಸ್ಟೆಲ್ ಸದಸ್ಯತ್ವ ಪಡೆದರೆ ಅಂತರಾಷ್ಟ್ರೀಯ ಮನ್ನಣೆ ಇದೆ. ಜವಾಬ್ದಾರಿಯುತವಾಗಿ, ಅತ್ಯುತ್ತಮ ಸೌಲಭ್ಯದೊಂದಿಗೆ ಕಡಿಮೆ ವೆಚ್ಚದಲ್ಲಿ ಚಾರಣ ಏರ್ಪಡಿಸಲಾಗುತ್ತದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು.
ವೇದಿಕೆ ಸದಸ್ಯರಾದ ಆದಿತ್ಯಪ್ರಸಾದ್ ಮಾತನಾಡಿ, ಚಾರಣ, ಪ್ರವಾಸಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹರಡಬೇಡಿ, ಪೂರ್ವಜರು ಉಳಿಸಿ ಬೆಳೆಸಿರುವ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಸದಸ್ಯ ನಾಗರಾಜ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು
Sahyadri College ಪ್ರವಾಸಿಗರು ಹೆಚ್ಚೆಚ್ಚು ಆಗಮಿಸಿದಷ್ಟೂ ಸ್ಥಳೀಯರಿಗೆ ಉದ್ಯೋಗಾವಕಾಶ- ಎನ್.ಗೋಪಿನಾಥ್
Date:
