VISL Bhadravati ಆಗಸ್ಟ್ 2025ರಲ್ಲಿ ವಿಐಎಸ್ ಎಲ್ ನಿಂದ ಸಾಂಸ್ಥಿಕ ಸಾಮಾಜಿಕ ಕಳಕಳಿಯ ಅಡಿಯಲ್ಲಿ ಚಟುವಟಿಕೆಗಳನ್ನು ನಡೆಸಲಾಯಿತು.
01) ಬೆಂಚುಗಳು ಮತ್ತು ಮೇಜುಗಳ ಹಸ್ತಾಂತರ:
ಆಗಸ್ಟ್ ೧೧, ೨೦೨೫ರಂದು ಬಂಡಿಗುಡ್ಡದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಆರು ಡೆಸ್ಕ್ ಮತ್ತು ಮೇಜುಗಳನ್ನು ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಐಎಸ್‌ಎಲ್‌ನ ಕಾರ್ಯಪಾಲಕ ನಿರ್ದೇಶಕ ಶ್ರೀ ಬಿ.ಎಲ್. ಚಾಂದವಾನಿ, ಭದ್ರಾವತಿಯ ಕ್ಷೇತ್ರ ಶಿಕ್ಷಣ ಅಧಿಕಾರಿ ಶ್ರೀ ನಾಗೇಂದ್ರಪ್ಪ, ಭದ್ರಾವತಿಯ ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ಶ್ರೀ ಈರಪ್ಪ, ವಿಐಎಸ್‌ಎಲ್‌ನ ಉಪ ಪ್ರಧಾನ ವ್ಯವಸ್ಥಾಪಕ (ಗಣಿ) ಶ್ರೀ ಅನಿಲ್ ಕುಮಾರ್ ರೆಡ್ಡಿ, ವಿಐಎಸ್‌ಎಲ್ ಸಿಎಸ್‌ಆರ್‌ನ ನೋಡಲ್ ಅಧಿಕಾರಿ ಶ್ರೀ ಎಮ್.ಎಲ್.ಯೋಗೀಶ್ ಮತ್ತು ವಿಐಎಸ್‌ಎಲ್‌ನ ಗಣಿಗಾರಿಕೆ ಸಹಾಯಕ ಶ್ರೀ ಪ್ರಸಾದ್ ಭಾಗವಹಿಸಿದ್ದರು.
೨) ವಿಶೇಷ ಸಹಾಯಕ ಸಾಧನಗಳ ಹಸ್ತಾಂತರ:
ಶಿಕಾರಿಪುರ ಮತ್ತು ಹೊಸನಗರದಲ್ಲಿರು ಕರ್ನಾಟಕ ಸರ್ಕಾರಿ ಶಾಲೆಗಳ ೨೫ ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿಶೇಷ ಸಹಾಯಕ ಸಾಧನಗಳು ಮತ್ತು ಭದ್ರಾವತಿಯ ೨೨ ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿಶೇಷ ಸಹಾಯಕ ಸಾಧನಗಳನ್ನು ಕ್ರಮವಾಗಿ ದಿನಾಂಕ ೭-೮-೨೦೨೫ ಮತ್ತು ೧೧-೮-೨೦೨೫ ರಂದು ಶಿಕಾರಿಪುರ ಮತ್ತು ಭದ್ರಾವತಿಯಲ್ಲಿ ಹಸ್ತಾಂತರಿಸಲಾಯಿತು.
ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಐಎಸ್‌ಎಲ್‌ನ ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಹೆಚ್.ಆರ್ ಮತ್ತು ಪಿ.ಆರ್), ಹೆಚ್ಚುವರಿ ಮುಖ್ಯ ವೈಧ್ಯಾಧಿಕಾರಿ ಡಾ|| ಕೆ.ಎಸ್. ಸುಜೀತ್ ಕುಮಾರ್ ಮತ್ತು ಶ್ರೀ ಎಮ್.ಎಲ್. ಯೋಗೀಶ್, ಕ್ಷೇತ್ರ ಶಿಕ್ಷಣ ಅಧಿಕಾರಿ ಲೋಕೇಶ್.ಬಿ.ಆರ್, ಕ್ಷೇತ್ರ ಸಂಪನ್ಮೂಲ ಸಂಯೋಜಕ (ಬಿ.ಆರ್.ಸಿ), ಶ್ರೀ ಕೊಟ್ರೇಶಿ, ಶಿಕಾರಿಪುರದ ಬಿಐಇಆರ್‌ಟಿ, ಡಾ|| ಮಂಜುನಾಥ್, ಸರ್ಕಾರಿ ತಾಲ್ಲೂಕು ಆರೋಗ್ಯ ಅಧಿಕಾರಿ ಉಪಸ್ಥಿತರಿದ್ದರು.
ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕ ಶ್ರೀ ಬಿ.ಎಲ್. ಚಾಂದವಾನಿ, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಮತ್ತು ಸಿ.ಎಸ್.ಆರ್ ಅಪೆಕ್ಸ್ ಸಮಿತಿಯ ಅಧ್ಯಕ್ಷರು, ಶ್ರೀ ಎಲ್. ಪ್ರವೀಣ್ ಕುಮಾರ್, ಶ್ರೀಮತಿ ಶೋಭ ಶಿವಶಂಕರನ್, ಮಹಾಪ್ರಬಂಧಕರು (ಎಫ್ ಮತ್ತು ಎ), ಶ್ರೀ ಅಜಯ್ ಡಿ. ಸೋಂಕುವಾರ್, ಉಪಮಹಾಪ್ರಬಂಧಕರು ಪ್ರಭಾರಿ (ಎಮ್.ಎಮ್ ಮತ್ತು ಸಿಸಿ), ಶ್ರೀ ಜೆ. ಜಗದೀಶ, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ, ಶ್ರೀ ಪಾರ್ಥಸಾರಥಿ ಮಿಶ್ರಾ, ಅಧ್ಯಕ್ಷರು, ವಿಐಎಸ್‌ಎಲ್ ಅಧಿಕಾರಿಗಳ ಸಂಘ ಮತ್ತು ಶ್ರೀ ಎಮ್.ಎಲ್.ಯೋಗೀಶ್. ಭದ್ರಾವತಿಯ ಶಿಕ್ಷಣ ಇಲಾಖೆಯಿಂದ ಶ್ರೀ ನಾಗೇಂದ್ರಪ್ಪ ಕ್ಷೇತ್ರ ಶಿಕ್ಷಣ ಅಧಿಕಾರಿ, ಶ್ರೀ ದಯಾನಂದ, ಇಸಿಒ, ಶ್ರೀ ಪಂಚಾಕ್ಷರಿ, ಬಿಆರ್‌ಸಿ, ಶ್ರೀ ತೀರ್ಥಪ್ಪ ಮತ್ತು ಶ್ರೀಮತಿ ಜಯಲಕ್ಷ್ಮಿ ಬಿಐಈಆರ್‌ಟಿ. ತರಂಗ ಶಾಲೆಯಿಂದ ಶಾಲಾ ಶಿಕ್ಷಕರಾದ ಶ್ರೀ ಬಸವರಾಜಪ್ಪ ಉಪಸ್ಥಿತರಿದ್ದರು.
೩) ತಾರೀಕಟ್ಟೆ ಗ್ರಾಮದಲ್ಲಿ ಉಚಿತ ವೈಧ್ಯಕೀಯ ಆರೋಗ್ಯ ಶಿಬಿರ:
ಆಗಸ್ಟ್ ೧೭ ರಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ (ಶಿವಮೊಗ್ಗ), ಶಂಕರ ಕಣ್ಣಿನ ಆಸ್ಪತ್ರೆ (ಶಿವಮೊಗ್ಗ), ಭದ್ರಾವತಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮತ್ತು ವಿಐಎಸ್‌ಎಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ಭದ್ರಾವತಿಯ ತಾರೀಕಟ್ಟೆ ಗ್ರಾಮದಲ್ಲಿ ಸಮಗ್ರ ಉಚಿತ ವೈಧ್ಯಕೀಯ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.
VISL Bhadravati ಹೃದಯ ಶಾಸ್ತ್ರ, ಮೂಳೆ ಚಿಕಿತ್ಸೆ, ಸಾಮಾನ್ಯ ತಪಾಸಣೆ, ನೇತ್ರವಿಜ್ಞಾನ, ದಂತವೈದ್ಯಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತçದಂತಹ ಕ್ಷೇತ್ರಗಳಲ್ಲಿ ಅನುಭವಿ ತಜ್ಞವೈದ್ಯರು ಭಾಗವಹಿಸುವ ಮೂಲಕ ಆರೋಗ್ಯ ಸಮಾಲೋಚನೆ ಮತ್ತು ರೋಗನಿರ್ಣಯ ಸೇವೆಗಳನ್ನು ನೀಡಲಾಯಿತು.
ಈ ಉಪಕ್ರಮದ ಭಾಗವಾಗಿ ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಕಣ್ಣಿನ ಪರೀಕ್ಷೆ, ದಂತ ತಪಾಸಣೆ, ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ), ೨ಡಿ ಎಕೋಕಾರ್ಡಿಯೋಗ್ರಫಿ (೨ಡಿ ಎಕೋ) ತಪಾಸಣೆಗಳನ್ನು ಮಾಡಲಾಯಿತು.
ಶ್ರೀ ಬಿ.ಎಲ್. ಚಾಂದವಾನಿ, ಕಾರ್ಯಪಾಲಕ ನಿರ್ದೇಶಕರು, ವಿಐಎಸ್‌ಎಲ್ ಮತ್ತು ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ವಿಐಎಸ್‌ಎಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿಐಎಸ್‌ಎಲ್‌ನ ಅಧಿಕಾರಿಗಳಾದ ಶ್ರೀ ಎಲ್. ಪ್ರವೀಣ್ ಕುಮಾರ್, ಡಾ|| ಕೆ.ಎಸ್. ಸುಜೀತ್ ಕುಮಾರ್, ಡಾ|| ಸುಷ್ಮಾ, ಉಪ ಮುಖ್ಯ ವೈದ್ಯಾಧಿಕಾರಿ, ಡಾ|| ಎಸ್.ಎನ್. ಸುರೇಶ್, ದಂತ ವೈದ್ಯರು. ಶ್ರೀ ಎಮ್.ಎಲ್. ಯೋಗೀಶ್, ಶ್ರೀಮತಿ ಅಪರ್ಣ, ಸಹಾಯಕ ಪ್ರಬಂಧಕರು (ವೈಧ್ಯಕೀಯ). ಶಂಕರ ಕಣ್ಣಿನ ಆಸ್ಪತ್ರೆಯ ಡಾ|| ಶೈರಿನ್ ನಾಝ್, ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಡಾ|| ಸುಪ್ರೇಥ್, ಡಾ|| ಬಸವರಾಜ್, ಭದ್ರಾವತಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಸೂಪರಿನ್‌ಟೆಂಡೆಂಟ್ ಶ್ರೀಮತಿ ಪ್ರೇಮಲತಾ. ಶ್ರೀಮತಿ ಭಾಗ್ಯಮ್ಮ, ಅಧ್ಯಕ್ಷೆ, ಹಿರಿಯೂರು ಗ್ರಾಮ ಪಂಚಾಯ್ತಿ, ತಾರೀಕಟ್ಟೆ ಶ್ರೀ ರಾಮ ದೇವಸ್ಥಾನ ಸೇವಾ ಟ್ರಸ್ಟ್ನ ಅಧ್ಯಕ್ಷರು ಶ್ರೀ ಜಯರಾಮ್, ತಾರೀಕಟ್ಟೆ ಗ್ರಾಮ ಪಂಚಾಯ್ತಿ ಸದಸ್ಯರಾದ ಶ್ರೀ ಬಿ.ಸುರೇಶ್, ಶ್ರೀ ವೆಂಕಟೇಶ್, ಕಾರ್ಯದರ್ಶಿ, ತಾರೀಕಟ್ಟೆ ಶ್ರೀ ರಾಮ ದೇವಸ್ಥಾನ ಸೇವಾ ಟ್ರಸ್ಟ್ ಭಾಗವಹಿಸಿದ್ದರು.
‘ಹಸಿರೆಡೆಗೆ-ನಮ್ಮ ನಡೆ’ (‘ಉo-ಉಡಿeeಟಿ’) ಉಪಕ್ರಮದಡಿಯಲ್ಲಿ ೭೫೦ ನುಗ್ಗೆ, ಪಪ್ಪಾಯ, ಹಲಸು, ಮಾವು, ತುಳಸಿ ಸಸಿಗಳನ್ನು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಾಯಿತು
