Wednesday, February 4, 2026
Wednesday, February 4, 2026

Shivamogga District Chamber of Commerce and Industry ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆ ಕುರಿತ ಕಾರ್ಯಾಗಾರ

Date:

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಕೆ.ಟಿ. ಶಾಮಯ್ಯ ಗೌಡ ರಸ್ತೆ, ಸಿಟಿ ಕ್ಲಬ್ ಹಿಂಬಾಗ ದಿನಾಂಕ: 20\08\2025 ನೇ ಬುದವಾರ ಸಂಜೆ 4:30ಕ್ಕೆ ಸರಿಯಾಗಿ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ”Outreach programme on Pradhan Mantri Viksit Bharath Rozgar Yojana” (PM-VBRY) ಎಂಬ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಿದ್ದು, ಕಾರ್ಯಕ್ರಮವನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗದ ಜಂಟಿ ನಿರ್ದೇಶಕರಾದ ಶ್ರೀ ಆರ್ ಗಣೇಶ್‌ರವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಿ.ಗೋಪಿನಾಥ್‌ರವರು ವಹಿಸಲಿರುವರು. Shivamogga District Chamber of Commerce and Industry ಸರ್ಕಾರದ ಭವಿಷ್ಯನಿಧಿ ನಿಯಮಗಳಲ್ಲಿನ ನೂತನ ಬದಲಾವಣೆಗಳು ಮತ್ತು ಉದ್ಯೋಗದಾತರುಗಳಿಗೆ, ಉದ್ಯೋಗಿಗಳಿಗೆ ಸೌಲಭ್ಯಗಳ ಅನುಕೂಲದ ಬಗ್ಗೆ ಮುಖ್ಯ ಉಪನ್ಯಾಸಕರಾಗಿ ಜಿಲ್ಲಾ ಉದ್ಯೋಗಾಧಿಕಾರಿ, ಶ್ರೀ ಖಲಂದರ್‌ಖಾನ್ ಮತ್ತು ನೌಕರರ ಭವಿಷ್ಯನಿಧಿ ಕಛೇರಿಯ ಲೆಕ್ಕಾಧಿಕಾರಿಯವರಾದ ಶ್ರೀ ಟಿ.ಎಸ್ ಸುನಿಲ್‌ರವರು ಉಪನ್ಯಾಸ ನೀಡಲಿದ್ದಾರೆ ಸಂಘದ ಮಾನ್ಯ ಸದಸ್ಯ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ಲೆಕ್ಕಪರಿಶೋಧಕರು, ತೆರಿಗೆ ಸಲಹೆಗಾರರು, ವೃತ್ತಿಪರರು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಗೌರವ ಕಾರ್ಯದರ್ಶಿ ಶ್ರೀ ಎ.ಎಂ. ಸುರೇಶ್‌ರವರು ಸಂಘದ ಪ್ರಕಟಣೆಯಲ್ಲಿ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...