Krishna Janmashtami ಶಿವಮೊಗ್ಗ ಹೊಸಮನೆ ಬಡಾವಣೆಯ ಪ್ರಸಿದ್ಧ ಕಲ್ಪತರು ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪುಟಾಣಿ ಮಕ್ಕಳಿಗಾಗಿ ರಾಧಾ ಕೃಷ್ಣರ ವೇಷಭೂಷಣ ಸ್ಪರ್ಧೆ ಜರುಗಿತು. ತಾಯ್ತಂದೆಯರು ಮಕ್ಕಳಿಗೆ ಭಕ್ತಿಯಿಂದ ವೇಷಭೂಷಣ ಮಾಡಿಸಿ ಕಳುಹಿಸಿದ್ದು, ಪುಟಾಣಿಗಳ ಕಲೆ-ಭಕ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಉತ್ತಮ ವೇಷಭೂಷಣ ತೊಟ್ಟ ನಾಲ್ವರು ಮಕ್ಕಳಿಗೆ ಬಹುಮಾನ ನೀಡಿ, ಎಲ್ಲರಿಗೂ ನೀತಿಕಥೆ ಪುಸ್ತಕ, ಬರವಣಿಗೆಯ ಪುಸ್ತಕ, ಪೆನ್ಸಿಲ್, ರಬ್ಬರ್ ಮತ್ತು ಸಿಹಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಅಧ್ಯಕ್ಷ ಶ್ರೀ ವಿಶ್ವನಾಥ ನಾಯಕ ಅವರು ಬಹುಮಾನ ವಿತರಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀ ಸಿ.ಎನ್. ಮಲ್ಲೇಶ್ ಅವರು ಶ್ರೀಕೃಷ್ಣ ಶ್ಲೋಕಗಳನ್ನು ಹೇಳಿ ಪುಟಾಣಿಗಳನ್ನು ಪ್ರೇರೇಪಿಸಿದರು.
ಪುರೋಹಿತರಾದ ಶ್ರೀ ಸಂತೋಷ್ ಭಟ್ ಅವರು ಕೃಷ್ಣ ಮಹಿಮೆಯ ಸುಂದರವಾದ ಗೀತೆ ಹಾಡಿ ಮಕ್ಕಳಿಗೆ ಸಂತೋಷ ತುಂಬಿದರು.
Krishna Janmashtami ಕಾರ್ಯಕಾರಿ ಸಮಿತಿಯ ಸದಸ್ಯರು ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಕೊನೆಯಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ದೇವಾಲಯದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸಲಾಯಿತು.
