Innerwheel Club Shivamogga ಸಮಾಜಮುಖಿ ಕಾರ್ಯಗಳಲ್ಲಿ ನಮ್ಮ ಸಂಸ್ಥೆ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಅಧ್ಯಕ್ಷೆ ಲತಾ ಎಂ ರಮೇಶ್ ಹೇಳಿದರು.
ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ವತಿಯಿಂದ ವಿಶ್ವ ಹಿರಿಯರ ನಾಗರಿಕರ ದಿನಾಚರಣೆ ಪ್ರಯುಕ್ತ ಹಾಗೂ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸಿದ್ದ ಹಿರಿಯ ನಾಗರಿಕರೊಂದಿಗೆ ಸುಂದರ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ, ಆರೋಗ್ಯ ಸೇರಿದಂತೆ ವೈವಿಧ್ಯ ಕ್ಷೇತ್ರಗಳಲ್ಲಿ ಸೇವಾ ಮನೋಭಾವದಿಂದ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಶಾಲಾ ಮಕ್ಕಳಿಗೆ ನೆರವು, ಶಾಲೆಗಳಿಗೆ ಮೂಲಸೌಕರ್ಯ, ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ತಪಾಸಣಾ ಶಿಬಿರ ಹಮ್ಮಿಕೊಳ್ಳುತ್ತಿದೆ. ಸೇವಾ ಆಶಯದಿಂದ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ರೋಟರಿ ಕ್ಲಬ್ ನಿಂದ “ಆಚಾರ್ಯ ದೇವೋಭವ” ಪ್ರಶಸ್ತಿ ಗಳಿಸಿದ ಇಂದಿರಾ ಮೂರ್ತಿ ಅವರು ಶಾರದೆ, ಕೃಷ್ಣ, ರಾಮನ ಹಾಡುಗಳನ್ನು ವೀಣೆ ನುಡಿಸುವುದರ ಮೂಲಕ ಸುಲಲಿತವಾಗಿ ಹಾಡನ್ನು ಹಾಡಿ ಎಲ್ಲರ ಮನ ಗೆದ್ದರು. ಮಾಧವ ಆಚಾರ್ಯರು ಗೋವರ್ಧನ ಗೋ ಸಂರಕ್ಷಣಾ ಸಂಸ್ಥೆ ಪರವಾಗಿ ಕೃಷ್ಣನಿಗೆ ಪ್ರಿಯವಾದ “ಗೋವಿನ ಸಂರಕ್ಷಣೆ” ನಮ್ಮೆಲ್ಲರ ಕರ್ತವ್ಯ ಎಂದರು.
Innerwheel Club Shivamogga ಶ್ರೀ ರಂಜಿನಿ ದತ್ತಾತ್ರಿ ಎಲ್ಲರನ್ನು ಸ್ವಾಗತಿಸಿದರು. ಇನ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗ ಕಾರ್ಯದರ್ಶಿ ಶ್ರುತಿ ರಾಕೇಶ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ದತ್ತಾತ್ರಿ, ಕೀರ್ತನಾ, ಸುಧಾ ಮಾಧವಚಾರ್ಯ, ಇನ್ನರ್ ವ್ಹೀಲ್ ಮಾಜಿ ಅಧ್ಯಕ್ಷೆ ಎನ್.ಜಿ.ಉಷಾರವರು ಉಪಸ್ಥಿತರಿದ್ದರು. ಶ್ರೀ ರಂಜಿನಿ ದತ್ತಾತ್ರಿ ಅವರು ಹಲವಾರು ಭಜನೆಗಳನ್ನು ಅವರೊಂದಿಗೆ ಹಾಡಿ ಸಂಭ್ರಮಿಸಿದರು.
