B.Y.Raghavendra ಕುವೆಂಪು ರಸ್ತೆಯಲ್ಲಿ ರುವ ಹೆಚ್.ಇ. ಕಮರ್ಷಿಯಲ್ ಕಟ್ಟಡದಲ್ಲಿರುವ ವಾಸನ್ ಐ ಕೇರ್ ಆಸ್ಪತ್ರೆಯ ವಿಸ್ತರಣೆ ಹಾಗೂ ಹೊಸ ಸುಧಾರಿತ ತಂತ್ರಜ್ಞಾನ ಒಳಗೊಂಡ ಹಾಗೂ ನವೀಕರಣಗೊಂಡಿರುವ ಕಟ್ಟಡದ ಉದ್ಘಾಟನೆಯನ್ನು ಸಂಸದ ಬಿ.ವೈ ರಾಘವೇಂದ್ರ ಉದ್ಘಾಟನೆ ಮಾಡಿದರು.
2012ರಲ್ಲಿ ಶಿವಮೊಗ್ಗದಲ್ಲಿ ಆರಂಭವಾದ ಆಸ್ಪತ್ರೆಯಲ್ಲಿ ವಿಶ್ವಮಟ್ಟದ ಕಣ್ಣಿನ ಚಿಕಿತ್ಸೆ ಯನ್ನು ಅತ್ಯಂತ ಸಮರ್ಪಕ ವೆಚ್ಚದಲ್ಲಿ ನೀಡಲಾಗುತ್ತಿದ್ದು, ಶಿವಮೊಗ್ಗದ ಜನತೆ ಈ ಆಸ್ಪತ್ರೆಯ ಉಪಯೋಗವನ್ನು ಪಡಿಸಿಕೊಳ್ಳವೇಕು ಎಂದು ಸಂಸದರು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಇದುವರೆಗೂ 19 ಶಾಖೆಗಳನ್ನು ಹಾಗೂ ದೇಶದಲ್ಲಿ 169 ಶಾಖೆಗಳನ್ನು ಹೊಂದಿರುವ ವಾಸನ್ ಐ ಕೇರೆ ಆಸ್ಪತ್ರೆ ಹೊಸ ಉತ್ಸಾಹದೊಂದಿಗೆ ಇಂದಿನಿಂದ ಕಾರ್ಯನಿರ್ವಹಿಸಲಿದೆ..
ಈಗಾಗಲೇ ಆಸ್ಪತ್ರೆಯಲ್ಲಿ ಫೇಕೋಯಂತ್ರ ಮತ್ತು ಅತ್ಯಾಧುನಿಕ ಮೈಕ್ರೋ ಸ್ಕೋಪ್‌ಗಳನ್ನು ಬಳಸಿ ಕಣ್ಣಿನ ಪೊರೆ ಹಾಗೂ ರೆಟಿನಾ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ, ಸಾರ್ವಜನಿಕರಿಗೆ ಉತ್ತಮಸೇವೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.
B.Y.Raghavendra ಪ್ರಸ್ತುತ ಇರುವ ಸೌಲಭ್ಯಗಳಿಗಿಂತ ಹೆಚ್ಚು ಅಂತರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ನವೀಕೃತ ಆಸ್ಪತ್ರೆಯಲ್ಲಿ ಆಳವಡಿಸಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ರಿಯಾಯತಿ ದರದಲ್ಲಿ ಶಸ್ತ್ರಚಿಕಿತ್ಸೆ ನೆಡೆಸಲಾಗುತ್ತದೆ ಎಂದು ನೇತ್ರತಜ್ಞರಾದ ಡಾ. ಚಂದ್ರಕಾಂತ ಪೂಜಾರಿ ಹೇಳಿದ್ರು. ಇನ್ನು ಶಾಖೆಯಲ್ಲಿ ನುರಿತ ನೇತ್ರತಜ್ಞರಾದ ಡಾ. ಆರ್, ಪ್ರಸನ್ನಕುಮಾರ್, ಡಾ. ಗುಣಶ್ರಿ, ಡಾ. ಹೆಚ್, ಜಿ. ರಶ್ಮಿ, ಡಾ. ಶೃತಿ ಬಿದರಿ ಹಾಗೂ ಸಿಬ್ಬಂದಿಗಳು ಇದ್ದು ಸಾರ್ವಜನಿಕ ಸದುಪಯೋಗ ಪಡಿಸಿಕೊಳ್ಳಬೇಕು ವಾಸನ್ ಐ ಕೇರೆ ಡೈರೆಕ್ಟರ್ ಸುಂದರಂ ಮುರುಗೇಶನ್ ತಿಳಿಸಿದರು.
ಕಾರ್ಯಕ್ರಮಕ್ಕೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, , ವಿಜಯಲಕ್ಷ್ಮೀ ಸಿ. ಪಾಟೀಲ್, ಆಗಮಿಸಿ ನವೀಕೃತ ಆಸ್ಪತ್ರೆಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಶುಭಕೋರಿದರು.
