Monday, February 2, 2026
Monday, February 2, 2026

S.N. Channabasappa ರಾಷ್ಟ್ರಗೀತೆ,ರಾಷ್ಡ್ರಧ್ವಜ,& ರಾಷ್ಟ್ರಪ್ರೇಮ‌ ರೂಢಿಸಿ ಅವುಗಳನ್ನ ಗೌರವಿಸುವ ಭಾವನೆಯನ್ನ ನಾವು ಬೆಳೆಸಿಕೊಳ್ಳಬೇಕು- ಎಸ್.ಎನ್.ಚನ್ನಬಸಪ್ಪ

Date:

S.N. Channabasappa ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರ ಪ್ರೇಮವನ್ನು ಪ್ರೀತಿಸುವ, ಗೌರವಿಸುವ ಹಾಗೂ ಆಧರಿಸುವುದನ್ನು ಪ್ರತಿಯೊಬ್ಬ ಪ್ರಜೆಯು ಬೆಳೆಸಿಕೊಳ್ಳಬೇಕು ಎಂದು ಶಿವಮೊಗ್ಗ ಶಾಸಕರಾದ ಶ್ರೀಯುತ ಹೆಚ್.ಎಸ್.ಚನ್ನಬಸಪ್ಪನವರು ಹಿರಿಯ ಸ್ವಾತಂತ್ರ್ಯ ಹೋರಾಟಗರರಾದ ಗಾಂದಿ ಬಸಪ್ಪನವರ ವಂದೇ ಮಾತರಂ ನಿಲಯದ ಮಹಡಿಯ ಮೇಲೆ 79ನೇ ಸ್ವತಂತ್ರ ದಿನಚಾರಣೆಯ ಧ್ವಜರೋಹಣ ಮಾಡುತ್ತಾ ನುಡಿದರು.

ಮುಂದುವರೆದು ಶ್ರೀಯುತರು ಈ ಕುಟುಂಬ ಎರಡು ರಾಷ್ಟ್ರೀಯ ಹಬ್ಬಗಳಾದ ಗಾಂಧಿ ಜಯಂತಿ ಹಾಗೂ ಸ್ವಾತಂತ್ರ್ಯ ದಿನಚಾರಣೆಯನ್ನು ಅರ್ಥಪೂರ್ಣವಾಗಿ 79 ವರ್ಷದಿಂದ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಹಾಗೂ ಅನುಕರಣೀಯ ಎಂದು ನುಡಿದರು.

ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಸಿ.ಎಸ್.ಚಂದ್ರಬೂಪಾಲ್‌ರವರು ಗಾಂಧಿ ಬಸಪ್ಪನವರ ಈ ಮನೆಯಲ್ಲಿ ಬಾಳಿ ಬದುಕಿದವರು, ಕುಟುಂಬದವರು ಅವರ ಆದರ್ಶಗಳನ್ನು ಮೈಗೂಡಿಕೊಂಡಿ ಸಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ನುಡಿದರು.

S.N. Channabasappa ಅಶೋಕ್ ಗಾಂಧಿ ಬಸಪ್ಪನವರಿಂದ ಸ್ವಾಗತ, ವಾಸುದೇವರವರಿಂದ ಅಧ್ಯಕ್ಷರ ನುಡಿ, ಸತೀಶ್‌ರವರಿಂದ ವಂದನಾರ್ಪಣೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಹಿಯನ್ನು ಹಂಚಿ ಸಂಭ್ರಮಿಸಲಾಯಿತು. ನಂತರ ಬಡಾವಣೆಯ ಜನರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...