Independence Day ಶಿವಮೊಗ್ಗ ನಗರದ ಇಸ್ಲಾಪುರದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇಂದು ಸಾಂಸ್ಕೃತಿಕ ಸ್ವಾತಂತ್ರ್ಯೋತ್ಸವವನ್ನು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ವತಿಯಿಂದ ಆಯೋಜಿಸಲಾಗಿತ್ತು, ಶಾಶ್ವತ ಧ್ವಜಸ್ಥಂಭದ ಧ್ವಜಾರೋಹಣವನ್ನು ಶಾಲಾ ಅಭಿವೃದ್ದಿ ಸಮಿತಿಯ ಜಯಲಕ್ಷ್ಮೀ ನೆರವೇರಿಸಿದರು,
ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಅಧ್ಯಕ್ಷರಾದ ಗಾರಾ.ಶ್ರೀನಿವಾಸ್ ರವರು ಮಾತನಾಡಿ ಮಕ್ಕಳಲ್ಲಿ ಆತ್ಮಸ್ಥೇರ್ಯ ವೃದ್ದಿಯಾಗಬೇಕಿದೆ, ಅದರಿಂದ ಅವರೊಳಗಿನ ಸಾಮರ್ಥ್ಯ ಹೊರಬೀಳಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶಾಂತರವರ ಶಿಕ್ಷಕ ತಂಡ ಉತ್ತಮ ಕೆಲಸ ನಿರ್ವಹಿಸುತ್ತಿದೆ, ಶಿಕ್ಷಣಕ್ಕೆ ಎಷ್ಟು ಹೊತ್ತು ಕೊಡಬೇಕು ಅಷ್ಟೆ ಸಾಂಸ್ಕೃತಿಕವಾಗಿಯು ನೀಡಿದ್ದಾರೆ, ಹೀಗಾಗಿಯೇ ಎಲ್ಲಾ ಮಕ್ಕಳಲ್ಲೂ ಕಲಾ ಆಸಕ್ತಿ ತಳೆದಿದೆ ಎಂದರು,
ದೇಶಭಕ್ತಿ ಗೀತೆ, ನೃತ್ಯ, ಭಾಷಣ ಹಾಗೂ ಬಾಲ್ಯವಿವಾಹ ಎಂಬುವ ಸಾಮಾಜಿಕ ಪಿಡಗಿನ ಜ್ವಲತಂತೆಯನ್ನು ಕಿರುನಾಟಕದ ಮೂಲಕ ಕಟ್ಟಿಕೊಟ್ಟ ವಿದ್ಯಾರ್ಥಿಗಳಾದ ಪ್ರಕೃತಿ, ಮಹಾಲಕ್ಷ್ಮೀ, ಚೆಂದನ, ಅನು, ಪಲ್ಲವಿ, ಸಂಜಯ್, ಐಶು, ಪ್ರತಿಕ್ಷ, ಸ್ವಪ್ನ, ತೇಜಸ್‌ರವರ ಪ್ರಯತ್ನ ನಿಜಕ್ಕೂ ಭಾವನಾತ್ಮಕವಾಗಿ ಕೂಡಿತ್ತು, ಅವರಲ್ಲಿನ ಸ್ವಯಂಪ್ರೇರಿತವಾದ ಕಲಾ ಕೌಶಲ್ಯ ಹಾಗೂ ಶಿಕ್ಷಕರ ಪ್ರೋತ್ಸಾಹ ಮೆಚ್ಚುವಂತಹದ್ದು ಎಂದು ವಿವರಿಸಿದರು,
ಸನ್ಮಾನಿತರಾಗಿ ಆಗಮಿಸಿದ್ದ ವಕೀಲರು ಆಗಿರುವ ಎಲ್.ಗೀತಾಮಾನೆ ಅವರು ಮಾತನಾಡಿ, ಸ್ವಾತಂತ್ರ್ಯ ಎಂಬುದು ಹಾಗೆಯೇ ಬಂದಿದ್ದಲ್ಲ ಹಿರಿಯರ ಶ್ರಮ, ಹೋರಾಟ, ತ್ಯಾಗ ಬಲಿದಾನಗಳಿಂದ ಬಂದಿದೆ, ಸ್ವಾತಂತ್ರ್ಯದ ಹಿಂದಿನ ದಿನಗಳು ಹಾಗೂ ನಂತರದ ದಿನಗಳನ್ನು ಉಲ್ಲೇಖಿಸಿದ ಅವರು ಸಾಂವಿಧಾನಿಕವಾದ ಓದು ಹಾಗೂ ಹೋರಾಟಗಾರರ ನಿಲುವುಗಳ ಹೆಜ್ಜೆಗಳನ್ನು ಇಂದು ಸ್ಮರಿಸಲೇಬೇಕು ಜೀವನದ ಜೊತೆಗೆ ನೆನಪು ಮಾಡಿಕೊಳ್ಳಬೇಕಾದ ಹೊತ್ತು ಇದಾಗಿದೆ ಎಂದು ಎಲ್.ಗೀತಾಮಾನೆ ಅವರು ನುಡಿದರು,
Independence Day ಶಿಕ್ಷಣ, ಶಿಕ್ಷಕರವರುಗಳ ಪಾತ್ರ ಬಹುಮುಖ್ಯವಾಗಿದೆ, ಶಿಕ್ಷಕರಾದವರು ದಂಡನೆ ನೀಡದೆ ಹೋದರೆ ವಿದ್ಯಾರ್ಥಿಗಳು ಉತ್ತಮ ಪ್ರಜೆ ಆಗಲು ಸಾಧ್ಯವಾಗುವುದಿಲ್ಲ, ಇದಕ್ಕೆ ಪೋಷಕರು ಕೂಡ ಜವಾಬ್ದಾರಿ ಮೆರೆದು ಶಿಕ್ಷಕರಿಗೆ ಬೆಂಬಲಿಸುವ ಅಗತ್ಯತೆ ಇದೆ, ಇಲ್ಲವಾದಲ್ಲಿ ಹದಿಹರೆಯದ ಅವರ ಅಪ್ರಬುದ್ದತೆಯ ತಪ್ಪಿಗೆ ಮುಂದೊಂದು ದಿನ ಅದು ಮುಂದುವರೆದು ಜೈಲಿನಲ್ಲಿ ಕಾಲ ದೂಡುವ ಸಂದರ್ಭಗಳು ಎದುರಾಗಬಹುದು ಹೀಗಾಗಿ ಶಿಕ್ಷಣದ ಆಸಕ್ತಿಯೊಂದಿಗೆ ಶಿಕ್ಷಕರಿಗೆ ಗೌರವಿಸುವ ಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು
ಈ ಸಂದರ್ಭದಲ್ಲಿ ವಕೀಲರಾದ ಎಲ್.ಗೀತಾಮಾನೆ ಅವರಿಗೆ ಸನ್ಮಾನಿಸಲಾಯಿತು, ಹಾಗೂ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ನಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಲಾಯಿತು, ವೇದಿಕೆಯಲ್ಲಿ ನಿವೃತ್ತ ಪ್ರಾಧ್ಯಪಕರಾದ ಪುಷ್ಪಾವತಿ ಹಾಗೂ ಶಾಲಾ ಅಭಿವೃದ್ದಿ ಸಮಿತಿಯ ಜಯಲಕ್ಷ್ಮೀ ರವರುಗಳು ಉಪಸ್ಥಿತರಿದ್ದರು,
ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಉಮಾ, ಲೀಲಾವತಿ, ನಿವೃತ್ತ ಶಿಕ್ಷಕಿ ಸರೋಜ, ಹಾಗೂ ಪೋರಂ ನ ನವೀನ್ ತಲಾರಿ, ಪರಮೇಶ್ವರ್, ಅನಿಲ್, ಭರತ್ ಗುತ್ತಿ, ಚಿರಂಜೀವಿ ಬಾಬು, ಸಿದ್ದರಾಮ ಅವರುಗಳು ಭಾಗವಹಿಸಿದ್ದರು.
