Shri Mallikarjuna Murugarajendra Shri ಮನೆ ಮನೆಗಳಲ್ಲಿ ಧಾರ್ಮಿಕ ಚಿಂತನೆ ಮೂಡಿಸುವಲ್ಲಿ ಶ್ರಾವಣ ಚಿಂತನ ಕಾರ್ಯಕ್ರಮ ಹೆಚ್ಚು ಪ್ರಭಾವಿಸುತ್ತದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಕೃಷಿ ನಗರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ವತಿಯಿಂದ ಶಿವಗಂಗಾ ಯೋಗ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಶ್ರಾವಣ ಚಿಂತನ 2025 ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ವ್ಯಕ್ತಿ ಮಾತ್ರವಲ್ಲ, ಶಕ್ತಿ, ಸತ್ಯ, ಶಾಶ್ವತ ಬೆಳಕು. ಬದುಕಿನ ಪ್ರತಿಯೊಂದು ಶ್ರೇಷ್ಠ ಚಿಂತನೆ, ಪ್ರತಿಯೊಂದು ದಯಾ ಕರುಣೆ ಗುರುವಿನ ಪ್ರತಿಫಲನ ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಮಾತನಾಡಿ, ಜೀವನದ ಬೆಳವಣಿಗೆಯಲ್ಲಿ ಗುರುಗಳ ಮಾರ್ಗದರ್ಶನ ಅವಶ್ಯ. ರೋಟರಿ ಚಟುವಟಿಕೆಗಳು ಸಮಾಜಸೇವೆಯ ಪಥದಲ್ಲಿ ದೀಪದಂತೆ ಬೆಳಗುತ್ತವೆ ಎಂದರು.
ವಿದ್ವಾನ್ ಜಿ.ಎಸ್.ನಟೇಶ್ ಅವರು “ಮುದದಿ ಬೆಳಕ ತೋರಿದಂತಯ್ಯ ಗುರು” ಎಂಬ ಮಂಕುತಿಮ್ಮನ ಕಗ್ಗದ ಪದ್ಯ ಉಲ್ಲೇಖಿಸಿ, ಗುರುವಿನ ಸಾನಿಧ್ಯ ಜೀವನದ ಕತ್ತಲೆಯನ್ನು ಶಾಶ್ವತವಾಗಿ ತೊಲಗಿಸುವ ದಿವ್ಯ ಜ್ಯೋತಿ ಎಂದು ವಿವರಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಕಾರ್ಯದರ್ಶಿ ನಿತಿನ್ ಯಾದವ್ ಮಾತನಾಡಿ, ತಂದೆ ತಾಯಿಯೇ ಮೊದಲ ಗುರುಗಳು ಎಂದು ತಿಳಿಸಿದರು.
Shri Mallikarjuna Murugarajendra Shri ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಅವರು ಗುರುಪ್ರೇರಿತ ಜೀವನದಲ್ಲಿ ಆರೋಗ್ಯ, ಯೋಗಾಭ್ಯಾಸ ಮತ್ತು ಧಾರ್ಮಿಕ ಹವ್ಯಾಸಗಳ ಮೌಲ್ಯವನ್ನು ತಿಳಿಸಿದರು.
ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ವಲಯ ಸೇನಾನಿ ಎಸ್.ಪಿ.ಶಂಕರ್, ಸುರೇಶ್, ಮಲ್ಲೇಶ್, ಬಿಂದು ವಿಜಯ ಕುಮಾರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಸಚ್ಚಿದಾನಂದ, ಅನಿಲ್, ನೀಲಕಂಠ ರಾವ್, ರವಿ, ಕುಸುಮ, ಜ್ಯೋತಿ, ನಾಗರತ್ನ, ಸುಮಾ ನಟರಾಜ್, ಸುಜಾತ, ವಿಜಯ ಬಾಯರ್, ಚಂದ್ರಪ್ಪ, ಮಾಜಿ ಅಧ್ಯಕ್ಷರಾದ ಎಂ ಆರ್ ಬಸವರಾಜ್, ಎಸ್ ಪಿ ಶಂಕರ್, ದೇವೇಂದ್ರಪ್ಪ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಹಾಜರಿದ್ದರು.
