Holalur Canara Bank Rural Self-Employment Training Centre ಶಿವಮೊಗ್ಗ ಸ್ಥಳಿಯ ಹೊಳಲೂರು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಮಾಜಿ ಪ್ರಧಾನರಾದ ಶ್ರೀಯುತ ಕೆ ಜಿ ನಿಂಗಪ್ಪನವರು ನೆರವೇರಿಸಿದರು. ಶ್ರೀತರು ಮಾತನಾಡುತ್ತ ಸ್ವಾತಂತ್ರ್ಯ ಹೋರಾಟಕ್ಕಾಗಿ ಅನೇಕ ರಾಷ್ಟ್ರಭಕ್ತರದ ಮಹಾತ್ಮ ಗಾಂಧೀಜಿ ಸುಭಾಷ್ ಚಂದ್ರ ಬೋಸ್ ಮುಂತಾದ ಮಹಾನ್ ಆದರ್ಶ ವ್ಯಕ್ತಿಗಳ ಆದರ್ಶಗಳನ್ನ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಅವರ ತ್ಯಾಗ ಬಲಿದಾನವನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದರು. Holalur Canara Bank Rural Self-Employment Training Centre ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಸುರೇಶ್ ವೈ ಹಳ್ಳಿ, ದೀಪ, ಪ್ರೀತಿ ಹಾಗೂ ನಾಗರಾಜ್ ರವರು ಮಾತನಾಡಿದರು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್ ತರಬೇತಿಯ ಫಲಾನುಭವಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಅನೇಕ ಸ್ವತಂತ್ರ ಹೋರಾಟಗಾರರ ವೇಷಭೂಷಣವನ್ನು, ದೇಶಭಕ್ತಿ ಗೀತೆ, ಜನಪದ ಗೀತೆ, ದೇಶಪ್ರೇಮದ ಕುರಿತು ಅನೇಕ ನೃತ್ಯಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Holalur Canara Bank Rural Self-Employment Training Centre ರಾಷ್ಟ್ರಭಕ್ತರ ಆದರ್ಶಗಳನ್ನ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ಕೆ.ಜಿ.ನಿಂಗಪ್ಪ
Date:
