BGS School-College ನಮ್ಮದೇಶ ಹಳ್ಳಿಗಳ ನಾಡು ಹಲವು ಜಾತಿ, ಮತ,ಧರ್ಮಗಳ, ಭೇದ ಭಾವ ವಿಲ್ಲದ ದೇಶ ಯಾವುದಾದರು ಇದೆ ಅಂದರೆ ಅದು, ಪ್ರಪಂಚದಲ್ಲಿಯೇ ನಮ್ಮ ದೇಶ ಮಾತ್ರ. ಹಾಗಾಗಿಯೇ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಏಕೈಕ ರಾಷ್ಟ್ರ ಭಾರತ ದೇಶ ಮಾತ್ರ ಎಂದು ನಿವೃತ ಆರ್ಮಿ ಸುಬೇದಾರ್ ಚಂದ್ರಪ್ಪ ಬಿ. ಅಭಿಪ್ರಾಯಪಟ್ಟರು.
ಅವರು ಗುರುಪುರದ ಬಿಜಿಎಸ್ ಶಾಲಾ- ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ 79 ನೇ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ದೇಶ ಈಗ ಹೊಂದುತ್ತಿರುವ ಅಭಿವೃದ್ಧಿಯ ಹೆಜ್ಜೆಗಳು ಸದ್ಯದಲ್ಲೇ ಇನ್ನಷ್ಟು ಒಳ್ಳೆಯ ನಿರೀಕ್ಷಿತ ಫಲ ನೀಡುತ್ತವೆ ಎಂದು ಹೇಳಿದರು.
ಡಾ.ಬಿ.ಆರ್ ಅಂಬೇಡ್ಕರ್ ಅವರು ರಚಿಸಿದಂತಹ ಸಂವಿಧಾನದಿಂದ ಶಿಕ್ಷಣ, ಬಡತನ, ಹಸಿವಿನಿಂದ ಇಂಗಿಸುವ ಜೊತೆಗೆ ಇನ್ನಷ್ಟು ವೈಜ್ಞಾನಿಕವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯವಾಯಿತು ಎಂದರು.
1947ರ ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಐತಿಹಾಸಿಕ ನೆನಪುಗಳನ್ನು ತಿರುವಿನೋಡಿದಾಗ ನಾವೀಗ ಸಬಲರು ಹಾಗೂ ಸುಜ್ಞಾನಿಗಳು ಆಗುವಂತಹ ದಿಟ್ಟ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಅಂತಹ ಹೆಜ್ಜೆಗೆ ಇಂದಿನ ಮಕ್ಕಳೇ ಸ್ಪೂರ್ತಿ, ಹಾಗಾಗಿ ನೀವು ದೇಶ ಪ್ರೇಮದ ಜೊತೆಗೆ, ದೇಶದ ಅಭಿವೃದ್ದಿಗೆ ಕೈ ಜೋಡಿಸುವಂತೆ ಮಕ್ಕಳಿಗೆ ಕರೆ ನೀಡಿದರು.
BGS School-College ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್. ಮಾತನಾಡುತ್ತಾ, ದೇಶ ಅಭಿವೃದ್ಧಿ ಹೊಂದಲು ನೀವುಗಳು ಈ ಕ್ಷಣದಿಂದಲೇ ಬದಲಾವಣೆ ತಂದುಕೊಳ್ಳುವ ಅಗತ್ಯವಿದೆ.ಓದಿನ ವಿಷಯಗಳ ಬಗ್ಗೆ ಶ್ರದ್ದೆ, ಹಾಗೂ ಸಮಯಪ್ರಜ್ಞೆ ಹೊಂದಬೇಕಿದೆ. ವಿಶೇಷವಾಗಿ ಎಲ್ಲರೂ ದೇಶದ ಬಗ್ಗೆ ಅಭಿಮಾನವನ್ನು ಹೊಂದುವಂತರಾಗ ಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಹರೀಶ್, ಶಿಕ್ಷಕರು,ಉಪನ್ಯಾ ಸಕರು,ಇನ್ನು ಮುಂತಾದವರು ಉಪಸ್ಥಿತರಿದ್ದರು. ಶಾಲಾ ಕಾಲೇಜಿನ ಮಕ್ಕಳಿಂದ ಸ್ವಾತಂತ್ರ ಹೋರಾಟಗಾರರ ಬಗ್ಗೆ ಮಾತನಾಡಿದರು ಮತ್ತು ದೇಶಭಕ್ತಿ ಗೀತೆಯನ್ನು ಹಾಡಿದರು.
