Saturday, December 6, 2025
Saturday, December 6, 2025

Rotary Club Shimoga Midtown ನಮ್ಮ ಭಾರತ ಪರಿವರ್ತನೆಯೆಡೆಗೆ ಸಾಗುತ್ತಿದೆ- ಮಹಾಲಿಂಗಪ್ಪ

Date:

Rotary Club Shimoga Midtown ನಮ್ಮ ರಾಷ್ಟ್ರ ಪರಿವರ್ತನೆಯಡೆಗೆ ಸಾಗುತ್ತಿದೆ -ಮಹಾಲಿಂಗಪ್ಪ
ಹಿಂದೆ ವಿದೇಶದಲ್ಲಿ ಭಾರತೀಯರಿಗೆ ಹೆಚ್ಚಿನ ಗೌರವ ಇರಲಿಲ್ಲ. ಆದರೆ ಈಗ ನಮ್ಮ ಪ್ರಜೆಗಳನ್ನು ಕಂಡರೆ ವಿಶೇಷ ಗೌರವದಿಂದ ಭಾರತೀಯರೆ ಎಂದು ನೋಡುತ್ತಿದ್ದಾರೆ, ಇದರಿಂದ ತಿಳಿಯುತ್ತದೆ ನಮ್ಮ ಭಾರತ ದೇಶ ಪರಿವರ್ತನೆಯಡೆಗೆ ಸಾಗುತ್ತಿದೆ ಎಂದು ರೋಟರಿ ಶಿವಮೊಗ್ಗ ಜ್ಯುಬಿಲಿ ಕ್ಲಬ್ ನ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಹಾಲಿಂಗಪ್ಪ ನವರು ಮಾತನಾಡುತ್ತಿದ್ದರು.
ಬೇರೆ ದೇಶದಲ್ಲಿ ನಮ್ಮಂತೆ ಪ್ರಕೃತಿ ಅರಿತು ಯಾವುದೇ ಆಚರಣೆ ಇಲ್ಲ. ನಾಮ್ಮಲ್ಲಿ ಪ್ರಕೃತಿಕ ಬದಲಾವಣೆ ತಕ್ಕಂತೆ ಹಬ್ಬ ಆಚರಿಸುವುದು, ಹೆಣ್ಣುಮಕ್ಕಳಿಗೆ, ಹಿರಿಯರಿಗೆ ಗೌರವ ನೀಡುವ ಸಂಸ್ಕೃತಿ ಹೊಂದಿರುವ ದೇಶ ಬೇರೊಂದಿಲ್ಲ. ಕಂಕಣ ಕಟ್ಟಿ ಪೂಜೆ ಮಾಡುತ್ತೇವೆ. ಅದೇ ರೀತಿ ದೇಶ ಕಾಯಲು ಸದಾ ಕಂಕಣ ಕಟ್ಟಿರ ಬೇಕು.
Rotary Club Shimoga Midtown ರಕ್ಷ ಬಂಧನಕ್ಕೆ ಹಲವಾರು ಕಥೆಗಳಿವೆ ಶ್ರೀಕೃಷ್ಣನಿಗೆ, ಸುಭದ್ರೆ ತಾನು ಉಟ್ಟ ದಾವಣಿ ತುದಿ ಹರಿದು ಕೃಷ್ಣನಿಗೆ ಕಟ್ಟಿ ತನ್ನ ರಕ್ಷಣೆ ಕೊನೆಯತನಕ ನಿನ್ನದೆ ಎಂದು ಕೋರಿಕೆ ಸಲ್ಲಿಸಿದ್ದಳು ಎಂದು ಪ್ರತಿಥಿ ಇದೆ. ಪರಿಸರದ ಭಾಗವಾಗಿ ನಾವು ಮೌಲ್ಯ ಕಂಡು ಕೊಂಡಿದ್ದೆವೆ. ಸ್ವಾಮಿ ವಿವೇಕಾನಂದರು ಚಿಕಾಗೊದಲ್ಲಿ ಭಾಷಣ ಮಾಡಿ ಪ್ರಪಂಚವೇ ಕೊಂಡಾಡುವಾಗ, ನಮ್ಮ ದೇಶದಲ್ಲಿಯು ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲು ಶಿಷ್ಯವೃಂದ ತಯಾರಿ ನಡೆಸಿ, ಸಾರೋಟಿನಲ್ಲಿ ಕೂರಿಸಿಕೊಂಡು ತಾವೇ ಏಳೆದೊಯ್ಯಲು ಸಿದ್ದರಾಗಿದ್ದಾಗ, ಅವರು ಹಡಗಿನಿಂದ ಇಳಿದು ದೂರದಲ್ಲಿದ್ದ ಮಣ್ಣಿನಲ್ಲಿ ಹೊರಳಾಡಿ, ಮಲೀನವಾಗಿದ್ದ ದೇಹ, ನನ್ನ ಮಾತೃ ಭೂಮಿ ಮಣ್ಣುತಾಗಿ ಪವಿತ್ರನಾದೆ ಎಂದರಂತೆ.
ಆದರೆ ಇತ್ತೀಚೆಗೆ ನಾಗರೀಕರಲ್ಲಿ ಶಿಷ್ಟಚಾರ ಕಡಿಮೆಯಾಗುತ್ತಿದೆ. ಕಸದ ವಿಲೇವರಿಗಿಂತ ಮುಂಚೆ, ಅದರ ಉತ್ಪತಿಯನ್ನು ಕಡಿಮೆ ಮಾಡುವ ಬಗ್ಗೆ ಗಮನ ಹರಿಸಿ. ಹೀಗೆ ಚಿಕ್ಕ ಚಿಕ್ಕ ವಿಚಾರಗಳಲ್ಲಿ ಪರಿವರ್ತನೆ ತಂದು ದೇಶದ ಗೌರವ ಕಾಪಾಡುವ ಜವಾಬ್ದಾರಿ ನಮ್ಮ ನಾಗರೀಕರದೆ ಎಂದರು. ಅಧ್ಯಕ್ಷತೆ ವಹಿಸಿದ್ದ ರೊ.ಬಿ.ಎಸ್.ಅಶ್ವಥ್ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಉಮೇಶ್ ವಂದಿಸಿದರು. ಭಾರದ್ವಾಜ್, ನಾಗರಾಜ್, ವಿಮಲರೇವರ್ಣಕರ್, ನವೀನ್, ಹೇಮಶೇಖರ್, ಸುಬ್ರಮಣ್ಯ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...