Santhosh MS ದಿನಾಂಕ 13.8.2025ರಂದು ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಮಂಜುನಾಥ್ ನಾಯಕ್ ರವರು ಜಿಲ್ಲಾ ವಕೀಲರ ಸಂಘದ ಭವನದಲ್ಲಿ ಶಿವಮೊಗ್ಗ ತಾಲೂಕಿನ ಎಲ್ಲಾ ರಾಷ್ಟ್ರೀಕೃತ ಬ್ಯಾಂಕಿನ ವ್ಯವಸ್ಥಾಪಕರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಲಾದ ಖಾಯಂ ಲೋಕ ಅದಾಲತ್ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಮಂಗಳೂರಿನ ಕಾಯಂ ಲೋಕ ಅದಾಲತ್ನಲ್ಲಿ ಈ ಮುಂಚೆ ಸೇವೆ ಸಲ್ಲಿಸುತ್ತಿದ್ದ ಹಾಗೂ ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನಾಯಾಧೀಶರಾಗಿರುವಂತಹ ಶ್ರೀ ಅಭಯ ಧನ್ಪಾಲ ಚೌಗಲಾ ರವರು ಖಾಯಂ ಲೋಕ ಅದಾಲತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅವರು ಪಡೆದುಕೊಂಡ ತಮ್ಮ ಅನುಭವವನ್ನು ಹಂಚಿಕೊಂಡು ಖಾಯಂ ಲೋಕ ಅದಾಲತ್ ಪ್ರಕರಣಗಳ ಶೀಘ್ರ ವಿಲೇವಾರಿಗೆ ಮತ್ತು ಅತಿ ವೇಗದಲ್ಲಿ ಪರಿಹಾರವನ್ನು Santhosh MS ಪಡೆದುಕೊಳ್ಳುವ ಉಪಯುಕ್ತ ವೇದಿಕೆಯಾಗಿದೆ ಎಂದು ಎಲ್ಲಾ ವ್ಯವಸ್ಥೆಗಳಿಗೆ ಮಾಹಿತಿಯನ್ನು ನೀಡಿದರು. ಈ ವೇಳೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜಿ ಆರ್ ರಾಘವೇಂದ್ರ ಸ್ವಾಮಿ ರವರು ಮಾತನಾಡಿ ಖಾಯಂ ಲೋಕ ಅದಾಲತ್ ನಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸುವಲ್ಲಿ ಎಲ್ಲಾ ವಕೀಲರಿಗೂ ಈ ವಿಷಯದ ಬಗ್ಗೆ ಚರ್ಚೆಯಿಂದಾಗಿ ಹೆಚ್ಚಿನ ಪ್ರಕರಣಗಳು ದಾಖಲಿಸುವಲ್ಲಿ ಅನುಕೂಲವಾಯಿತು ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಶ್ರೀ ಸಂತೋಷ ಎಂ ಎಸ್ ರವರು ಎಲ್ಲರನ್ನು ಸ್ವಾಗತಿಸಿದರು. ಅರೆ ಕಾಲಿಕ ಕಾನೂನು ಸ್ವಯಂಸೇವಕರಾದ ಶ್ರೀ ವೆಂಕಟೇಶ ಎಸ್ ಬಿ ರವರು ವಿಷಯದ ಕುರಿತು ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರಿಗೆ ಮಾಹಿತಿಯನ್ನು ನೀಡಿದರು.
Santhosh MS ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಖಾಯಂ ಲೋಕ್ ಅದಾಲತ್ ಕುರಿತು ಮಾಹಿತಿ ನೀಡಿದ ನ್ಯಾ.ಮಂಜುನಾಥ್ ನಾಯಕ್
Date:
