Sunday, March 22, 2026
Sunday, March 22, 2026

Gurudatta Hegde ಸಾರ್ವಜನಿಕ ಶಾಂತಿ ,ಸುವ್ಯವಸ್ಥೆ ದೃಷ್ಟಿಯಿಂದ ಸೆ.5 ರಿಂದ 10 ರವರೆಗೆ ಜಿಲ್ಲಾದ್ಯಂತ ಡಿಜೆ ಸಿಸ್ಟಂ ಬಳಕೆ ನಿಷೇಧಾಜ್ಞೆ- ಗುರುದತ್ತ ಹೆಗಡೆ.

Date:

Gurudatta Hegde ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ಪೂರ್ಣಗೊಳ್ಳುವವರೆಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ದಿ: 27-08-202025 ರಿಂದ 15-09-2025 ರವರೆಗೆ ಡಿಜೆ ಸಿಸ್ಟಂ ಬಳಕೆಯನ್ನು ನಿಷೇಧಗೊಳಿಸಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಆದೇಶಿಸಿರುತ್ತಾರೆ.
ದಿ: 27-08-2025 ರಂದು ಗಣೇಶ ಹಬ್ಬದ ಪ್ರಯಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ, ನಂತರ ವಿವಿಧ ದಿನಗಳಂದು ವಿಸರ್ಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು ಆ.27 ರಿಂದ ಸೆ.15 ರವರೆಗೆ ಒಟ್ಟು 20 ದಿನಗಳ ಕಾಲ ಜಿಲ್ಲೆಯಲ್ಲಿ ಪ್ರಮುಖ, ಅತಿಸೂಕ್ಷ್ಮಮ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಿದ್ದಾರೆ. ಹಾಗೂ ದಿ:05-09-2025 ರಿಂದ 10-09-2025 ರವರೆಗೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬ ಆಚರಿಸಲಿದ್ದಾರೆ.
ಈ ಆಚರಣೆಗಳ ಸಂದರ್ಭದಲ್ಲಿ ಡಿಜೆ ಸಿಸ್ಟಂಗಳನ್ನು ಉಪಯೋಗಿಸುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ, Gurudatta Hegde ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವುದರೊAದಿಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ, ಸೌಹಾರ್ದತೆ ಮತ್ತು ಶಾಂತಿ ಕಾಪಾಡುವ ಸಲುವಾಗಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆಗಳು ಪೂರ್ಣಗೊಳ್ಳುವವರೆಗೆ ಜಿಲ್ಲೆಯಾದ್ಯಂತ ಡಿಜೆ ಸಿಸ್ಟಂಗಳ ಬಳಕೆಯನ್ನು ನಿಷೇಧಿಸಿ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sagara News ಸಾಗರದಲ್ಲಿ “ಕ್ಯಾಂಪಸ್ ಕಟ್ಟೆ”.ಸಾಧಕಿಯರ ಬಗ್ಗೆ ವಿದ್ಯಾರ್ಥಿನಿಯರಿಂದ ಪರಿಚಯ.

Sagara News ಮಹಿಳಾ ಸಬಲೀಕರಣ ಪ್ರಾಮುಖ್ಯತೆ ಪಡೆಯುತ್ತಿರುವ ಅದೂ ಮಹಿಳಾ ದಿನಾಚರಣೆಯ...

Bakkeshwara Swamy Rathotsava ದಾವಣಗೆರೆ ಹೃದಯಭಾಗದ ರಾಜಬೀದಿಯ ಏಕೈಕವಾದ ಶ್ರೀಬಕ್ಕೇಶ್ವರ ಮಹಾರಥೋತ್ಸವ. ...

Bakkeshwara Swamy Rathotsava ದಾವಣಗೆರೆಯು ಅನಾದಿಕಾಲದಿಂದಲೂ ವ್ಯಾಪಾರೋದ್ಯಮಕ್ಕೆ ಪ್ರಸಿದ್ಧವಾದ ಕೇಂದ್ರವಾಗಿದ್ದು 1801...

KFD ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷಎರಡನೇ ಬಲಿ.

KFD ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಟ್ಟಿಕೇವಿಯಲ್ಲಿ ಮಂಗನ ಕಾಯಿಲೆಗೆ ಈ...

Cheetah Attack ಮುತ್ತಗಿ ಗ್ರಾಮದ ರೈತನ ಮೇಲೆ ಚಿರತೆ ಹಠಾತ್ ದಾಳಿ. ಮೆಗ್ಗಾನ್ ಆಸ್ಪತ್ರೆಗೆ ರೈತ ದಾಖಲು.

Cheetah Attack ಶಿಕಾರಿಪುರ ತಾಲ್ಲೂಕಿನ ತಡಸನಹಳ್ಳಿ, ಅಡಗಂಟಿ, ಮುತ್ತಗಿ ಗ್ರಾಮದ ರೈತರ...