World Elephant Day ವಿಶ್ವ ಆನೆ ದಿನಾಚರಣೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಅರಣ್ಯ ಇಲಾಖೆ ಅಧಿಕಾರಿಗಳಾದ ಸಿಸಿಎಫ್ ಹನುಮಂತಪ್ಪ ಮತ್ತು ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಅವರು ಎರಡು ಆನೆಗಳಿಗೆ ಕಿವಿಯಲ್ಲಿ ಮೂರು ಬಾರಿ ಚಾಮುಂಡಿ ಹಾಗೂ ತುಂಗಾ ಹೇಳುವ ಮೂಲಕ ಶಾಸ್ತ್ರ ಬದ್ಧವಾಗಿ ನಾಮಕರಣ ಮಾಡಿದರು.
World Elephant Day 23 ಆನೆಗಳಿಗೆ ಬಣ್ಣಗಳಿಂದ ಅಲಂಕಾರ ಮಾಡಲಾಗಿದ್ದು ಸಕ್ರೆ ಬೈಲಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಅರ್ಜುನ, ಸಾಗರ, ಬಹದ್ದೂರ್ ಆನೆಗಳನ್ನು ಸಾಲಿನಲ್ಲಿ ನಿಲ್ಲಿಸಿ ಕಾಡಾನೆ ತುಂಗಾ ಮತ್ತು ಚಾಮುಂಡಿಗೆ ನಾಮಕರಣ ಮಾಡಲಾಯಿತು. ಪುರೋಹಿತ ಮಧು ಭಟ್ಟರ ನೇತೃತ್ವದಲ್ಲಿ ನಾಮಕರಣ ನಡೆದಿದ್ದು ವಿಶೇಷ ವಾಗಿತ್ತು.
