Friday, December 5, 2025
Friday, December 5, 2025

Shivamogga Urban Development Authority ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ವಸತಿ ಯೋಜನೆಗಾಗಿ ಜಮೀನು ನೀಡಲು ಮನವಿ

Date:

Shivamogga Urban Development Authority ಕರ್ನಾಟಕ ಗೃಹ ಮಂಡಳಿಯು ತನ್ನ ವಸತಿ ಯೋಜನೆಗಳಿಗಾಗಿ ಭೂಮಾಲೀಕರು ಪಾಲುದಾರಿಕೆ ಅಡಿ ಅನುಪಾತದ ಆಧಾರದಲ್ಲಿ ಭೂ ಪರಿಹಾರ ಕೋರುವ ಜಮೀನುಗಳು ಮತ್ತು ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡಿಸದೇ ನೇರವಾಗಿ ಭೂಮಾಲೀಕರೊಂದಿಗೆ ಪಾಲುದಾರಿಕೆಯಡಿ ಅನುಪಾತದ ಆಧಾರದ ಮೇಲೆ ಜಮೀನುಗಳನ್ನು ಸಂಗ್ರಹಣೆ ಮಾಡಿ ವಸತಿ ಯೋಜನೆ ಕೈಗೊಳ್ಳಲು ಉದ್ದೇಶಿಸಿದ್ದು, ಆಸಕ್ತ ಭೂಮಾಲೀಕರಿಂದ ಭೂಮಿ ನೋಂದಾಯಿಸಿಕೊಳ್ಳುವಂತೆ ಕೋರಿದೆ.
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ, ಉತ್ತಮ ರಸ್ತೆ ಸಂಪರ್ಕವಿರುವ ಮತ್ತು ವಸತಿ ಯೋಜನೆಗಳಿಗೆ ಉತ್ತಮ ಬೇಡಿಕೆಯಿರುವ ಜಮೀನುಗಳು (50:50ರ ಅನುಪಾತದಲ್ಲಿ) ಹಾಗೂ ಉಳಿದ ಎಲ್ಲಾ ಪ್ರದೇಶಗಳಲ್ಲಿ ಉತ್ತಮ ರಸ್ತೆ ಸಂಪರ್ಕವಿರುವ ಮತ್ತು ವಸತಿ ಯೋಜನೆಗಳಿಗೆ ಉತ್ತಮ ಬೇಡಿಕೆಯಿರುವ ಜಮೀನುಗಳು (60:40ರ ಅನುಪಾತದಲ್ಲಿ) ಒಳಗೊಂಡಿರುತ್ತದೆ.
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಶಿವಮೊಗ್ಗ ಕನಿಷ್ಟ 50 ಎಕರೆ, ಭದ್ರಾವತಿ ಕ 25 ಎಕರೆ, ಶಿಕಾರಿಪುರ ಕ 25 ಎಕರೆ, ಸೊರಬ ಕ 25 ಎಕರೆ, ಸಾಗರ ಕ 25 ಎಕರೆ, ತೀರ್ಥಹಳ್ಳಿ ಕ 25 ಎಕರೆ, ಹೊಸನಗರ ಕ 25 ಎಕರೆ, ಆನವಟ್ಟಿ/ ಹೊಳೆಹೊನ್ನೂರು/ ರಿಪ್ಪನಪೇಟೆ/ ಆಯನೂರು/ ಶಿರಾಳಕೊಪ್ಪ ಪಟ್ಟಣಗಳಲ್ಲಿ ಕ 25 ಎಕರೆ ಪ್ರದೇಶಗಳಲ್ಲಿ ಭೂಮಿಯನ್ನು ಪಡೆದು ವಸತಿ ಯೋಜನೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
Shivamogga Urban Development Authority ಪ್ರಸ್ತಾವಿತ ಜಮೀನು ರಾಷ್ಟ್ರೀಯ /ರಾಜ್ಯ ಹೆದ್ದಾರಿ/ಜಿಲ್ಲಾ ಮುಖ್ಯ ರಸ್ತೆಗಳಿಗೆ ಹೊಂದಿಕೊಂಡಿರಬೇಕು. ನಗರ ಹಾಗೂ ಪಟ್ಟಣ ಪ್ರದೇಶದ ವ್ಯಾಪ್ತಿಯಿಂದ ಗರಿಷ್ಠ 2 ರಿಂದ 5 ಕಿ.ಮೀ. ಅಂತರದಲ್ಲಿರಬೇಕು. ಜಮೀನು ಆದಷ್ಟು ಸಮತಟ್ಟಾಗಿದ್ದು ರಾಜಕಾಲುವೆ/ಮುಖ್ಯನಾಲಾ ಅಥವಾ ಕೆರೆಗಳಿಂದ ಹೊರತಾಗಿರಬೇಕು. ಪಿ.ಟಿ.ಸಿ.ಎಲ್.ಕಾಯೆಯಿಂದ ಹೊರತಾಗಿರಬೇಕು. ಜಮೀನು ಒಂದೇ ಕಾಂಪ್ಯಾಕ್ಟ್ ಬ್ಲಾಕ್‌ನಲ್ಲಿರಬೇಕು ಹಾಗೂ ವಸತಿ ಯೋಜನೆಗೆ ಯೋಗ್ಯವಾಗಿರಬೇಕು. ಈ ಜಮೀನು ಸರ್ಕಾರವು ನಗರ/ಪಟ್ಟಣಕ್ಕೆ ಅನುಮೋದಿಸಿರುವ ಮಹಾಯೋಜನೆಯಲ್ಲಿ ವಸತಿ ವಲಯದಲ್ಲಿರಬೇಕು. ಜಮೀನುಗಳು ಯಾವುದೇ ಋಣಭಾರ ಹೊಂದಿರಬಾರದು. ಪ್ರಸ್ತಾವಿತ ಜಮೀನುಗಳನ್ನು ಅನುಪಾತದ ಪಾಲುದಾರಿಕೆಯಲ್ಲಿ ಕೈಗೊಳ್ಳುವ ಪ್ರಕ್ರಿಯೆಯು ಕ.ಗೃ.ಮಂ.ಯಿಂದ ರಚಿಸಲಾದ ಜಂಟಿ ಸಹಭಾಗಿತ್ವ ಭೂಸಂಗ್ರಹಣಾ ಸಮಿತಿಯ ನಿರ್ಣಯಕ್ಕೆ ಒಳಪಟ್ಟಿರುತ್ತದೆ.
ನಗರ ಹಾಗೂ ಪಟ್ಟಣ ಪ್ರದೇಶಗಳ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜಮೀನುಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಹಾಗೂ ಆಯಾ ಪ್ರದೇಶಗಳ ಬೇಡಿಕೆ ಸಮೀಕ್ಷೆಯನ್ನು ಆಧರಿಸಿ, ವಸತಿ ಯೋಜನೆಗಳನ್ನು ಕೈಗೊಳ್ಳಲಾಗುವುದು. ಪ್ರಸ್ತಾವಿತ ಜಮೀನುಗಳನ್ನು ಭೂಮಾಲೀಕರು ಮಂಡಳಿ ಹೆಸರಿಗೆ ನೋಂದಾಯಿಸಿ, ಹಸ್ತಾಂತರಿಸಬೇಕು
ಆಸಕ್ತಿಯುಳ್ಳ ಭೂಮಾಲೀಕರು ತಮ್ಮ ಜಮೀನುಗಳು ಮೇಲೆ ತಿಳಿಸಲಾದ ಅಂಶಗಳಿಗೆ ಹೊಂದುವಂತೆ ಇದ್ದು, ಮಂಡಳಿಗೆ ಜಮೀನನ್ನು ನೀಡಲು ಆಸಕ್ತಿಯಿದ್ದವರು ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ಕಾರ್ಯಪಾಲಕ ಅಭಿಯಂತರರು, ಕ.ಗೃ.ಮಂ, ಶಿವಮೊಗ್ಗ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ಯೋಜನಾ ಕಚೇರಿ, ಶಿವಮೊಗ್ಗ ಅಥವಾ ನೇರವಾಗಿ ಕೇಂದ್ರ ಕಚೇರಿ, ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು-560009 ಇವರಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 9449235920/ 9740512824/ 9743733696/ 08182-249944 ಗಳನ್ನು ಸಂಪರ್ಕಿಸುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...