ತನಗಾದರೆ ಒಂದು ನಿಲುವು. ಸಮಾಜಕ್ಕೆ ಬೇರೆ. ಸಮಾಜದ ಭಾಗವಾದರೂ ಮನುಷ್ಯ ತನ್ನ ಬದುಕನ್ನೇ ವಿಡಂಬನೆಗೊಡ್ಡುವ ಪರಿಸ್ಥಿತಿ ಭೈರಪ್ಪನವರ
ಬಹುತೇಕ ಕಾದಂಬರಿಗಳಲ್ಲಿ ಸೂಕ್ಷ್ಮವಾಗಿ ಕಾಣಬಹುದಾಗಿದೆ.
ಇಡೀ ಮನುಷ್ಯ ಬದುಕನ್ನ ತಮ್ಮದೇ ದೃಷ್ಟಿಕೋನದಲ್ಲಿ ಯಥಾವತ್ತಾದ ಚಿತ್ರಣ.
ತಲ್ಲಣಗಳ ಜೀವರ ಹತಾಶತೆ, ಲೈಂಗಿಕ ಹಸಿವು, ಗುರಿಯಿಲ್ಲದೇ ನುಗ್ಗುವ ನಾಗರಿಕ ಧಾವಂತಗಳನ್ನ ವಾಸ್ತವ ಬರವಣಿಗಯ ಮೂಲಕ ಕಟ್ಟಿಕೊಡುವ ಕಾದಂಬರಿಕಾರ ಭೈರಪ್ಪ ನಮ್ಮ ನಡುವಿನ ಓರ್ವ
ಧೀಮಂತ. ಎಂದು ಕಾದಂಬರಿಕಾರ್ತಿ ಶ್ರೀಮತಿಸಹನಾ ವಿಜಯ ಕುಮಾರ್ ಹೇಳಿದರು.
ಕರ್ನಾಟಕ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ” ತಿಂಗಳ ಅತಿಥಿ”ಯಲ್ಲಿ ಅವರು ಭಾಗವಹಿಸಿದ್ದರು.
ಕರ್ನಾಟಕ ಸಂಘದ ಅಧ್ಯಕ್ಣ ಪ್ರೊ. ಶಂಕರನಾರಾಯಣ ಶಾಸ್ತ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ವಿನಯ್ ಶಿವಮೊಗ್ಗ ಉಪಸ್ಥಿತರಿದ್ದರು.
ನಂತರ ಶ್ರೀಮತಿ ಸಹನಾ ವಿಜಯ ಕುಮಾರ್ ಅವರೊಂದಿಗೆ ಸಹೃದಯ ಸಂವಾದ ನಡೆಯಿತು.
ಸಾಮಾಜಿಕ ಆವರಣದಲ್ಲಿನ ಅಸಮ ಸಂಗತಿಗಳ ಬಗ್ಗೆ ಪಾತ್ರಗಳ ಮೂಲಕ ಆಧ್ಯಾತ್ಮಿಕ ವಿಮರ್ಶೆ ಭೈರಪ್ಪನವರ ಕಾದಂಬರಿ ವೈಶಿಷ್ಡ್ಯ.- ಸಹನಾ ವಿಜಯ ಕುಮಾರ್
Date:
