Malnad Open Group 12ನೇ ವರ್ಷದ ಗೀತಭಾರತಿ-2025 ತಾಯಿ ಭಾರತಿಗೆ ಗೀತೆಗಳ ಆರತಿ ದೇಶಭಕ್ತಿಗೀತೆಗಳ ಕಾರ್ಯಕ್ರಮವು ಇದೇ ಆಗಸ್ಟ್ 10ರ ಭಾನುವಾರ ಸಂಜೆ 5.30ಕ್ಕೆ ನಗರದ ಕುವೆಂಪು ರಂಗಮಂದಿರಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಯ ಸುಮಾರು 950 ಕ್ಕೂ ಹೆಚ್ಚಿನ ಮಕ್ಕಳು ದೇಶಭಕ್ತಿಗೀತೆಗಳನ್ನು ಹಾಡಲಿದ್ದಾರೆ.
ಈ ಬಾರಿ ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ವಾಯುಸೇನೆಯ ನಿವೃತ್ತ ಸಾರ್ಜೆಟ್.ಎ.ತ್ರಿಲೋಕ್ ರವರು ಉದ್ಘಾಟಿಸಲಿದ್ದಾರೆ.
ಇವರು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಎ.ಎನ್-32 ವಿಮಾನದ ಬ್ಲಿಸ್ಟರ್ ಫೇರಿಂಗ್ ಬದಲಿ ಮತ್ತು ವಿಮಾನ/ಹೆಲಿಕಾಪ್ಟರ್ ರಚನಾತ್ಮಕ ಮಾರ್ಪಾಡು ಮತ್ತು ದುರಸ್ತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
2012ರಿಂದಲೂ ‘ಗೀತಭಾರತಿ’ ಕಾರ್ಯಕ್ರಮವನ್ನು ಮಲ್ನಾಡ್ ಓಪನ್ ಗ್ರೂಪ್ ಆಯೋಜಿಸುತ್ತ ಬರುತ್ತಿದ್ದು, ಪ್ರತೀ ಬಾರಿಯೂ ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರನ್ನು ಶಿವಮೊಗ್ಗಕ್ಕೆ ಪರಿಚಯಿಸುವ, ಸೇನೆಯಲ್ಲಿ ಅವರು ಸಲ್ಲಿಸಿದ ಸೇವೆಯನ್ನು, ಯುದ್ಧದಲ್ಲಿ ಭಾಗವಹಿಸಿದ ವಿವರವನ್ನು ಅವರಿಂದಲೇ ತಿಳಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನಗರದ ಜನತೆಗೆ ದೇಶಭಕ್ತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ವಿಶೇಷ ಆಹ್ವಾನಿತರಾಗಿ ಎಸ್.ರುದ್ರೇಗೌಡ ಮಾಜಿ ಶಾಸಕರು, ಕರ್ನಾಟಕ ರಾಜ್ಯ ವಿಧಾನ ಪರಿಷತ್ ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ, ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪಗೌಡ, ಮಾಚೇನಹಳ್ಳಿಯ ಮೆ.ವಿಜಯ್ ಟೆಕ್ನೋಕ್ರಾಟ್ಸ್.ಪ್ರೈ.ಲಿ ನ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಮಹೇಂದ್ರಪ್ಪ, ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಹಾಗೂ ಮಲ್ನಾಡ್ ಓಪನ್ ಗ್ರೂಪ್ ನ ಪರಮೇಶ್ವರ್.ಹೆಚ್ ಉಪಸ್ಥಿತರಿಲಿದ್ದಾರೆ.
Malnad Open Group ಇದೇ ಸಂದರ್ಭದಲ್ಲಿ ಗ್ರೂಪ್ ನ ಹಿರಿಯ ಸದಸ್ಯ ಯು.ಪಿ.ಎಸ್.ಸಿ ಯಲ್ಲಿ 615ನೇ ಶ್ರೇಯಾಕ ಪಡೆದ ಡಾ.ದಯಾನಂದ ಸಾಗರ್.ಎಲ್ ಸನ್ಮಾನಿತರಾಗಲಿದ್ದಾರೆ. ಇದರ ಜೊತೆಗೆ ಗ್ರೂಪ್ ನ ಮೊದಲ ಬ್ಯಾಚ್ ನ ರಾಷ್ಟ್ರಪತಿ ಸ್ಕೌಟ್ ಪುರಸ್ಕಾರ ಪಡೆದ ಲೋಕೇಶ್.ಹೆಚ್ ಮತ್ತು ಹೊನ್ನಾಳಿ ಆಕ್ಸ್ಫರ್ಡ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಚಿತ್ರ ಇವರುಗಳು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಗ್ರೂಪ್ ನ ಅಧ್ಯಕ್ಷ ಶ್ರೀನಿವಾಸ ವರ್ಮ.ಎಸ್.ಟಿ ಇವರು ವಹಿಸಲಿದ್ದಾರೆ.
ತಾವುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿ.
ತಮ್ಮ ವಿಶ್ವಾಸಿ
ನಾಯಕರು ಮತ್ತು ಸದಸ್ಯರು, ಮಲ್ನಾಡ್ ಓಪನ್ ಗ್ರೂಪ್, ಶಿವಮೊಗ್ಗ
