Saturday, December 6, 2025
Saturday, December 6, 2025

Graama Bharathi Foundation ದಂಪತಿಗಳಲ್ಲಿ ಸ್ವಪ್ರತಿಷ್ಠೆ ಬಾರದೇ ಇದ್ದರೆ ಕುಟುಂಬಗಳು ಚನ್ನಾಗಿರುತ್ತವೆ – ವಿಜೇಂದ್ರ ಪ್ರಕಾಶ್

Date:

Graama Bharathi Foundation ಪುರಾತನ ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬಗಳ ವಿಘಟನೆ ಮತ್ತು ವಿಚ್ಛೇದನ ಪ್ರಕರಣಗಳನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಆಧುನಿಕ ಜೀವನಕ್ಕೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯನ್ನು ಈಗಿನ ಪೀಳಿಗೆ ಅನುಸರಿಸಲು ಹೋಗಿ ಕುಟುಂಬದ ಸಾಮರಸ್ಯ ಕಳೆದುಕೊಂಡು ವಿಘಟನೆಗಳು ಹೆಚ್ಚಾಗುತ್ತಿದೆ. ಜನರು ಅವಿಭಕ್ತ ಕುಟುಂಬದ ಮಹತ್ವವನ್ನು ಅರಿಯ ಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕದ ಕುಟುಂಬ ಪ್ರಭೋದನದ ಶಿವಮೊಗ್ಗ ವಿಭಾಗದ ಸಂಯೋಜಕ ವಿಜೇಂದ್ರ ಪ್ರಕಾಶ್ ಅಭಿಪ್ರಾಯಪಟ್ಟರು. ಕಾರಣಗಿರಿಯ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗ ಕಾರಣಗಿರಿ, ಕುಟುಂಬ ಪ್ರಭೋಧನ, ಅರೋಗ್ಯ ಭಾರತಿ ಇವರುಗಳ ಆಶ್ರಯದಲ್ಲಿ ನಡೆದ ದಂಪತಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ದಂಪತಿಗಳಲ್ಲಿ ಹೊಂದಾಣಿಕೆ ಮುಖ್ಯ, ಇಬ್ಬರಲ್ಲೂ ಸ್ವಪತ್ರಿಷ್ಟೆ ಬಾರದೆ ಇದ್ದರೆ ಕುಟುಂಬಗಳು ಚೆನ್ನಾಗಿರುತ್ತವೆ ಎಂದು ಅವರು ಹೇಳಿದರು.

ವೈದ್ಯೆ ಪಲ್ಲವಿ ಮಾತನಾಡಿ ಹಿಂದು ಕುಟುಂಬಗಳಲ್ಲಿ ಮುಖ್ಯವಾಗಿ ಹಿರಿಯರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವುದರಿಂದ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಿರುವುದಿಲ್ಲ. ಆಧುನಿಕ ಕುಟುಂಬದ ಸದಸ್ಯರಲ್ಲಿ ಕೊಳ್ಳುಬಾಕತನ, ಅತಿಯಾಸೆ, ಇತರರ ಬಗ್ಗೆ ಮತ್ಸರ ಹೆಚ್ಚಾಗುತ್ತಿದೆ. ಇವುಗಳನ್ನು ಬಿಟ್ಟು ಕೂಡಿಬಾಳುವ ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ಜೀವನ ನೆಮ್ಮದಿಯಿಂದ ಕೂಡಿರುತ್ತದೆ. ಇಲ್ಲದಿದ್ದಾಗ ಕುಟುಂಬದಲ್ಲಷ್ಟೆ ಅಲ್ಲದೆ ಸಮಾಜದಲ್ಲೂ ಅಶಾಂತಿ ನೆಲೆಸುತ್ತದೆ ಎಂದು ಹೇಳಿದರು.

Graama Bharathi Foundation ಇದೇ ಸಂದರ್ಭದಲ್ಲಿ 50 ವರ್ಷಗಳ ಕಾಲ ದಾಂಪತ್ಯಜೀವನ ನಡೆಸಿದ ದಂಪತಿಗಳಿಗೆ ಸನ್ಮಾನಿಸಲಾಯಿತು. ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ಅರೋಗ್ಯಭಾರತಿಯ ಶ್ರೀಧರ್, ಪ್ರದಾನ ಕಾರ್ಯದರ್ಶಿ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ವಿನಾಯಕ ಪ್ರಭು ನಿರೂಪಿಸಿ, ಆರತಿ ಮಹೇಶ್ ಪ್ರಾರ್ಥಿಸಿ, ಕೇಶವ ಸಂಪೆಕೈ ಸ್ವಾಗತಿಸಿ ಚಿದಂಬರ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...