Lok Adalat ಹೊಸನಗರ ತಾಲೂಕಿನ ವಕೀಲ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಕೀಲರೊಂದಿಗೆ ಮತ್ತು ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ ಎಸ್ ರವರು ಹೊಸನಗರ ತಾಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಫಾರೂಕ್ ಝಾರೆ ಮತ್ತು ಸದರಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಮಾರುತಿ ಶಿಂಧೆ ರವರ ಉಪಸ್ಥಿತಿಯಲ್ಲಿ ಸಭೆಯನ್ನು ಉದ್ದೇಶಿಸಿ ದಿನಾಂಕ 13.09.2025 ರಂದು ಆಯೋಜಿಸಲಾಗಿರುವ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಮಾಹಿತಿಯನ್ನು ನೀಡಿದರು.
Lok Adalat ಈ ಸಂದರ್ಭದಲ್ಲಿ ಖಾಯಂ ಲೋಕ ಅದಾಲತ್ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸಂತೋಷ್ ಎಂ ಎಸ್ ರವರು ಶಿವಮೊಗ್ಗ ಜಿಲ್ಲೆಯು ಮಂಗಳೂರಿನಲ್ಲಿ ಸ್ಥಾಪಿಸಲಾದ ಖಾಯಂ ಲೋಕ ಅದಾಲತ್ತಿನ ವ್ಯಾಪ್ತಿಯಲ್ಲಿ ಒಳಪಡುತ್ತಿದ್ದು ಅಲ್ಲಿ ಸಾರ್ವಜನಿಕ ಉಪಯುಕ್ತ ಸೇವೆಯನ್ನು ನೀಡುತ್ತಿರುವ ಸಂಸ್ಥೆಗಳು ಹಾಗೂ ಅಂತಹ ಸಂಸ್ಥೆಗಳ ವಿರುದ್ಧ ಸಾರ್ವಜನಿಕರು ಪ್ರಕರಣವನ್ನು ಯಾವುದೇ ನ್ಯಾಯಾಲಯದ ಶುಲ್ಕವಿಲ್ಲದೆ ದಾಖಲಿಸಬಹುದು ಮತ್ತು ರಾಜಿ ಸಂಧಾನದ ಮೂಲಕ ಅಥವಾ ವಿಚಾರಣೆಯ ಮೂಲಕವು ನ್ಯಾಯಾಲಯದಲ್ಲಿ ನೀಡುವಂತಹ ತೀರ್ಪನ್ನು ಒಂದು ಕೋಟಿ ರೂಪಾಯಿ ಮೊತ್ತದ ಒಳಗಿನ ಪರಿಹಾರವನ್ನು ಪಡೆದುಕೊಳ್ಳಬಹುದು. ಅಂತಹ ತೀರ್ಪಿನ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿ ಸದರಿ ಖಾಯಂ ಲೋಕ ಅದಾಲತ್ ನ ಸೇವೆಯ ಉಪಯೋಗವನ್ನು ಸಾರ್ವಜನಿಕರು ಮತ್ತು ಸಾರ್ವಜನಿಕ ಉಪಯುಕ್ತ ಸೇವೆಗಳನ್ನು ನೀಡುವ ಸಂಸ್ಥೆಗಳು ಅಲ್ಲದೆ ಎಲ್ಲಾ ವಕೀಲರು ಪಡೆದುಕೊಳ್ಳಬೇಕು ಎಂದು ಮಾಹಿತಿಯನ್ನು ನೀಡಿದರು. ಈ ವೇಳೆ ಖಾಯಂ ಲೋಕದಲತ್ ಕುರಿತು ಸಂಪೂರ್ಣ ಮಾಹಿತಿ ಇರುವ ಫಲಕವನ್ನು ಅನಾವರಣ ಮಾಡಿ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಿಗೆ ಸಾರ್ವಜನಿಕ ಪ್ರಕಟಣೆಗೆ ಹಸ್ತಾಂತರಿಸಲಾಯಿತು.
