B.Y. Raghavendra ಭಾರತೀಯ ವಾಯುಪಡೆಯಲ್ಲಿ ಪೈಲಟ್ ತರಬೇತಿಗಾಗಿ ಎಚ್.ಎ.ಎಲ್ ನಿರ್ಮಿಸಿರುವ ಎಚ್.ಜೆ.ಟಿ 16 – ಕಿರಣ್ ಯುದ್ಧ ವಿಮಾನ ತನ್ನ ಸುದೀರ್ಘ 50 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ನೀಡಲಾಗಿದೆ.
ಈ ಯುದ್ಧ ತರಬೇತಿ ವಿಮಾನವನ್ನು ನಮ್ಮ ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಸ್ಥಾಪಿಸುವ ಸಲುವಾಗಿ ಮಾನ್ಯ ರಕ್ಷಣಾ ಸಚಿವರಾದ ಶ್ರೀ ರಾಜಾನಾಥ ಸಿಂಗ್ ಅವರಲ್ಲಿ ಮಾಡಿಕೊಂಡ ಮನವಿಯ ಪರಿಣಾಮ ಕಳೆದ ಎರಡು ದಿನಗಳ ಹಿಂದೆ ನಗರಕ್ಕೆ ಆಗಮಿಸಿದೆ.
ಇಂದು ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಯುದ್ಧ ವಿಮಾನ ಅಳವಡಿಕೆಗೆ ಬೇಕಾದ ಅಗತ್ಯ ಕ್ರಮಗಳ ಕುರಿತು ಚರ್ಚಿಸಿ ಪರಿಶೀಲನೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಯಿತು.
ಈಗಾಗಲೇ ಯುದ್ಧ ಟ್ಯಾಂಕರ್ ಅಳವಡಿಕೆ ಮಾಡಿ ಜನಾಕರ್ಷಣೆಯ ಕೇಂದ್ರವಾಗಿರುವ ಈ ಸ್ಥಳದಲ್ಲಿ ಮತ್ತೊಂದು ಯುದ್ಧ ವಿಮಾನ ಅಳವಡಿಕೆ ಮಾಡುತ್ತಿರುವುದು ಕ್ಷೇತ್ರದ ಜನರಲ್ಲಿ ದೇಶಾಭಿಮಾನ, ಸೈನ್ಯಕ್ಕೆ ಸೇರುವ ಬಯಕೆ ಹೆಚ್ಚಾಗಲಿದೆ ಎಂಬ ಆಶಾಭಾವ ನನ್ನದು.
B.Y. Raghavendra ಈ ಮಹತ್ಕಾರ್ಯಕ್ಕೆ ಸಹಕರಿಸಿದ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ರಕ್ಷಣಾ ಸಚಿವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅವರು ಹೇಳಿದ್ದಾರೆ.
