Rotary Jubilee Organization ಸ್ನೇಹ ಅತ್ಯಂತ ಪವಿತ್ರವಾಗಿರುವ ಒಂದು ಸಂಕೋಲೆ, ಬಲವಾದ ಸ್ನೇಹ ವ್ಯಕ್ತಿಯಲ್ಲಿ ಲವಲವಿಕೆಯನ್ನು ಮೂಡಿಸುತ್ತದೆ. ಮನೆಯವರಲ್ಲಿ ಹಂಚಿಕೊಳ್ಳದ ಅನೇಕ ವಿಷಯಗಳನ್ನು ನಾವು ಸ್ನೇಹಿತರೊಡನೆ ಹಂಚಿಕೊಳ್ಳುತ್ತೇವೆ ಎಂದು ಸಾಹಿತಿಗಳು ಮತ್ತು ಅಂಕಣಕಾರರಾಗಿರುವ ಎಂ.ಎನ್.ಸುಂದರ ರಾಜ್ ಹೇಳಿದ್ದಾರೆ. ಅವರು ರೋಟರಿ ಜ್ಯುಬಿಲಿ ಸಂಸ್ಥೆಯ ವಾರದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗೆಳೆತನದ ರೋಚಕತೆಯ ಬಗ್ಗೆ ಉದಾಹರಣೆ ಸಹಿತವಾಗಿ ವಿವರಿಸಿದರು. ಅವರು ಮಾತನಾಡುತ್ತ ಕೃಷ್ಣ ಕುಚೇಲ ಮತ್ತು ಕರ್ಣ ದುರ್ಯೋಧನ ಇವರ ನಡುವಿನ ಸ್ನೇಹ ಪ್ರಖ್ಯಾತವಾದದ್ದು. ಪಂಪ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ದುರ್ಯೋಧನ ಮತ್ತು ಕರ್ಣನ ಸ್ನೇಹದ ಬಗ್ಗೆ ಪ್ರಸ್ತಾಪ ಮಾಡುತ್ತಾ ಭಾರತವನ್ನು ಓದಬೇಕಾದರೆ ನೆನೆಯಬೇಕಾದರೆ ಕರ್ಣನನ್ನು ನೆನೆ ಎಂದು ಹೇಳಿದ್ದಾನೆ ಅದೇ ರೀತಿ ಪವಿತ್ರ ಬಂಧನದ ಗೆಳೆತನಕ್ಕೆ ಬಡವ ಬಲ್ಲಿದ ಮೇಲು-ಕೀಳು ಎಂಬ ಯಾವ ಭಾವನೆಯು ಕಂಡುಬರುವುದಿಲ್ಲ. ಏಕೆಂದರೆ ಸ್ನೇಹ ಅದೆಲ್ಲಕ್ಕಿಂತ ನೀಗಿಲಾದದ್ದು ಗಯಟೆಯ ಒಂದು ಮಾತು ನೀನು ನಿನ್ನ ಸ್ನೇಹಿತನನ್ನು ತೋರಿಸು ನಿನ್ನ ವ್ಯಕ್ತಿತ್ವವನ್ನು ನಾನು ಹೇಳುತ್ತೇನೆ ಎಂಬುದಾಗಿ ಹೇಳಿರುತ್ತಾನೆ. ಇದರಿಂದ ನಾವು ತಿಳಿಯುವುದೇನೆಂದರೆ ಸಜ್ಜನರ ಸಹವಾಸ ಮಾಡುವುದರಿಂದ ನಮ್ಮ ವ್ಯಕ್ತಿತ್ವವು ಬೆಳೆಯುತ್ತದೆ ಅದನ್ನೇ ಸರ್ವಜ್ಞ ಸಜ್ಜನರ ಸಹವಾಸ ಹೆಜ್ಜೆನು ಸವಿದಂತೆ ಎಂದು ಸ್ನೇಹದ ಹಿರಿಮೆಯನ್ನು ಹಾಡಿ ಹೊಗಳಿದ್ದಾನೆ. ಅನೇಕ ನಿದರ್ಶನಗಳು ಸಹ ಸ್ನೇಹದ ಹಿರಿಮೆಯನ್ನು ಕೊಂಡಾಡಿವೆ. ಜಪಾನಿನ ಇಬ್ಬರು ಮಿತ್ರರು 1936ರ ಒಲಂಪಿಕ್ಸ್ ನಲ್ಲಿ ಕ್ರಮವಾಗಿ ರಜತ ಮತ್ತು ಕಂಚಿನ ಪದಕವನ್ನು ಪಡೆದಾಗ ಅವೆರಡನ್ನು ಕತ್ತರಿಸಿ ರಜತ ಪದಕ ಮತ್ತು ಕಂಚಿನ ಪದಕವನ್ನು ಸೇರಿಸಿ ಧರಿಸಿಕೊಂಡು ಅದನ್ನು ಸ್ನೇಹದ ಪದಕ ಎಂದು ಕರೆದರು ಅಂದರೆ ಅವರ ಸ್ನೇಹ ಅಷ್ಟು ಗಾಢವಾಗಿದ್ದು ಯಾರೋ ಒಬ್ಬರು ಮೇಲು ಕೇಳು ಇಲ್ಲ ಎಂಬುದನ್ನು ಅದು ತೋರಿಸಿಕೊಡುತ್ತದೆ. Rotary Jubilee Organization ರೋಟರಿ ಸಂಸ್ಥೆ ಕೊಟ್ಟಿರುವುದೇ ಸ್ನೇಹ ಸಂವರ್ಧನೆಗಾಗಿ. ಇತ್ತೀಚೆಗೆ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಒಂದು ಸಮೀಕ್ಷೆಯನ್ನು ನಡೆಸಿತು ಅದರಲ್ಲಿ ನೀವೇಕೆ ರೋಟರಿಯನ್ನು ಇಷ್ಟಪಡುತ್ತೀರಿ ಎಂದು ಕೇಳಿದ್ದಕ್ಕೆ ಶೇಕಡ 42ರಷ್ಟು ಜನ ಸದಸ್ಯರು ತಾವು ಸ್ನೇಹ ಸಂಪಾದನೆಗಾಗಿ ರೋಟರಿಯ ಸದಸ್ಯರಾಗಿದ್ದೇವೆ ಎಂಬುದನ್ನು ತಿಳಿಸಿದ್ದಾರ. ಹೀಗಾಗಿ ರೋಟರಿ ಸಂಸ್ಥೆಯು ಸ್ನೇಹಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ ಅನೇಕ ಉದ್ಯೋಗವನ್ನು ಹೊಂದಿರುವ ಸದಸ್ಯರು ಒಟ್ಟಾಗಿ ಸೇರಿ ತಮ್ಮ ಸ್ನೇಹ ಭಾಂದವ್ಯವನ್ನು ಬೆಳೆಸಿಕೊಳ್ಳುವ ಒಂದು ವೇದಿಕೆ ಈ ರೋಟರಿ ಸಂಸ್ಥೆ. ಆದ್ದರಿಂದ ಪ್ರತಿಯೊಬ್ಬ ಸದಸ್ಯರು ತಮ್ಮ ಆತ್ಮೀಯ ಗೆಳೆಯನೊಬ್ಬನನ್ನು ವರ್ಷದಲ್ಲಿ ಒಮ್ಮೆ ರೋಟರಿ ಸದಸ್ಯನನ್ನಾಗಿ ಮಾಡಿದಲ್ಲಿ ರೋಟರಿಯು ಬೆಳೆಯುತ್ತದೆ ಸ್ನೇಹವೂ ವೃದ್ಧಿಯಾಗುತ್ತದೆ ಇದೇ ಸಂದರ್ಭದಲ್ಲಿ ವರಕವಿ ಬೇಂದ್ರೆಯವರ ಕುರಿತಾಗಿಯೂ ಸಹ ಮಾತನಾಡ ಮಾತನಾಡಿ ಬೇಂದ್ರೆ ಬಡತನದಲ್ಲಿ ಬೆಂದರೂ ಸಹ ತಮಗೆ ಬಡತನದ ಗರ್ವ ಇದೆ ಎಂದು ಹೇಳಿಕೊಳ್ಳುತ್ತಿದ್ದರು. ಅಪ್ರತಿಮ ರಾಷ್ಟ್ರ ಪ್ರೇಮಿಗಳಾಗಿದ್ದ ಬೇಂದ್ರೆಯವರು ಬ್ರಿಟಿಷರ ವಿರುದ್ಧ ಕವನವನ್ನು ರಚಿಸಿ ಜೈಲು ಶಿಕ್ಷೆ ಅನುಭವಿಸಿದರು ಸಹ ತಮ್ಮತನವನ್ನು ಬಿಡದ ಒಬ್ಬ ಮಹಾನ್ ಕವಿ ಎಂದು ತಿಳಿಸಿ ಬೇಂದ್ರೆಯವರ ಜೀವನದ ಕೆಲವು ಘಟನೆಗಳನ್ನು ಸ್ವಾರಸ್ಯಕರವಾಗಿ ನಿರೂಪಿಸಿದರು. ರೋಟರಿ ಅಧ್ಯಕ್ಷ ಬಿಎಸ್ ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು ಕಾರ್ಯದರ್ಶಿ ರೇವಣಸಿದ್ದಪ್ಪ ಸ್ವಾಗತಿಸಿ ಕೊನೆಗೆ ವಂದಿಸಿದರು ಈ ಕಾರ್ಯಕ್ರಮ ಅಂತರರಾಷ್ಟ್ರೀಯ ಸ್ನೇಹದ ದಿನಾಚರಣೆ ಅಂಗವಾಗಿ ರೋಟರಿ ಜ್ಯುಬಿಲಿ ಆಯೋಜಿಸಿದ ಕಾರ್ಯಕ್ರಮವಾಗಿದ್ದು
ಸ್ನೇಹ ಅತ್ಯಂತ ಪವಿತ್ರವಾಗಿರುವ ಒಂದು ಸಂಕೋಲೆ, ಬಲವಾದ ಸ್ನೇಹ ವ್ಯಕ್ತಿಯಲ್ಲಿ ಲವಲವಿಕೆಯನ್ನು ಮೂಡಿಸುತ್ತದೆ. ಮನೆಯವರಲ್ಲಿ ಹಂಚಿಕೊಳ್ಳದ ಅನೇಕ ವಿಷಯಗಳನ್ನು ನಾವು ಸ್ನೇಹಿತರೊಡನೆ ಹಂಚಿಕೊಳ್ಳುತ್ತೇವೆ ಎಂದು ಸಾಹಿತಿಗಳು ಮತ್ತು ಅಂಕಣಕಾರರಾಗಿರುವ ಎಂ.ಎನ್.ಸುಂದರ ರಾಜ್ ಹೇಳಿದ್ದಾರೆ. ಅವರು ರೋಟರಿ ಜ್ಯುಬಿಲಿ ಸಂಸ್ಥೆಯ ವಾರದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗೆಳೆತನದ ರೋಚಕತೆಯ ಬಗ್ಗೆ ಉದಾಹರಣೆ ಸಹಿತವಾಗಿ ವಿವರಿಸಿದರು. ಅವರು ಮಾತನಾಡುತ್ತ ಕೃಷ್ಣ ಕುಚೇಲ ಮತ್ತು ಕರ್ಣ ದುರ್ಯೋಧನ ಇವರ ನಡುವಿನ ಸ್ನೇಹ ಪ್ರಖ್ಯಾತವಾದದ್ದು. ಪಂಪ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ದುರ್ಯೋಧನ ಮತ್ತು ಕರ್ಣನ ಸ್ನೇಹದ ಬಗ್ಗೆ ಪ್ರಸ್ತಾಪ ಮಾಡುತ್ತಾ ಭಾರತವನ್ನು ಓದಬೇಕಾದರೆ ನೆನೆಯಬೇಕಾದರೆ ಕರ್ಣನನ್ನು ನೆನೆ ಎಂದು ಹೇಳಿದ್ದಾನೆ. ಅದೇ ರೀತಿ ಪವಿತ್ರ ಬಂಧನದ ಗೆಳೆತನಕ್ಕೆ ಬಡವ ಬಲ್ಲಿದ ಮೇಲು-ಕೀಳು ಎಂಬ ಯಾವ ಭಾವನೆಯು ಕಂಡುಬರುವುದಿಲ್ಲ. ಏಕೆಂದರೆ ಸ್ನೇಹ ಅದೆಲ್ಲಕ್ಕಿಂತ ನೀಗಿಲಾದದ್ದು ಗಯಟೆಯ ಒಂದು ಮಾತು ನೀನು ನಿನ್ನ ಸ್ನೇಹಿತನನ್ನು ತೋರಿಸು ನಿನ್ನ ವ್ಯಕ್ತಿತ್ವವನ್ನು ನಾನು ಹೇಳುತ್ತೇನೆ ಎಂಬುದಾಗಿ ಹೇಳಿರುತ್ತಾನೆ. ಇದರಿಂದ ನಾವು ತಿಳಿಯುವುದೇನೆಂದರೆ ಸಜ್ಜನರ ಸಹವಾಸ ಮಾಡುವುದರಿಂದ ನಮ್ಮ ವ್ಯಕ್ತಿತ್ವವು ಬೆಳೆಯುತ್ತದೆ ಅದನ್ನೇ ಸರ್ವಜ್ಞ ಸಜ್ಜನರ ಸಹವಾಸ ಹೆಜ್ಜೆನು ಸವಿದಂತೆ ಎಂದು ಸ್ನೇಹದ ಹಿರಿಮೆಯನ್ನು ಹಾಡಿ ಹೊಗಳಿದ್ದಾನೆ. ಅನೇಕ ನಿದರ್ಶನಗಳು ಸಹ ಸ್ನೇಹದ ಹಿರಿಮೆಯನ್ನು ಕೊಂಡಾಡಿವೆ. ಜಪಾನಿನ ಇಬ್ಬರು ಮಿತ್ರರು 1936ರ ಒಲಂಪಿಕ್ಸ್ ನಲ್ಲಿ ಕ್ರಮವಾಗಿ ರಜತ ಮತ್ತು ಕಂಚಿನ ಪದಕವನ್ನು ಪಡೆದಾಗ ಅವೆರಡನ್ನು ಕತ್ತರಿಸಿ ರಜತ ಪದಕ ಮತ್ತು ಕಂಚಿನ ಪದಕವನ್ನು ಸೇರಿಸಿ ಧರಿಸಿಕೊಂಡು ಅದನ್ನು ಸ್ನೇಹದ ಪದಕ ಎಂದು ಕರೆದರು ಅಂದರೆ ಅವರ ಸ್ನೇಹ ಅಷ್ಟು ಗಾಢವಾಗಿದ್ದು ಯಾರೋ ಒಬ್ಬರು ಮೇಲು ಕೇಳು ಇಲ್ಲ ಎಂಬುದನ್ನು ಅದು ತೋರಿಸಿಕೊಡುತ್ತದೆ. ರೋಟರಿ ಸಂಸ್ಥೆ ಕೊಟ್ಟಿರುವುದೇ ಸ್ನೇಹ ಸಂವರ್ಧನೆಗಾಗಿ. ಇತ್ತೀಚೆಗೆ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಒಂದು ಸಮೀಕ್ಷೆಯನ್ನು ನಡೆಸಿತು ಅದರಲ್ಲಿ ನೀವೇಕೆ ರೋಟರಿಯನ್ನು ಇಷ್ಟಪಡುತ್ತೀರಿ ಎಂದು ಕೇಳಿದ್ದಕ್ಕೆ ಶೇಕಡ 42ರಷ್ಟು ಜನ ಸದಸ್ಯರು ತಾವು ಸ್ನೇಹ ಸಂಪಾದನೆಗಾಗಿ ರೋಟರಿಯ ಸದಸ್ಯರಾಗಿದ್ದೇವೆ ಎಂಬುದನ್ನು ತಿಳಿಸಿದ್ದಾರ. ಹೀಗಾಗಿ ರೋಟರಿ ಸಂಸ್ಥೆಯು ಸ್ನೇಹಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ ಅನೇಕ ಉದ್ಯೋಗವನ್ನು ಹೊಂದಿರುವ ಸದಸ್ಯರು ಒಟ್ಟಾಗಿ ಸೇರಿ ತಮ್ಮ ಸ್ನೇಹ ಭಾಂದವ್ಯವನ್ನು ಬೆಳೆಸಿಕೊಳ್ಳುವ ಒಂದು ವೇದಿಕೆ ಈ ರೋಟರಿ ಸಂಸ್ಥೆ. ಆದ್ದರಿಂದ ಪ್ರತಿಯೊಬ್ಬ ಸದಸ್ಯರು ತಮ್ಮ ಆತ್ಮೀಯ ಗೆಳೆಯನೊಬ್ಬನನ್ನು ವರ್ಷದಲ್ಲಿ ಒಮ್ಮೆ ರೋಟರಿ ಸದಸ್ಯನನ್ನಾಗಿ ಮಾಡಿದಲ್ಲಿ ರೋಟರಿಯು ಬೆಳೆಯುತ್ತದೆ ಸ್ನೇಹವೂ ವೃದ್ಧಿಯಾಗುತ್ತದೆ. ಇದೇ ಸಂದರ್ಭದಲ್ಲಿ ವರಕವಿ ಬೇಂದ್ರೆಯವರ ಕುರಿತಾಗಿಯೂ ಸಹ ಮಾತನಾಡ ಮಾತನಾಡಿ ಬೇಂದ್ರೆ ಬಡತನದಲ್ಲಿ ಬೆಂದರೂ ಸಹ ತಮಗೆ ಬಡತನದ ಗರ್ವ ಇದೆ ಎಂದು ಹೇಳಿಕೊಳ್ಳುತ್ತಿದ್ದರು. ಅಪ್ರತಿಮ ರಾಷ್ಟ್ರ ಪ್ರೇಮಿಗಳಾಗಿದ್ದ ಬೇಂದ್ರೆಯವರು ಬ್ರಿಟಿಷರ ವಿರುದ್ಧ ಕವನವನ್ನು ರಚಿಸಿ ಜೈಲು ಶಿಕ್ಷೆ ಅನುಭವಿಸಿದರು. ಸಹ ತಮ್ಮತನವನ್ನು ಬಿಡದ ಒಬ್ಬ ಮಹಾನ್ ಕವಿ ಎಂದು ತಿಳಿಸಿ ಬೇಂದ್ರೆಯವರ ಜೀವನದ ಕೆಲವು ಘಟನೆಗಳನ್ನು ಸ್ವಾರಸ್ಯಕರವಾಗಿ ನಿರೂಪಿಸಿದರು. ರೋಟರಿ ಅಧ್ಯಕ್ಷ ಬಿಎಸ್ ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು ಕಾರ್ಯದರ್ಶಿ ರೇವಣಸಿದ್ದಪ್ಪ ಸ್ವಾಗತಿಸಿ ಕೊನೆಗೆ ಹೊಂದಿಸಿದರು ಈ ಕಾರ್ಯಕ್ರಮ ಅಂತರರಾಷ್ಟ್ರೀಯ ಸ್ನೇಹದ ದಿನಾಚರಣೆ ಅಂಗವಾಗಿ ರೋಟರಿ ಜುಗಲಿ ಆಯೋಜಿಸಿದ ಕಾರ್ಯಕ್ರಮವಾಗಿದ್ದು ಭಾರದ್ವಾಜ್, ಲಕ್ಷ್ಮೀನಾರಾಯಣ್, ವೆಂಕಟೇಶ್ ನಾಯಕ್, ನಾಗರಾಜ್, ವಾಗೇಶ್ ಮುಂತಾದವರು ಇದ್ದರು.
Rotary Jubilee Organization ಗೆಳೆತನಕ್ಕೆ ಬಡವ-ಬಲ್ಲಿದ, ಮೇಲು- ಕೀಳು ಭಾವನೆಗಳು ಅಡ್ಡಬಾರವು- ಎಂ.ಎನ್. ಸುಂದರ ರಾಜ್
Date:
