Friday, December 5, 2025
Friday, December 5, 2025

Department of Labour ಶ್ರಮಿಕ ತಾತ್ಕಾಲಿಕ ವಸತಿಗೃಹ ಸೌಕರ್ಯ ಹೇಗಿದೆ? ಒಂದು ದಿನಕ್ಕೆಎಷ್ಟು ಶುಲ್ಕ‌? ಮಾಹಿತಿಗೆ ಓದಿ

Date:

Department of Labour ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ್ ಎಸ್. ಲಾಡ್ ಇವರು ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಶಿವಮೊಗ್ಗ ತಾಲ್ಲೂಕಿನ ಸಿದ್ಲಿಪುರದಲ್ಲಿ ರೂ.29.5 ಕೋಟಿ‌ ವೆಚ್ಚದಲ್ಲಿ ನೂತನವಾಗಿ‌ ನಿರ್ಮಿಸಲಾಗಿರುವ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆಗೊಳಿಸಿದರು.
ಜಿಲ್ಲೆಯ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಸುರಕ್ಷಿತವಾಗಿ ತಂಗಲು ಅವರಿಗೆ ಈ ವಸತಿ ಸಮುಚ್ಚಯವನ್ನು ಮಂಡಳಿ ವತಿಯಿಂದ ಈ ಸಮುಚ್ಚಯವನ್ನು ನಿರ್ಮಿಸಲಾಗಿದೆ. ೨೦೨೨ ರ ಜೂನ್ ಮಾಹೆಯಲ್ಲಿ‌ಕಾಮಗಾರಿ ಆರಂಭಗೊಂಡಿತ್ತು.
ಶ್ರಮಿಕ ತಾತ್ಕಾಲಿಕ ಸಮುಚ್ಚಯ ವಿವರ:

10 ಎಕರೆ ಪ್ರದೇಶದಲ್ಲಿ ವಸತಿ ನಿಲಯಗಳು ಮತ್ತು ವಸತಿ ಗೃಹಗಳನ್ನು‌ನಿರ್ಮಿಸಲಾಗಿದೆ.
ಒಟ್ಟು 03 ವಸತಿ ನಿಲಯ ಬ್ಲಾಕ್ಗಳು ಇದ್ದಯ, ಪ್ರತಿ ಬ್ಲಾಕ್ ನಲ್ಲಿ 11 ಡಾರ್ಮಿಟರಿಗಳಿವೆ. ಪ್ರತಿ ಡಾರ್ಮೆಟರಿಯಲ್ಲಿ 24 ವಸತಿ ಸಾಮರ್ಥ್ಯ ಇದೆ. ಪ್ರತಿ ಬ್ಲಾಕ್ ನ ವಸತಿ ಸಾಮರ್ಥ್ಯ 264 ಇದ್ದು ಒಟ್ಟು 03 ಬ್ಲಾಕ್ ಗಳ ವಸತಿ ಸಾಮರ್ಥ್ಯ 792 ಇದೆ.
ಹಾಗೂ 03 ವಸತಿ ಗೃಹ ಬ್ಲಾಕ್ ಗಳನ್ನು ನಿರ್ಮಿಸಿದ್ದು, ಪ್ರತಿ ಬ್ಲಾಕ್ ನಲ್ಲಿ 12 ಫ್ಲಾಟ್ ಗಳು, ಒಟ್ಟು 36 ಫ್ಲಾಟ್ ಗಳು, 144 ವಸತಿ ಸಾಮರ್ಥ್ಯ ಇದ್ದು, 01ಬಿಹೆಚ್ ಕೆವಿಸ್ತೀರ್ಣ 400 ಚ. ಅಡಿ ಇದೆ.
ತಾತ್ಕಾಲಿಕ ವಸತಿ ಸಮುಚ್ಚಯದಲ್ಲಿ
ಕಾರ್ಮಿಕರು ಅಡುಗೆ ಮಾಡಲು ಅನುಕೂಲವಾಗುವಂತೆ ಡಾರ್ಮಿಟರಿಯಲ್ಲಿ ಸುಸಜ್ಜಿತವಾದ ಅಡುಗೆ ಮನೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬಿಸಿ ನೀರಿಗಾಗಿ ಸೋಲಾ‌ರ್ ಪ್ಯಾನಲ್‌ ವ್ಯವಸ್ಥೆ ಇದೆ.
ಡಾರ್ಮಿಟರಿಗಳಲ್ಲಿ 02 ಹಂತದ ಬಂಕರ್ ಬೆಡ್ ಗಳನ್ನು ನೀಡಲಾಗಿರುತ್ತದೆ. ಆವರಣದಲ್ಲಿ ಆಡಳಿತ ಕಚೇರಿ ಇದೆ.
ವಸತಿ ಸೌಕರ್ಯ ಪಡೆಯಲು ಒಂದು ದಿನಕ್ಕೆ ರೂ.50/-ಗಳ ಶುಲ್ಕವನ್ನು ವಿಧಿಸಲಾಗುವುದು.
ಸಚಿವರು ವಸತಿ ಸಮುಚ್ಚಯವನ್ನು‌ ಲೋಕಾರ್ಪಣೆಗೊಳಿಸಿದ ನಂತರ ಪರಿವೀಕ್ಷಿಸಿದರು. ಈ ವೇಳೆ ಶಾಸಕರಾದ ಎಸ್.ಎನ್ ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ, ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್, ಡಾ.ಧನಂಜಯ ಸರ್ಜಿ, ರಾಜ್ಯ ಭೋವಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್, ಇತರೆ ಮುಖಂಡರು, ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...