gramina saksharatha scheme ಮಕ್ಕಳ ಆರೋಗ್ಯದ ದೃಷ್ಠಿಯಿಂದ ಮಳೆ ಮತ್ತು ಚಳಿಗಾಲದಲ್ಲಿ ಉಪಯೋಗಕ್ಕೆ ಬರಲಿ ಎಂಬ ಉದ್ದೇಶದಿಂದ ಉತ್ತಮ ಗುಣಮಟ್ಟದ ಸ್ವೆಟರ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್ ಹೊಸೂರು ಹೇಳಿದರು.
ತಾಲೂಕಿನ ಗೆಂಡ್ಲ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೇಂದ್ರ ಸರ್ಕಾರದ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಕೇಂದ್ರ ಸರ್ಕಾರದ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಮಕ್ಕಳಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಸ್ವೆಟರ್‌ಗಳನ್ನು ವಿತರಿಸಲಾಗುತ್ತಿದೆ. ಇದೊಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈಗಾಗಲೇ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಯ ಒಂದರಿAದ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸಲಾಗುತ್ತಿದೆ ಎಂದರು.
gramina saksharatha scheme ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅರುಣ್, ಶಾಲಾ ಮುಖ್ಯಶಿಕ್ಷಕ ಜಿ.ಎಂ. ಶಿವಕುಮಾರ, ಶಿಕ್ಷಕರಾದ ಎಚ್.ಪಿ. ಯಶೋಧ, ಜೆ. ಅರುಂಧತಿ, ಗ್ರಾಮದ ಮುಖಂಡರಾದ ರಾಮಪ್ಪ ಜಡ್ಡಿಹಳ್ಳಿ, ಸಂತೋಷ್, ಚನ್ನಪ್ಪ, ಮಹೇಶ್, ಪರಶುರಾಮ್, ಬಸವರಾಜ್ ಇತರಿದ್ದರು.
gramina saksharatha scheme ಮಕ್ಕಳಿಗೆ ಉತ್ತಮ ಗುಣಮಟ್ಟದ ಸ್ವೆಟರ್ ವಿತರಿಸಲಾಗುತ್ತಿದೆ- ಜಗದೀಶ್ ಹೊಸೂರು
Date:
