Karnataka State Bioenergy Development Board ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾನ್ಯ ಅಧ್ಯಕ್ಷರಾದ ಶ್ರೀ ಎಸ್ ಈ ಸುಧೀಂದ್ರ ಅವರು ದಿನಾಂಕ 2.08.2025 ರಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು ಹಾಗೂ ಜವಹರಲಾಲ್ ನೆಹರು ಕಾಲೇಜ್ ಆಫ್ ಇಂಜಿನಿಯರಿಂಗ್, ಶಿವಮೊಗ್ಗ ಅವರ ಸಹಯೋಗದಲ್ಲಿ ಆಯೋಜಿಸಲಾಗಿರುವ 48 ನೇ ಆಯೋಜಿಸಲಾಗಿರುವ 48 ನೇ ಸ್ಟೂಡೆಂಟ್ ಪ್ರಾಜೆಕ್ಟ್ ಪ್ರೋಗ್ರಾಮ್(SPP) ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಈ ಸಮಾರೋಪ ಕಾರ್ಯಕ್ರಮಕ್ಕೆ
ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿರುವುದು ಹಾಗೂ ಇದೇ ಸಂದರ್ಭದಲ್ಲಿ ಮಂಡಳಿಯ ಬಿ ಆರ್ ಐ ಡಿ ಸಿ ಕೇಂದ್ರದಲ್ಲಿ ಅಂತರರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯನ್ನು ಜೈವಿಕ ಇಂಧನ ಸಸಿಗಳನ್ನು ನೀಡುವುದರ ಮೂಲಕ ಹಾಗೂ ವಾಹನಗಳಿಗೆ ಬಯೋ ಡೀಸೆಲ್ ಹಾಕುವುದರ ಮೂಲಕ ಆಚರಣೆ ಮಾಡಿದ್ದಕ್ಕೂ ಧನ್ಯವಾದಗಳನ್ನು ತಿಳಿಸಿದರು.
ಜವಹರಲಾಲ್ ನೆಹರು ಕಾಲೇಜ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ಬಗ್ಗೆ ಮಾತನಾಡುತ್ತಾ, ಈ ತಾಂತ್ರಿಕ ಸಂಸ್ಥೆ ಸ್ವಾತಂತ್ರ್ಯ ಪೂರ್ವ1946 ರಲ್ಲಿ ಪ್ರಾರಂಭವಾಗಿದ್ದು,44 ವರ್ಷಗಳ ಇತಿಹಾಸವನ್ನು ಹೊಂದಿದೆ. ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯದಡಿ ಬರುವ 233 ಕಾಲೇಜುಗಳ ಪೈಕಿ 5ನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇದೇ ಸಂದರ್ಭದಲ್ಲಿ ಜೈವಿಕ ಇಂಧನ ಪಿತಾಮಹ ಸರ್ ರುಢಾಲ್ಪ್ ಡೀಸೆಲ್ ಅವರ ನೆನಪಿನಲ್ಲಿ ಪ್ರತಿವರ್ಷ ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುತ್ತಿರುವ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಗೆ, ಜೆಎನ್ಸಿಯ ಬಿಆರ್‌ಐಡಿಸಿ ಕೇಂದ್ರದಲ್ಲಿ ಜೈವಿಕ ಇಂಧನ ಸಸಿಗಳನ್ನು ನೆಡುವುದು, ವಾಹನಗಳಿಗೆ ಜೈವಿಕ ಇಂಧನ ಹಾಕುವುದರ ಮೂಲಕ ಚಾಲನೆ ನೀಡಿರುವುದು ನನಗೆ ಸಂತೋಷದ ಹಾಗೂ ಹೆಮ್ಮೆಯ ವಿಚಾರವಾಗಿದೆ.
01.8 .2025 , ರಂದು ರಾಜ್ಯದ ವಿವಿಧ ಇಂಜಿನಿಯರಿಂಗ್ ಸಂಸ್ಥೆಗಳ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆಗಳ ವಿದ್ಯಾರ್ಥಿಗಳು ಮಂಡಿಸಿರುವ ಸ್ಟೂಡೆಂಟ್ ಪ್ರಾಜೆಕ್ಟ್ ಗಳು, ಎಕ್ಸಿಬಿಷನ್ ಹಾಗೂ ಪೋಸ್ಟರ್ ಪ್ರೆಸೆಂಟೇಶನ್ ಗಳ ಮೌಲ್ಯಮಾಪನ ಕಾರ್ಯ ಮುಗಿದಿದ್ದು, ಇಂದು ಈ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಹಾಗೂ ಪ್ರಶಸ್ತಿ ಪತ್ರಗಳ ವಿತರಣೆ ಅಂತಿಮ ಘಟ್ಟದ ಕಾರ್ಯಕ್ರಮ ಜರಗುತ್ತಿದ್ದು, ಈ ರಾಜ್ಯ ಮಟ್ಟದ ವಿಜ್ಞಾನ ಮತ್ತು ತಾಂತ್ರಿಕತೆಯ ಪ್ರದರ್ಶನವು ಮಹತ್ತರ ಮತ್ತು ಇಂದಿನ ಅವಶ್ಯಕತೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಲಿದೆ ಎಂದು ನಂಬಿದ್ದೇನೆ. ಈ ಕಾರ್ಯಕ್ರಮಕ್ಕೆ ಅಸ್ಸಾಂ, ಕೇರಳ ರಾಜ್ಯಗಳ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಗಳಿಂದ ವಿಜಯ್ ಕೃಷ್ಣ ಮಲ್ಲೋತರ, ಇಬ್ರಾಹಿ ಇಬ್ರಾಹಿಂ ಬತ್ತಿಸ್ ಈ ಸಂದರ್ಭದಲ್ಲಿ ಸ್ವಾಗತಿಸಿ ಅಭಿನಂದಿಸಿದರು.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ವಿಜ್ಞಾನ ಮತ್ತು ತಾಂತ್ರಿಕತೆಯ ಅಭಿವೃದ್ಧಿ ರಾಜ್ಯದ ಎಲ್ಲಾ ರಂಗಗಳಲ್ಲಿನ ಮುಂದುವರಿಕೆಗೆ ಅವರ ದೂರ ದೃಷ್ಟಿ ಕಾರಣ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯವರೇ ಆದ ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರ ಆಕಾಂಕ್ಷೆ ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳಲ್ಲಿ ವಿಜ್ಞಾನ ಮತ್ತು ತಾಂತ್ರಿಕತೆಯ ಕುರಿತು ಆಸಕ್ತಿ ಬೆಳೆಸುವುದಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು 2010 – 11ರಿಂದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯೊಂದಿಗೆ ಕೈಜೋಡಿಸಿದ್ದು , ಒಡಂಬಡಿಕೆ ಮೂಲಕ ಕೆ ಎಸ್ ಸಿ ಎಸ್ ಟಿ ಬಯೋಫಿಯಲ್ ಸೆಲ್ ನಿರಂತರವಾಗಿ ಮಂಡಳಿಯ ಸಹಯೋಗದಲ್ಲಿರುವುದು ಹೆಮ್ಮೆಯ ಮತ್ತು ವಿಜ್ಞಾನ ಮತ್ತು ತಾಂತ್ರಿಕತೆಗೆ ಆದ್ಯತೆ ನೀಡಿರುವುದು ಪ್ರಮುಖ ಅಂಶವಾಗಿದೆ. ಮಂಡಳಿ ಇದುವರೆಗೆ ಕೆ ಎಸ್ ಸಿ ಎಸ್ ಟಿ ಗೆ 1.50 ಕೋಟಿಗೂ ಹೆಚ್ಚಿನ ಅನುದಾನವನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ವಿಜ್ಞಾನ ಮತ್ತು ತಾಂತ್ರಿಕ ಪ್ರಾಜೆಕ್ಟ್ ಗಳ ಅನುಷ್ಠಾನಕ್ಕಾಗಿ ಒದಗಿಸಲಿದೆ ಎಂದು ಈ ಸಂದರ್ಭದಲ್ಲಿ ಹೇಳಬಯಸಿದ್ದೇನೆ. ಎಸ್ ಸಿ ಎಸ್ ಟಿ ಹಾಗೂ ಕೆ ಎಸ್ ಬಿ ಡಿ ಬಿ ಒಂದೇ ಫ್ಯಾಮಿಲಿಯಂತೆ ಜೈವಿಕ ಇಂಧನ ಕಾರ್ಯಕ್ಷೇತ್ರಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತಾ ಕ್ರಿಯಾಶೀಲವಾಗಿ ಮುಂದುವರಿಯುತ್ತಿರುವುದನ್ನು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ನಾನು ಹೇಳಲೇಬೇಕಾದ ಹಾಗೂ ಅಭಿನಂದಿಸಬೇಕಾದ ವಿಷಯವಾಗಿದೆ.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ತಮಗೆಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ ಕ್ರಮಗಳ ಕುರಿತು ಅರಿವು, ಜಾಗೃತಿ ಮೂಡಿಸಲು ಕಾರ್ಯಾಗಾರಗಳು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳು, ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿ ಆರ್ ಐ ಡಿ ಸಿ ಕೇಂದ್ರಗಳು, ನಾಲ್ಕು ಕಂದಾಯ ವಿಭಾಗಗಳಲ್ಲಿ ಜೈವಿಕ ಇಂಧನ ಉದ್ಯಾನಗಳು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಜೈವಿಕ ಇಂಧನ ಸಂಶೋಧನೆ ಮತ್ತು ಗುಣಮಟ್ಟ ಖಾತ್ರಿ ಪ್ರಯೋಗ ಶಾಲೆ, 12 ಜಿಲ್ಲೆಗಳಲ್ಲಿ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಸಹಯೋಗ ಮತ್ತು ಅತಿ ಮುಖ್ಯವಾಗಿ ವಿಜ್ಞಾನ ಮತ್ತು ತಾಂತ್ರಿಕತೆಯ ವಿಭಾಗದಲ್ಲಿ ಕೆ ಎಸ್ ಸಿ ಎಸ್ ಟಿ ಯೊಂದಿಗೆ ಒಡಂಬಡಿಕೆ ತಮಗೆಲ್ಲರಿಗೂ ತಿಳಿದ ವಿಷಯವಾಗಿದೆ. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು 2010 – 11ರಿಂದ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಂಶೋಧನೆ ಕೈಗೊಂಡು, ಸಂಶೋಧನೆಗಳ ಪ್ರಬಂಧಗಳನ್ನು ಮಂಡಿಸಲು, ಎಕ್ಸಿಬಿಷನ್ ಹಾಗೂ ಪೋಸ್ಟರ್ ಗಳನ್ನು ಪ್ರದರ್ಶಿಸಲು ಸಹಕಾರ ನೀಡುತ್ತಾ ಬಂದಿದೆ.
ಇದುವರೆಗೂ ಸುಮಾರು 500ಕ್ಕೂ ಹೆಚ್ಚಿನ ವಿಜ್ಞಾನ ಮತ್ತು ತಾಂತ್ರಿಕತೆಯ ಪ್ರಬಂಧ ಗಳು ಮಂಡನೆಯಾಗಿದ್ದು, ನೂರಕ್ಕೂ ಹೆಚ್ಚಿನ ಎಕ್ಸಿಬಿಷನ್ ಮತ್ತು ಪೋಸ್ಟರ್ ಪ್ರೆಸೆಂಟೇಶನ್ಗಳಾಗಿರಬಹುದು ವಿದ್ಯಾರ್ಥಿಗಳು ಜೈವಿಕ ಇಂಧನ ಕ್ಷೇತ್ರದಲ್ಲಿ ತೋರಿಸಿರುವ ಅಪಾರ ಆಸಕ್ತಿ ಮತ್ತು ಜಾಗತಿಕ ಮಟ್ಟದಲ್ಲಿ ಇಂಧನ ಕ್ಷೇತ್ರದಲ್ಲಿ ಜೈವಿಕ ಇಂಧನಗಳು ತನ್ನದೇ ಆದ ಪ್ರಭಾವ ಬೀರಲು ಕೊಡುಗೆ ನೀಡಿವೆ ಎಂದರೆ ತಪ್ಪಾಗಲಾರದು.
ಜವಾಹರ್ ಲಾಲ್ ನೆಹರು ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಶಿವಮೊಗ್ಗ ಜಿಲ್ಲೆಯ ಜೈವಿಕ ಇಂಧನ ಮಾಹಿತಿ ಸಂಶೋಧನೆ ಮತ್ತು ಪ್ರಾತ್ಯಕ್ಷಿಕೆ ಕೇಂದ್ರವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರು ಕಂದಾಯ ವಿಭಾಗದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಶಿವಮೊಗ್ಗದ ಇರುವಕ್ಕಿಯಲ್ಲಿ 50 ಎಕರೆ ಪ್ರದೇಶದಲ್ಲಿ ಜೈವಿಕ ಇಂಧನ ಉದ್ಯಾನವನ ಸ್ಥಾಪಿಸಲಾಗಿದೆ. ಶಿವಮೊಗ್ಗದಲ್ಲಿ ಐ ಡಿ ಸಿ ಕೇಂದ್ರ ಇನ್ನೊಂದು ಜೈವಿಕ ಇಂಧನ ಉದ್ಯಾನ ಗಳು ಕಾರ್ಯನಿರ್ವಹಿಸುತ್ತಿದ್ದು ಜೈವಿಕ ಇಂಧನ ಕ್ಷೇತ್ರದ ಸಮಗ್ರ ಪರಿಚಯ ಮಾಡಿಕೊಡುವಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲು ಸಂತೋಷಪಡುತ್ತೇನೆ.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿ ಕಳೆದ ಒಂದು ಸಾಲಿನಲ್ಲಿ ಜೈವಿಕ ಇಂಧನ ಕ್ಷೇತ್ರದ ಉನ್ನತೀಕರಣ ಹಾಗೂ ವಾಣಿಜ್ಯೀಕರಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು ಮುಂದಿನ ವರ್ಷದಲ್ಲಿ ಈ ಎಲ್ಲಾ ಕಾರ್ಯ ಯೋಜನೆಗಳು ಅನುಷ್ಠಾನಗೊಂಡು ಕರ್ನಾಟಕ ರಾಜ್ಯವು ಇಡೀ ರಾಷ್ಟ್ರದಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಜೈವಿಕ ಇಂಧನ ಕ್ಷೇತ್ರದ ಮಾದರಿಯಾಗುವ ನಿಟ್ಟಿನಲ್ಲಿ ಕಾರ್ಯನಿರತನಾಗಿದ್ದು ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ, ತಾಂತ್ರಿಕ ಸಂಸ್ಥೆಗಳ, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ, ವಿಜ್ಞಾನ ಕೇಂದ್ರಗಳ ಸಹಕಾರವು ಈ ಜೈವಿಕ ಇಂಧನ ಮಿಷನ್ ನಲ್ಲಿ ಕೈಜೋಡಿಸಬೇಕೆಂದು ತಮ್ಮೆಲ್ಲರನ್ನು ಆಹ್ವಾನಿಸುತ್ತಿದ್ದೇನೆ.
ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಹಲವಾರು ನೂತನ ಕಾರ್ಯಯೋಜನೆಗಳ ಮೂಲಕ ಜೈವಿಕ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯ ಮೂಲಸೌಕರ್ಯಗಳ ಸೃಜನೆ, ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಸಹಯೋಗ, ವಿಷಯ ಪರಿಣಿತರು, ತಾಂತ್ರಿಕ ತಜ್ಞರು, ಸಲಹೆಗಾರರು, ವಿವಿಧ ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂರ್ಕಿಣಗಳು, ದೇಶ, ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸರ್ಕಾರಗಳೊಂದಿಗೆ ನಡೆಸಿರುವ ಚರ್ಚೆಗಳ ಕುರಿತು ವಿವರಣೆ ನೀಡಿದರು. ಪ್ರಸ್ತಾಪಿತ ನೂತನ ಜೈವಿಕ ಇಂಧನ ನೀತಿಯ ಮುಖ್ಯ ಉದ್ದೇಶಗಳು, ಗುರಿಗಳು ಹಾಗೂ ಮುಂದಿನ 05 ವರ್ಷಗಳಲ್ಲಿ ಜೈವಿಕ ಇಂಧನ ಕ್ಷೇತ್ರದ ಬೆಳವಣಿಗೆ ಕುರಿತು ಪರಿಚಯಿಸಿ, ಉದ್ದೇಶಿತ ಜೈವಿಕ ಇಂಧನ ನೀತಿಯು ಪ್ರಮುಖವಾಗಿ ಕೈಗಾರಿಕರಣಕ್ಕೆ ಒತ್ತು ನೀಡುವುದು ಹಾಗೂ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ವಿವಿಧ ಜೈವಿಕ ಇಂಧನ ಉತ್ಪಾದನಾ ಘಟಕಗಳ ಆರಂಭಕ್ಕೆ ಅವಕಾಶಗಳಿರುವುದನ್ನು ಇರುವುದನ್ನು ಪ್ರತಿಪಾಧಿಸಿದರು. ಪ್ರಸ್ತುತ ಕೇಂದ್ರ ಸರ್ಕಾರದಿಂದ ಪ್ರಾಯೋಜಿತಗೊಂಡಿರುವ SATAT, ಗೋಬರ್ದನ್ ಯೋಜನೆಗಳಲ್ಲಿ ಉತ್ಪಾದನೆಯಾಗುವ ಜೈವಿಕ ಇಂಧನ ಉತ್ಪನ್ನಗಳ ಕೊಂಡುಕೊಳ್ಳುವ ಒಡಂಬಡಿಕೆ ಸರ್ಕಾರ ಬದ್ದವಾಗಿದೆ.
ಉದ್ದೇಶಿತ ನೂತನ ಜೈವಿಕ ಇಂಧನ ನೀತಿಯ ಕುರಿತು ಪ್ರಸ್ತಾಪಿಸಿ ರಾಜ್ಯದಲ್ಲಿ ಮುಂದಿನ 05 ವರ್ಷಗಳಲ್ಲಿ 01 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದ್ದು, 03 ಲಕ್ಷಕ್ಕೂ ಹೆಚ್ಚಿನ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಸೃಜನೆ, ರೈತರ ಕುಟುಂಬಗಳ ಆದಾಯದ ಹೆಚ್ಚಳ, ಯುವ ಉದ್ದಿಮೆದಾರರಿಗೆ ಪ್ರೋತ್ಸಾಹ ದೊರೆಯಲಿದ್ದು, ಮುಂದಿನ ಐದು ವರ್ಷಗಳು ಕರ್ನಾಟಕ ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರ್ಣಾಯಕವಾಗಲಿದ್ದು, ನೂತನ ಜೈವಿಕ ಇಂಧನ ನೀತಿಯಲ್ಲಿ ಪ್ರಸ್ತಾಪಿಸಿದ ಪ್ರಸ್ತಾಪಿತ ಉದ್ದೇಶಗಳು ಭವಿಷ್ಯ ಭಾರತದ ನಿರ್ಮಾಣದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಲಿವೆ. ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಕೊಡುಗೆಯು ರಾಷ್ಟ್ರವನ್ನು ವಿಶ್ವದಲ್ಲಿ ಮೂರನೇ ಆರ್ಥಿಕ ಸ್ಥಾನವನ್ನು ತಲುಪಲು ತನ್ನದೇ ಆದ ಕೊಡುಗೆಯನ್ನು ನೀಡಲಿದೆ ಎಂದು ಆಶಿಸಿದರು.
ಇಂದಿನ ಈ ಸಮಾರೋಪ ಸಮಾರಂಭದಲ್ಲಿ ಎಸ್.ಎನ್. ನಾಗರಾಜ, ಪ್ರೊ. ಅಶೋಕ್ ಎಂ ರಾಯಚೂರ್, ಕಾರ್ಯದರ್ಶಿಗಳು, ಕೆ ಎಸ್ ಸಿ ಎಸ್ ಟಿ, ಡಾ. ವೈ ವಿಜಯಕುಮಾರ್, ಪ್ರಿನ್ಸಿಪಾಲ್ ಜೆಎನ್ಸ್ ಸಿಇ, ಕೆ.ಎಸ್ .ಬಿ.ಡಿ.ಯ ಯೋಜನಾ ಸಲಹೆಗಾರರಾದ ಡಾ.ದಯಾನಂದ ಜಿ.ಎನ್ . ಕೆ ಎಸ್ ಸಿ ಎಸ್ ಟಿ ಸೀನಿಯರ್ ಪ್ರಾಜೆಕ್ಟ್ ಇಂಜಿನಿಯರ್ ಡಾ. ಕೆ ಎನ್ ವೆಂಕಟೇಶ್, ಜೈರಾಮ್, ಡಾ. ಚೇತನ್ ಎಸ್ ಜಿ, ಡಾ. ರವಿ ಕುಮಾರ್, ಕೋರ್ಡಿನೇಟರ್ ಬಿ ಆರ್ ಐ ಡಿ ಸಿ, ಜೆ ಎಂ ಸಿ ಇ ಬೋಧಕ ಹಾಗೂ ಎಲ್ಲಾ ಸಿಬ್ಬಂದಿಗಳು, ರಾಜ್ಯದ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳಿಂದ ಆಗಮಿಸಿದ್ದ ಪ್ರಾಚಾರ್ಯರು, ವಿದ್ಯಾರ್ಥಿಗಳು, ಪ್ರಾಜೆಕ್ಟ್ ಮೌಲ್ಯಮಾಪಕರು, ಮಾರ್ಗದರ್ಶಕರು ಭಾಗವಹಿಸಿದ್ದರು.
