Scout Scarf Day ಮಾನವೀಯ ಮೌಲ್ಯಗಳನ್ನು ಹೊತ್ತು, ಅಪಘಾತ ನೈಸರ್ಗಿಕ ವಿಕೋಪ, ಯುದ್ಧ ಮುಂತಾದ ಅವಘಡಗಳು ಸಂಭವಿಸಿದಾಗ ಅತ್ಯಂತ ಪ್ರಾಮಾಣಿಕ ಮತ್ತು ಉತ್ಸಾಹಿ ಸೇವಾ ಕಾರ್ಯ ಮಾಡುವ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಇಂದಿಗೂ ಸಹ ಪ್ರಸ್ತುತ ಹಾಗೂ ಮಾದರಿಯಾಗಿವೆ ಎಂದು ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಅವರು ನುಡಿದರು. ಅವರು ಶಿವಮೊಗ್ಗ ನಗರದ ಬಿ. ಹೆಚ್. ರಸ್ತೆಯಲ್ಲಿ ಇರುವ ಸ್ಕೌಟ್ಸ್ ಭಾವನದಲ್ಲಿ ವಿಶ್ವ ಸ್ಕೌಟ್ಸ್ ಶಿರೋ ವಸ್ತ್ರ ದಿನ ಮತ್ತು ಸ್ಕೌಟ್ಸ್ ಸನ್ ರೈಸ್ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿವರ್ಷ ಆಗಸ್ಟ್ ಒಂದರಂದು ಸ್ಕೌಟ್ ಸ್ಕಾರ್ಫ್ ಡೇ ಮತ್ತು ಸ್ಕೌಟಿಂಗ್ ಸನ್ರೈಸ್ ಡೇ ಆಚರಿಸಲಾಗುತ್ತದೆ. ಒಮ್ಮೆ ಸ್ಕೌಟ್ ಚಳುವಳಿಯಲ್ಲಿ ತೊಡಗಿಕೊಂಡರೆ ಅವರು ಯಾವಾಗಲೂ ಸ್ಕೌಟ್ ಆಗಿರುವವರು ಎಂದು ನುಡಿದರು. 1907ರಲ್ಲಿ ಬ್ರೌನ್ಸಿ ದೀಪದಲ್ಲಿ ನಡೆದ ಮೊದಲ ಸ್ಕೌಟ್ ಕ್ಯಾಂಪಿನಲ್ಲಿ ಕೇವಲ 20 ಮಕ್ಕಳೊಂದಿಗೆ ಪ್ರಾರಂಭವಾದ ಈ ಚಳುವಳಿ ಇಂದು ನೂರಾ ಅರವತ್ತಕ್ಕಿಂತ ಹೆಚ್ಚು ದೇಶದಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ ಎಂದು ನುಡಿದರು ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ರಾಜೇಶ್ ಅವಲಕ್ಕಿ ಅವರು ಮಾತನಾಡುತ್ತಾ ಸಹಜವಾಗಿ ಸ್ಕಾರ್ಫ್ ಕೇವಲ ಒಂದು ಸಂಕೇತವಾಗಿದೆ ಆದರೆ ಸ್ಕೌಟ್ಸ್ ಭರವಸೆ ಮತ್ತು ಜಗತ್ತನ್ನು ನಮಗಿಂತ ಸ್ವಲ್ಪ ಉತ್ತಮವಾದ ಸ್ಥಳವಾಗಿ ಬಿಡುವ ನಮ್ಮ ಧ್ಯೇಯಕ್ಕೆ ಬಲವಾದ ಸಂಕೇತವಾಗಿದೆ ಎಂದು ನುಡಿದರು. Scout Scarf Day ಜಿಲ್ಲಾ ಕಾರ್ಯದರ್ಶಿಗಳಾದ ಚಂದ್ರಶೇಖರಯ್ಯನವರು ಸ್ಕೌಟ್ಸ್ ಅಂಡ್ ಗೈಡ್ಸ್ ನಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಹಾಗೆ ವಿಶ್ವದಾದ್ಯಂತ ಇಂದು ನಡೆಯುವ ಈ ಸ್ಕಾರ್ಫ್ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ಸ್ಕೌಟಿಗೆ ಹೆಚ್ಚು ಯುವಜನರನ್ನು ಪರಿಚಯಿಸಲು ಈ ದಿನವೂ ಉತ್ತಮ ಅವಕಾಶವಾಗಿದೆ. ಸ್ಕೌಟ್ಸ್ ಗಳ ಪೋಷಕರು ಸಹೋದರರು ಮತ್ತು ಸಹೋದರಿಯರನ್ನು ಚಟುವಟಿಕೆಗಳಲ್ಲಿ ಭಾಗವಹಿಸಲು ಯುವಜನರನ್ನು ಸ್ಕೌಟಿಂಗಿಗೆ ಸೇರಲು ಆಹ್ವಾನಿಸೋಣ ಹಾಗೆ ಸೂರ್ಯೋದಯ ದಿನವನ್ನು ಆಚರಿಸುವ ಮೂಲಕ ಸ್ವಾಸ್ಥ ಸಮಾಜ ಕಟ್ಟೋಣ ಎಂದು ನುಡಿದರು. ಕಾರ್ಯಕ್ರಮದಲ್ಲಿ ಶಾಲಾ ಸ್ಕೌಟ್ – ಗೈಡ್ ಮಕ್ಕಳು, ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಚುಡಾಮಣಿ ಈ ಪವಾರ್. ಜಿ ವಿಜಯಕುಮಾರ್. ಮಲ್ಲಿಕಾರ್ಜುನ್ ಖಾನೂರ್. ರುದ್ರಪ್ಪ ಚೀಲೂರ್, ಚಂದ್ರಶೇಖರ, ದೇವಣ್ಣ, ಸ್ಕೌಟ್ ಶಿಕ್ಷಕ ಶ್ರೀ ರಾಜಕುಮಾರ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Scout Scarf Day ವಿಶ್ವ ಸ್ಕೌಟ್ ಸ್ಕಾರ್ಫ್ ಡೇ, ವಿಶ್ವ ಸೂರ್ಯೋದಯ ದಿನವಿದ್ದಂತೆ- ಶಕುಂತಲಾ ಚಂದ್ರಶೇಖರ್
Date:
