Bapuji Institute of Hi-Tech Education ಆಧುನಿಕ ತಂತ್ರಜ್ಞಾನದ ಸಾಧನ ಸವಲತ್ತುಗಳು ಜಾಗತಿಕ ಮಟ್ಟದ ಸಾಧನೆಗಳನ್ನು ಮಾಡಲು ಪೂರಕವಾಗಿದ್ದು ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳವ ಗುರಿ ಹೊಂದಬೇಕು ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಕರೆ ಕೊಟ್ಟರು.
ಅವರು ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ನ ನೂತನ ಬಿಕಾಂ ವಿದ್ಯಾರ್ಥಿಗಳ ಓರಿಯೆಂಟೇಷನ್ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ‘ಗುರಿ ನಿಶ್ಚಯ ಹಾಗೂ ಯಶಸ್ಸು’ ಎಂಬ ವಿಷಯವಾಗಿ ಮಾತನಾಡುತ್ತಾ ಪಠ್ಯ ವಿಷಯಗಳೊಂದಿಗೆ ಸಮಕಾಲೀನ ವಸ್ತು ಸ್ಥಿತಿಯ ಅರಿವು ಯೋಜನೆಗಳ ರೂಪಿಸುವಿಕೆಗೆ ಅತ್ಯವಶ್ಯ ವಾಗಿದ್ದು ಇದನ್ನು ಪಡೆದುಕೊಳ್ಳಲು ಆಧುನಿಕ ತಂತ್ರಜ್ಞಾನದ ಸಂಪರ್ಕ ಸಾಧನಗಳು ಅನುಕೂಲಕರವಾಗಿವೆ, ಉದ್ಯಮಶೀಲತೆಯ ಕನಸನ್ನು ವಿದ್ಯಾರ್ಥಿ ದೆಸೆಯಿಂದಲೇ ಕಾಣುತ್ತಾ ಓದಿನೊಂದಿಗೆ ಅದರ ಸಾಕಾರಕ್ಕೂ ಯೋಚನೆ ಮತ್ತು ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದರು.
Bapuji Institute of Hi-Tech Education ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ನ ನೂತನ ಬಿಕಾಂ ವಿದ್ಯಾರ್ಥಿಗಳ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥರನ್ನು ಉಪಪ್ರಾಧ್ಯಾಪಕ ಬಿ ಬಿ ಮಂಜುನಾಥ ಸನ್ಮಾನಿಸಿ ಗೌರವಿಸಿದರು.
