Rotary Shimoga ಜ್ಞಾನದ ಜತೆಗೆ ಮಾನಸಿಕ ಸಿದ್ಧತೆಯು ತುಂಬಾ ಮುಖ್ಯ. ಸತತ ಪ್ರಯತ್ನ, ಸಿಲಬಸ್, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಸೇರಿದಂತೆ ಅನೇಕ ಅಂಶಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ತುಂಬಾ ಪ್ರಮುಖವಾದದ್ದು ಎಂದು ಸುಬ್ಬಯ್ಯ ಆಸ್ಪತ್ರೆ ಮನೋವೈದ್ಯಕೀಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ, ಯುಪಿಎಸ್‌ಸಿಯಲ್ಲಿ 615ನೇ ರ‍್ಯಾಂಕ್ ಪಡೆದಿರುವ ಡಾ. ದಯಾನಂದ್ ಸಾಗರ್ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ರೋಟರಿ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಅತ್ಯಂತ ಕಠಿಣವಾಗಿರುವ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮಾನಸಿಕ ಸಿದ್ಧತೆ, ಆತ್ಮವಿಶ್ವಾಸ, ಕಠಿಣ ಪ್ರಯತ್ನ, ಏಕಾಗ್ರತೆ, ಸತತ ಪರಿಶ್ರಮ ತುಂಬಾ ಮುಖ್ಯ. ಇಷ್ಟಪಟ್ಟು ಓದಬೇಕು. ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಲು ಪ್ರತಿ ದಿವಸ ದಿನಪತ್ರಿಕೆಯನ್ನು ಓದುವುದು ತುಂಬಾ ಮುಖ್ಯ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಅತ್ಯಂತ ಕಠಿಣವಾಗಿರುವ ಈ ಪರೀಕ್ಷೆಯಲ್ಲಿ ಕನ್ನಡ ಮೀಡಿಯಂನಲ್ಲಿ ಓದಿ ಯಶಸ್ವಿಯಾಗಿರುವ ಇವರ ಸಾಧನೆ ಅನೇಕ ಯುವಜನರಿಗೆ ಸ್ಪೂರ್ತಿ ಎಂದು ಹೇಳಿದರು.
Rotary Shimoga ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ನೆಪ್ಚೂನ್ ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ.ಬಿ.ಆರ್., ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಮಾಜಿ ಅಧ್ಯಕ್ಷ ಎಚ್.ಎಂ.ಮಧು, ಚಂದ್ರಹಾಸ ಪಿ.ರಾಯ್ಕರ್, ಕೆ.ಬಿ.ರವಿಶಂಕರ್, ಎಂ.ಎಲ್.ಪ್ರತಾಪ್, ಸತೀಶ್ ಚಂದ್ರ, ಮಂಜುನಾಥ್, ಡಾ. ಪರಮೇಶ್ವರ್, ಡಾ. ಪ್ರಜ್ವಲ್, ಅರುಣ್ ದೀಕ್ಷಿತ್, ಪದಾಧಿಕಾರಿಗಳು, ಕ್ಲಬ್ ಸದಸ್ಯರು ಮತ್ತಿತರು ಉಪಸ್ಥಿತರಿದ್ದರು.
