Shimoga News ದೀಪ ಪ್ಲಾಜಾದಲ್ಲಿ ಚಿರಂತನ ಚಿತ್ತಾರ ಹವ್ಯಾಸಿ ಚಿತ್ರಕಲಾ ಶಾಲೆ ಆಯೋಜಿಸಿದ್ದ ಮಕ್ಕಳ ಚಿತ್ರಕಲಾ ಪ್ರದರ್ಶನವನ್ನು ಶಿವಮೊಗ್ಗ ಟೈಮ್ಸ್ ಸಂಪಾದಕ ಎಸ್.ಚಂದ್ರಕಾಂತ್ ಅವರು ಹೂವಿನ ಚಿತ್ರ ಬರೆಯುವುದರ ಮೂಲಕ ಉದ್ಘಾಟಿಸಿ ಮಕ್ಕಳಿಗೆ ಶುಭಕೋರಿದರು.
ಸಾಂಪ್ರದಾಯಿಕ ಚಿತ್ರ ಕಲಾವಿದೆ ಹಾಗೂ ಚಿತ್ರಕಲಾ ಶಾಲೆ ಅಧ್ಯಕ್ಷೆ ಸಿ.ಎಸ್.ಕಾತ್ಯಾಯಿನಿ ಮಾತನಾಡಿ,
ಮಕ್ಕಳ ಚಿತ್ರಕಲಾ ಪ್ರದರ್ಶನ ಅವರ ಜೀವನದಲ್ಲಿ ಒಂದು ಸವಿನೆನಪು. ಪೋಷಕರ ಮಕ್ಕಳಿಗೆ ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ಪಡೆಯಬೇಕು ಎಂದು ತಿಳಿಸಿದರು.
ಪಾಸಿಟಿವ್ ಮೈಂಡ್ ಹಾಸ್ಪಿಟಲ್‌ನ ಮಾನಸಿಕ ತಜ್ಞ ಡಾ. ಅರವಿಂದ್ ಮಾತನಾಡಿ, ಮಕ್ಕಳಲ್ಲಿ ಸಕಾರಾತ್ಮಕ ಆಲೋಚನೆ ಬೆಳೆಸಬೇಕು. ನಿರಂತರ ದೈಹಿಕ ಚಟುವಟಿಕೆ ಅಭ್ಯಾಸ ಮಾಡಬೇಕು. ಮಕ್ಕಳ ಮನಸ್ಸಿನ ಭಾವನೆ, ಮಗುವಿನ ವ್ಯಕ್ತಿತ್ವ, ತಂದೆ ತಾಯಿಯೊಂದಿಗಿನ ಭಾಂದವ್ಯ ಹೀಗೆ ವಿವಿಧ ವಿಷಯಗಳ ಬಗ್ಗೆ ಗಮನ ನೀಡಬೇಕು ಎಂದರು.
ಪ್ರತಿಯೊಂದು ಮಗು ಅರ್ಥೈಸಿಕೊಳ್ಳವ ಬೇರೆ ಬೇರೆ ರೀತಿ ದೃಷ್ಟಿಕೋನಗಳು, ಭಾವನೆಗಳು, ಖಿನ್ನತೆಗಳು ಬೇರೆ ಬೇರೆಯಾಗಿರುತ್ತದೆ. ಇವುಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಮಕ್ಕಳು ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಸೋಲಿಗೆ, ಅವಮಾನಗಳಿಗೆ ಅಂಜಬೇಡಿ, ಕೆಲಸದಲ್ಲಿ ಶ್ರದ್ಧೆ ಇಡಬೇಕು. ಮನೋಶಕ್ತಿ ಬೆಳೆಸಿಕೊಳ್ಳಬೇಕು. ಮಕ್ಕಳ ಮನೋವಿಕಾಸವಾಗಲು ಎಲ್ಲವನ್ನೂ ಅನುಭವಿಸಲು ಬಿಡಬೇಕು ಎಂದು ಹೇಳಿದರು.
Shimoga News ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ್, ರೂಪಾ, ಕವಿತಾ, ಅಕ್ಷತ ಮಸ್ಕಿ, ಕವಿತ ರಾವ್, ಉಮ, ರೋಹಿಣಿ, ಸಾಹಿತ್ಯ, ಸತ್ಶ್ರಶ್ರೀ ಹಾಜರಿದ್ದರು. ಚಿತ್ರಕಲಾ ಪ್ರದರ್ಶನದಲ್ಲಿ ಒಟ್ಟು 50 ಮಕ್ಕಳು ಭಾಗವಹಿಸಿದ್ದರು. 280ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.
ಅತಿಥಿಗಳಿಂದ ಚಿತ್ರ ಕಲಾಕೃತಿಗಳನ್ನು ರಚಿಸಿ ಪ್ರದರ್ಶಿಸಿದ ಎಲ್ಲಾ ಮಕ್ಕಳಿಗೆ ಅಭಿನಂದನಾ ಪತ್ರ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಮಕ್ಕಳು ಸಂಭ್ರಮದಿಂದ ಭಾಗವಹಿಸಿದ್ದರು.
Shimoga News ಮಕ್ಕಳಲ್ಲಿ ಸಕಾರಾತ್ಮಕಆಲೋಚನಾ ವಿಧಾನ ಬೆಳೆಸಬೇಕು- ಮನೋವೈದ್ಯ ಡಾ.ಟಿ.ಅರವಿಂದ್.
Date:
