Rotary Club Shimoga Midtown ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಹಾಗೂ ಇನ್ನಲ್ ವೀಲ್ ನ ವತಿಯಿಂದ
ಹುಲಿ ಮತ್ತು ಸಿಂಹಧಾಮದಲ್ಲಿ ಪರಿಸರ ಜಾಗೃತಿ ಮತ್ತು ಪ್ರಾಣಿಗಳ ಕಲ್ಯಾಣ ಕಾರ್ಯಕ್ರಮ
ಶಿವಮೊಗ್ಗ: ಜಿಟಿಜಿಟಿ ಮಳೆಯ ಹಸಿರು ಹನಿ ನಡುವೆ, ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ವತಿಯಿಂದ “ಪರಿಸರ ಜಾಗೃತಿ ಮತ್ತು ಪ್ರಾಣಿಗಳ ಕಲ್ಯಾಣ ಕಾರ್ಯಕ್ರಮ”ವನ್ನು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಹುಲಿ ದತ್ತು ತೆಗೆದುಕೊಳ್ಳುವುದು ಮತ್ತು ಸಸಿ ನೆಡುವ ಮೂಲಕ ಪ್ರಕೃತಿಗೆ ನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮವು ಗಿಡಕ್ಕೆ ನೀರು ಹಾಕುವ ಸಂಕೇತಾತ್ಮಕವಾಗಿ ವಿದ್ಯುಕ್ತವಾಗಿ ಚಾಲನೆಗೊಂಡಿತು. ಈ ಹಸಿರು ಹಬ್ಬದಲ್ಲಿ ರೋಟರಿ ಬಂಧುಗಳು ಹಾಗೂ ಅತಿಥಿಗಳು ಪ್ರಕೃತಿಗೆ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷರಾದ ಕೆ.ಎಸ್.ವಿಶ್ವನಾಥ ನಾಯಕ ಇವರ ಸಾರಥ್ಯದಲ್ಲಿ ರೋಟರಿ ಕುಟುಂಬ ಹಾಗೂ ಅತಿಥಿಗಳನ್ನು ಸ್ವಾಗತಿಸಿ,ಪ್ರಕೃತಿಯೊಂದಿಗಿನ ಸ್ನೇಹವೇ ಶಾಶ್ವತ ಮಾನವೀಯ ಮೌಲ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐಎಫ್ಎಸ್. ಕಾರ್ಯಕಾರಿ ನಿರ್ದೇಶಕ ಅಮರ್ ಅಕ್ಷರ್ ಮಾತನಾಡಿ, ಗಿಡ ನೆಟ್ಟಾಗ ಸಿಗುವ ತೃಪ್ತಿ, ಪ್ರಾಣಿಗಳಿಗೆ ಆಹಾರ ಕೊಟ್ಟಾಗ ಸಿಗುವ ಆನಂದ ಅಮೂಲ್ಯ. ಆದರೆ ಕಾಡಿನ ಅಂಚಿನ ಪ್ರಾಣಿಗಳಿಗೆ ಮನುಷ್ಯರು ಆಹಾರ ನೀಡುವುದು ಅವರ ನೈಸರ್ಗಿಕ ಜೀವನ ಕ್ರಮವನ್ನು ವ್ಯತ್ಯಾಸಗೊಳಿಸುತ್ತದೆ. ಪ್ರಕೃತಿಯಿಂದಲೇ ಬೇಟೆಯಾಡಿ, ಮರ ಹತ್ತಿ ಹಣ್ಣು ಕಿತ್ತು ತಿನ್ನಬೇಕಾದ ಶಕ್ತಿ–ಚಾತುರ್ಯ ಕುಂದುತ್ತದೆ. ನಿಧಾನವಾಗಿ ಮುಂದಿನ ಪೀಳಿಗೆ ಮರಗಳನ್ನು ಹತ್ತಿ ಹಣ್ಣು ಕಿತ್ತು ತಿನ್ನುವ ಬದಲು, ರಸ್ತೆಬದಿಯಲ್ಲಿ ಕೈ ಚಾಚಿ ಬೇಡುವ ಮಟ್ಟಕ್ಕೆ ಇಳಿಯುವ ದುರಂತ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಕೇವಲ ವರ್ತನೆಯಲ್ಲಿ ಮಾತ್ರವಲ್ಲ, ಅವುಗಳ ಜೀನ್ಸ್‌ಗಳ ಗುಣಾತ್ಮಕ ಶ್ರೇಷ್ಠತೆಯಲ್ಲಿಯೂ ಅಪಾಯಕಾರಿ ಬದಲಾವಣೆ ತರುತ್ತದೆ. ಆದ್ದರಿಂದ ನೈಸರ್ಗಿಕ ಸಮತೋಲನವನ್ನು ಕಾಪಾಡುವುದು ನಮ್ಮ ಪ್ರತಿಯೊಬ್ಬರ ಜವಾಬ್ದಾರಿ ಎಂದು ಎಚ್ಚರಿಸಿದರು.
Rotary Club Shimoga Midtown ರೋಟರಿ ಸದಸ್ಯರನ್ನು ಪ್ರಕೃತಿ ಹಾಗೂ ಪ್ರಾಣಿಗಳ ಸಂರಕ್ಷಣೆಗೆ ಮತ್ತಷ್ಟು ಪ್ರೇರೇಪಿಸಿ, ಒಂದು ಹುಲಿಯನ್ನು ದತ್ತು ಪಡೆಯಲು ರೋಟರಿ ಮುಂದಾಗಬೇಕು ಎಂದು ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ವಿಶ್ವನಾಥ ನಾಯಕ ತಕ್ಷಣವೇ ಒಂದು ಹುಲಿಯನ್ನು ಒಂದು ತಿಂಗಳಿಗೆ ದತ್ತು ಪಡೆದು ಅಗತ್ಯ ವೆಚ್ಚವನ್ನು ಭರಿಸಿದರು. ದತ್ತು ಪ್ರಮಾಣ ಪತ್ರವನ್ನು ಸ್ವೀಕರಿಸಿ ಎಲ್ಲರ ಹೃದಯ ಗೆದ್ದರು.
ಶಿವಮೊಗ್ಗ ಬಯೋ ಡೈವರ್ಸಿಟಿ ಫಾರೆಸ್ಟ್ ಟ್ರಸ್ಟ್ ಕಾರ್ಯದರ್ಶಿ ಆನಂದ್ ಮೂರ್ತಿ.ಎಂ.ಪಿ ಮಾತನಾಡಿ, ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಪರಿಸರ ಸಂರಕ್ಷಣೆಯಲ್ಲಿ ಹಸಿರು ಕ್ರಾಂತಿಯನ್ನು ಮೂಡಿಸುತ್ತಿದೆ. ಸಸಿ ನೆಡುವುದರಿಂದ ಪ್ರಾಣಿಗಳ ದತ್ತು ಯೋಜನೆವರೆಗೂ ನೈಸರ್ಗಿಕ ಸಂಪತ್ತನ್ನು ಉಳಿಸುವಲ್ಲಿ ಇಂತಹ ಸಂಸ್ಥೆಗಳ ಪಾತ್ರ ಅಮೂಲ್ಯ ಎಂದು ಸವಿಸ್ತಾರವಾಗಿ ವಿವರಿಸಿದರು.
ವಲಯ ಸಂರಕ್ಷಣಾಧಿಕಾರಿಯ ನಾಗೇಶ್ ಬಳಗಾರ್, 1998ರಿಂದ ಹುಲಿ–ಸಿಂಹಧಾಮದ ಇತಿಹಾಸ ಹಾಗೂ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳನ್ನು ನೆನಪಿಸಿಕೊಂಡು, ಪ್ರವಾಸಿಗರಿಂದಲೇ ಹಾಗೂ ಅವರ ಸಹಾಯ ಹಸ್ತದಿಂದಲೇ ಈ ಪ್ರಾಣಿಗಳಿಗೆ ಉತ್ತಮ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸ್ಪೂರ್ತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿ.ಎನ್.ಮಲ್ಲೇಶ್ ಇನ್ನರ್ ವೀಲ್ ಅಧ್ಯಕ್ಷೆ ಶೀಲಾ ಸುರೇಶ್, ವಲಯ ಸೇನಾನಿ ಎಸ್.ಪಿ.ಶಂಕರ್, ಪಿ.ಆರ್.ಓ ಸಮೀನಾ, ಮಾಜಿ ಅಸಿಸ್ಟೆಂಟ್ ಗವರ್ನರ್ ಜಗನ್ನಾಥ್, ಆನಂದಮೂರ್ತಿ , ಸದಸ್ಯರಾದ ಬಸವರಾಜ್, ಧನರಾಜ್, ದೇವೇಂದ್ರಪ್ಪ, ಪ್ರತಾಪ್, ಎಂ.ಎಂ.ರವಿ, ಇವರಲ್ಲದೆ ರೋಟೆರಿಯ ಹೊಸ ಸದಸ್ಯರು ಹಾಗೂ ಇನ್ನರ್‌ವೀಲ್ ಸದಸ್ಯರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
