Chitradurga District Police ಚಿತ್ರದುರ್ಗ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ “ನಮ್ಮ ನಡೆ – ಜಾಗೃತಿ ಕಡೆ” ಎಂಬ ಘೋಷಣೆಯಡಿ ದಿನಾಂಕ 25.07.2025 ಮತ್ತು 26.07.2025 ರಂದು ಭರಮಸಾಗರದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು ಜಿಲ್ಲಾ ಸಿವಿಲ್ ನ್ಯಾಯಾಧೀಶರು ಶ್ರೀ ವಿಜಯ್ ಇವರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
ಈ ಕಾರ್ಯಕ್ರಮವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರಂಜನ್ ಕುಮಾರ್ ಬಂಡಾರು (IPS) ಅವರ ನೇತೃತ್ವದಲ್ಲಿ ನಡೆಯಿತು. ಮಹಿಳಾ ಸುರಕ್ಷತೆ, ಸಂಚಾರಿ ಶಿಸ್ತು, ಬಾಲ್ಯ ವಿವಾಹ ತಡೆ, ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧ ಹಾಗೂ ಸೈಬರ್ ಅಪರಾಧಗಳಿಂದ ಎಚ್ಚರಿಕೆ ಮುಂತಾದ ಅಂಶಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವು ಭರಮಸಾಗರದ ಹೆಗ್ಗೆರೆ ರಸ್ತೆಯಲ್ಲಿರುವ ಶ್ರೀ ಎ.ಬಿ.ಟಿ. ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಿರಿಗೆರೆ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ “ಬಾಲ್ಯ ವಿವಾಹ ತಡೆ” ಎಂಬ ನಾಟಕವನ್ನು ಪ್ರದರ್ಶಿಸಿ, ಸಮಾಜಿಕ ಸಂದೇಶವನ್ನು ಸಾರಿದರು.
ಪೊಲೀಸ್ ಇಲಾಖೆ ಆಯುಧ ಮದ್ದುಗೊಂಡುಗಳು, ತಪಾಸಣಾ ಉಪಕರಣಗಳು, ಹಾಗೂ ಪೋಲೀಸ್ ಶ್ವಾನ ದಳದ ಕಾರ್ಯಕ್ಷಮತೆಯ ಪ್ರದರ್ಶನವನ್ನು ಸಾರ್ವಜನಿಕರ ಮುಂದೆ ಉಜ್ವಲವಾಗಿ ನೀಡಿತು.
ಈ ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದರು. ಸಂಚಾರಿ ನಿಯಮಗಳ ಕುರಿತಂತೆ ವಿಶೇಷ ಪ್ರಸ್ತುತಿಯೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
Chitradurga District Police ಕಾರ್ಯಕ್ರಮದ ಕೊನೆಯ ದಿನ ಡಿವೈಎಸ್ಪಿ ಶ್ರೀ ದಿನಕರ್, ಮೈಕ್ -2 ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಈಶ್ವರ ನಾಯಕ್, ಸೈಬರ್ ಇನ್ಸ್ಪೆಕ್ಟರ್ ಶ್ರೀ ವೆಂಕಟೇಶ್, ಎಸ್.ಐ. ಮಂಜುನಾಥ್ (ಚಿತ್ರದುರ್ಗ ರೂರಲ್), ಭರಮಸಾಗರದ ಠಾಣಾಧಿಕಾರಿ ಪ್ರಸಾದ್ ಇವರುಗಳು ಸಮಾರೋಪ ಭಾಷಣ ನೀಡಿ, ಸಾರ್ವಜನಿಕ ಸಭೆಯಲ್ಲಿ ಜನಸಂಪರ್ಕ ಹೊಂದಿದರು.
ಸೈಬರ್ ಕ್ರೈಂ ವಿಭಾಗದ ಅಧಿಕಾರಿ ಶ್ರೀ ವೆಂಕಟೇಶ್ ಅವರು, ಸೈಬರ್ ಅಪರಾಧಗಳ ಕುರಿತು ಮಾಹಿತಿ ನೀಡುತ್ತಾ, ಜನರು ಮೋಸಗಳಿಗೆ ಒಳಗಾಗುತ್ತಾರೆ ಮತ್ತು ಎಚ್ಚರಿಕೆ ಹೇಗೆ ವಹಿಸಬೇಕು ಎಂಬುದನ್ನು ವಿವರಿಸಿದರು.
ಈ ಜಾಗೃತಿ ಕಾರ್ಯಕ್ರಮವು ತಾಲೂಕು ಮಟ್ಟದ ಎಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳುವ ಯೋಜನೆಯ ಭಾಗವಾಗಿದ್ದು, ಭರಮಸಾಗರದಲ್ಲಿ ಯಶಸ್ವಿಯಾಗಿ ಆರಂಭವಾಗಿ ಎರಡು ದಿನ ಯಶಸ್ವಿಯಾಗಿ ಮುಕ್ತಾಯವಾಯಿತು
ಈ ಸಂದರ್ಭದಲ್ಲಿ ಭರಮಸಾಗರ ಮತ್ತು ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರ ಜೊತೆ ಪೊಲೀಸ್ ಇಲಾಖೆ ಜನ ಸಂಪರ್ಕ ಸಭೆಯನ್ನ ಆಯೋಜಿಸಲಾಗಿತ್ತು ಈ ಸಭೆಯಲ್ಲಿ ಭ್ರಮಸಾಗರದ ಅನೇಕ ಸಮಸ್ಯೆಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸುವುದರ ಮೂಲಕ ಅವುಗಳನ್ನ ಗಣನೆಗೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಪೊಲೀಸ್ ಇಲಾಖೆ ಆಶ್ವಾಸನೆ ನೀಡಿತು.
